‘ರಾಮರಸ’ ಟೈಟಲ್ ಪೋಸ್ಟರ್ ಬಿಡುಗಡೆ

‘ಗುರು ದೇಶಪಾಂಡೆ ಪ್ರೊಡಕ್ಷನ್ಸ್’ ಹೊಸ ಸಿನಿಮಾದ ಟೈಟಲ್ ಘೋಷಣೆ
‘ರಾಮರಸ’ ಸಿನಿಮಾಕ್ಕೆ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಾಥ್!
‘ಗುರು ದೇಶಪಾಂಡೆ ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಹಿರಿಯ ನಿರ್ದೇಶಕ ಕಂ ನಿರ್ಮಾಪಕ ಗುರು ದೇಶಪಾಂಡೆ ನಿರ್ಮಿಸುತ್ತಿರುವ ಹೊಸ ಸಿನಿಮಾದ ಟೈಟಲ್ ಶ್ರೀರಾಮ ನವಮಿ ಹಬ್ಬದ ಸಂದರ್ಭದಲ್ಲಿ ಘೋಷಣೆಯಾಗಿದೆ. ಅಂದಹಾಗೇ, ಈ ಹೊಸ ಸಿನಿಮಾಕ್ಕೆ ‘ರಾಮರಸ’ ಎಂದು ಹೆಸರಿಡಲಾಗಿದ್ದು, ‘ರಾಮರಸ’ ಸಿನಿಮಾದ ಟೈಟಲ್ ಹಾಗೂ ಮೋಶನ್ ಪೋಸ್ಟರ್ ಅನ್ನು ನಟ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ G cinemas ಯು-ಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.

ಬಿ. ಎಂ. ಗಿರಿರಾಜ್ ನಿರ್ದೇಶನ ‘ರಾಮರಸ’ ಸಿನಿಮಾ
ಇನ್ನು ‘ರಾಮರಸ’ ಸಿನಿಮಾವನ್ನು ‘ಜಟ್ಟ’ ಸಿನಿಮಾ ಖ್ಯಾತಿಯ ಬಿ. ಎಂ. ಗಿರಿರಾಜ್ ನಿರ್ದೇಶನ ಮಾಡುತ್ತಿದ್ದು, ಭರತ್ ಬಿ. ಜಿ ಈ ಸಿನಿಮಾಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಬಿಡುಗಡೆಯಾಗಿರುವ ‘ರಾಮರಸ’ ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್ ನಲ್ಲಿ ಹಾರರ್ ಮತ್ತು ಕಾಮಿಡಿ ಎಂಟರ್ಟೈನ್ಮೆಂಟ್ ಅಂಶಗಳು ಎದ್ದು ಕಾಣುತ್ತಿದ್ದು, ಸಿನಿಮಾದ ಇತರ ಕಥಾಹಂದರ, ಕಲಾವಿದರು ಮತ್ತು ಇತರ ವಿಷಯಗಳ ಬಗ್ಗೆ ಚಿತ್ರತಂಡ ಹೆಚ್ಚಿನ ಮಾಹಿತಿ ಬಿಟ್ಟುಕೊಟ್ಟಿಲ್ಲ.
https://youtu.be/bbfNUsRVPiU
ಸದ್ಯ ‘ರಾಮರಸ’ ಸಿನಿಮಾದ ಟೈಟಲ್ ಪೋಸ್ಟರ್ ಮತ್ತು ಮೋಶನ್ ಪೋಸ್ಟರ್ ಗಳನ್ನು ಚಿತ್ರತಂಡ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದು, ‘ರಾಮರಸ’ ಟೈಟಲ್ ಮತ್ತು ಮೋಶನ್ ಪೋಸ್ಟರ್ ಮೊದಲ ನೋಟದಲ್ಲೇ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುವಂತಿದೆ.