Street Beat

ರಿಷಿ ಅಭಿನಯದ ‘ರಾಮನ ಅವತಾರ’ ಟ್ರೇಲರ್ ರಿಲೀಸ್

ಪ್ರಾಮಿಸಿಂಗ್ ಆಗಿದೆ ‘ರಾಮನ ಅವತಾರ’ ಟ್ರೇಲರ್…
ಈಗಾಗಲೇ ತನ್ನ ಟೈಟಲ್, ಫಸ್ಟ್ ಲುಕ್,  ಟೀಸರ್, ಹಾಡು ಹಾಗೂ ವಿಭಿನ್ನ ಪ್ರಮೋಷನ್ ವಿಡಿಯೋಗಳ ಮೂಲಕ ಒಂದಷ್ಟು ಸಿನಿಮಾ ಮಂದಿಯ ಗಮನ ಸೆಳೆದಿರುವ ಹೆಚ್ಚಿಸಿರುವ ‘ರಾಮನ ಅವತಾರ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ.
ವಿಭಿನ್ನವಾಗಿದೆ ರಿಷಿ ಹೊಸ ಅವತಾರ
ಟ್ರೇಲರ್ ಬಿಡುಗಡೆ ವೇಳೆ ‘ರಾಮನ ಅವತಾರ’ ಸಿನಿಮಾದ ಬಗ್ಗೆ ಮಾತನಾಡಿದ ನಟ ರಿಷಿ, ‘ಈ ಸಿನಿಮಾ ಒಪ್ಪಿಕೊಳ್ಳಲು ಮುಖ್ಯ ಕಾರಣ ‘ಆಪರೇಷನ್ ಅಲಮೇಲಮ್ಮ’ ಸಿನಿಮಾ. ಆ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಆ ರೀತಿ ಎಂಟರ್ ಟೈನ್ಮೆಂಟ್ ಸಿನಿಮಾ ಮಾಡಿ ಎಂದು ಎಲ್ಲರೂ ಹೇಳುತ್ತಿದ್ದರು. ನನಗೆ ‘ಆಪರೇಷನ್ ಅಲಮೇಲಮ್ಮ’ ಮ್ಯಾಜಿಕ್. ಅದನ್ನು ರಿಪೀಟ್ ಮಾಡುವ ಆಗಿಲ್ಲ. ನೋಡೋಣಾ ಅದು ಸರಳ ಜಾನರ್ ಅಲ್ಲ ಎಂದು ಯೋಚಿಸುತ್ತಿರುವಾಗ, ಅದೇ ಸಮಯದಲ್ಲಿ ಪಂಪಾಪತಿ ಸಿಕ್ಕಿದ್ದರು. ಅವರ ಹಾಸ್ಯ ನನಗೆ ಇಷ್ಟವಾಯ್ತು. ರಾಮಾಯಣ ಇಟ್ಟುಕೊಂಡು ಸಿನಿಮಾ ಮಾಡುವ ಕಥೆ ತಂದರು. 2024 ರಲ್ಲಿ ನಡೆಯುವ ಘಟನೆ ಒಂದಕ್ಕೆ ಈ ಸಿನಿಮಾ ರಾಮಾಯಣ ಮೌಲ್ಯವನ್ನು ತೋರಿಸುತ್ತದೆ. ಇದು ಎಲ್ಲರಿಗೂ ಖುಷಿ ಕೊಡುವ ಸಿನಿಮಾ. ಪ್ರತಿಯೊಬ್ಬರು ತಮ್ಮ ಪಾತ್ರಗಳಿಗೆ ಅದ್ಭುತವಾಗಿ ಜೀವ ತುಂಬಿದ್ದಾರೆ’ ಎಂದರು.
ಅಂದಹಾಗೆ, ಇದೇ ಮೇ‌ 10ರಂದು ‘ರಾಮನ ಅವತಾರ’ ಸಿನಿಮಾ ರಿಲೀಸ್ ಆಗುತ್ತಿದೆ. ಸಿನಿಮಾದ ಬಗ್ಗೆ ಮಾತನಾಡುವ ನಿರ್ದೇಶಕ ವಿಕಾಸ್ ಪಂಪಾಪತಿ, ‘ಈ ಸಿನಿಮಾ ಕ್ಯಾರೆಕ್ಟರ್ ಜರ್ನಿ ಹೇಳುತ್ತಿದ್ದೇವೆ. ರಾಮ ಪಾತ್ರಧಾರಿ ಅವನಿಗೆ ಅವನೇ ಜೆಂಟಲ್ ಮ್ಯಾನ್ ಎಂದು ಹೇಳಿಕೊಂಡು ಓಡಾಡುತ್ತಾ ಇರುತ್ತಾನೆ. ಅವನು ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ? ಅವನ ಜೀವನದಲ್ಲಿ ನಡೆದ ಘಟನೆಗಳೇನು ಅವನನ್ನು ಹೇಗೆ ಬದಲಾಯಿಸುತ್ತದೆ? ‘ರಾಮನ ಅವತಾರ’ ಎಂದು ಯಾಕೆ ಇಟ್ಟಿದ್ದೇವೆ? ರಾಮನ ಹೇಗೆ ಜೆಂಟಲ್ ಮ್ಯಾನ್ ಆಗುತ್ತಾನೆ ಅನ್ನುವುದನ್ನು ಎಂಟರ್ ಟೈನ್ಮೆಂಟ್ ಆಗಿ ಹೇಳಿದ್ದೇವೆ’ ಎಂದು ವಿವರಣೆ ನೀಡಿದರು.
ಎಲ್ಲರ ಲೈಫ್ ನ ರಾಮಾಯಣ ಹೇಳೋಕ್ಕೆ ಬಂದ ರಾಮ…
‘’ರಾಮನ ಅವತಾರ’ ಎಂದು ಹೇಗೆ ಹೆಸರಟ್ಟಿದ್ದೇವೆ ಎಂದರೆ ಎಲ್ಲರ ಲೈಫ್ ನಲ್ಲಿಯೂ ಒಂದಲ್ಲ ಒಂದು ರಾಮಾಯಣ ನಡೆಯುತ್ತದೆ. ಸೀತೆ ತರ ಹೆಂಡತಿ, ಲಕ್ಷ್ಮಣ ರೀತಿ ತಮ್ಮ, ರಾವಣನಿಂದ ಆಗುವ ಸಮಸ್ಯೆ? ಈ ರೀತಿ ಸಮಸ್ಯೆಗಳು ಎಲ್ಲರ ಜೀವನದಲ್ಲಿ ನಡೆಯುತ್ತವೆ. ಆ ಘಟನೆಗಳನ್ನು ಚಿತ್ರದಲ್ಲಿ ತೋರಿಸಲಾಗಿದೆ’ ಎಂಬುದು ಚಿತ್ರತಂಡದ ಒಕ್ಕೊರಲ ಮಾತು.
ಇನ್ನು ಬಹುಕಾಲದ ನಂತರ ನಟಿ ಪ್ರಣೀತಾ ಸುಭಾಷ್, ‘ರಾಮನ ಅವತಾರ’ ಸಿನಿಮಾದ ಮೂಲಕ ಮತ್ತೆ ಸಿನಿಪ್ರಿಯರ ಮುಂದೆ ಬರುತ್ತಿದ್ದಾರೆ. ತಮ್ಮ ಹೊಸ ಸಿನಿಮಾದ ಬಗ್ಗೆ ಮಾತನಾಡಿದ ಪ್ರಣೀತಾ, ‘ಇದೊಂದು ತುಂಬಾ ವಿಶೇಷವಾದ ಸಿನಿಮಾ. ರಾಮಾಯಣ ಎಲ್ಲರಿಗೂ ಗೊತ್ತಿದೆ. ಈ ರಾಮಾಯಣ ಮಾರ್ಡನ್ ಟೇಕ್. ನಾನು ಈ ರೀತಿ ಪ್ರಾಜೆಕ್ಟ್ ಭಾಗವಾಗಿದ್ದು, ಖುಷಿ ಕೊಟ್ಟಿದೆ. ರಾಮಾಯಣ ಬಗ್ಗೆ ಅಂದ ತಕ್ಷಣ ಸಿನಿಮಾ ಒಪ್ಪಿಕೊಂಡೆ. ರಿಷಿ ಬೇರೆ ಅವರ ಚಿತ್ರಗಳನ್ನು ನೋಡಿದ್ದೇನೆ. ಶೂಟಿಂಗ್ ಜರ್ನಿ ತುಂಬಾ ಚೆನ್ನಾಗಿತ್ತು. ಸಿನಿಮಾ ಮತ್ತು ನನ್ನ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗಲಿದೆ’ ಎಂದು ಹೇಳಿದರು.
ಸಿನಿಮಾದ ಮತ್ತೊಬ್ಬ ನಟಿ ಶುಭ್ರ ಅಯ್ಯಪ್ಪ ಮಾತನಾಡಿ, ‘ನಿರ್ದೇಶಕರು ನನ್ನ ಪಾತ್ರದ ಹೇಳಿದಾಗ ನಾನು ಎಕ್ಸೈಟ್ ಆದೆ. ಹಳ್ಳಿ ಹುಡುಗಿ ಪಾತ್ರದಲ್ಲಿ ನನ್ನನ್ನು ನಾನು ನೋಡಲು ಕಾತುರಳಾಗಿದ್ದೇನೆ. ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ’ ಎಂದರು.
ಸದ್ಯ ಬಿಡುಗಡೆಯಾಗಿರುವ ‘ರಾಮನ‌ ಅವತಾರ’ ಟ್ರೇಲರ್ ಪ್ರಾಮಿಸಿಂಗ್ ಆಗಿದೆ. ಟ್ರೇಲರ್ ನಲ್ಲಿ ನಗು, ಅಳು, ಪ್ರೀತಿ-ಪ್ರೇಮ ಎಲ್ಲವನ್ನು ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಈಗಾಗಲೇ ಒಂದಷ್ಟು ವಿಭಿನ್ನ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿರುವ ರಿಷಿ, ಇತ್ತೀಚಿಗೆ ವೆಬ್​ ಸೀರಿಸ್ ಮೂಲಕವೂ ಮೋಡಿ ಮಾಡಿದ್ದರು. ಅವರೀಗ ಮತ್ತೊಂದು ಕಾಮಿಡಿ ಕಥೆ ಹೊತ್ತು ಪ್ರೇಕ್ಷಕರನ್ನು ನಗಿಸಲು ಬರುತ್ತಿದ್ದಾರೆ.
‘ರಾಮನ ಅವತಾರ’ ಸಿನಿಮಾದಲ್ಲಿ ಪ್ರಣೀತಾ ಸುಭಾಷ್ ಹಾಗೂ ಶುಭ್ರ ಅಯ್ಯಪ್ಪ ನಾಯಕಿಯರಾಗಿ ನಟಿಸಿದ್ದಾರೆ. ನಟ ಅರುಣ್ ಸಾಗರ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ‘ರಾಮನ ಅವತಾರ’ ಸಿನಿಮಾಗೆ ವಿಕಾಸ್ ಪಂಪಾಪತಿ ನಿರ್ದೇಶನ ಮಾಡಿದ್ದಾರೆ. ನಿರ್ದೇಶನದಲ್ಲಿ ಇದು ಅವರ ಮೊದಲ ಅನುಭವ. ‘ಆಪರೇಷನ್ ಅಲಮೇಲಮ್ಮ’ ಸಿನಿಮಾ ನಿರ್ಮಾಣ ಮಾಡಿದ್ದ ಅಮರೇಜ್ ಸೂರ್ಯವಂಶಿ ಅವರು ‘ಸ್ಟಾರ್ ಫ್ಯಾಬ್ ಪ್ರೊಡಕ್ಷನ್’​ ಅಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಜಾನರ್‌ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ವಿಷ್ಣುಪ್ರಸಾದ್ ಹಾಗೂ ಸಮೀರ್ ದೇಶಪಾಂಡೇ ಛಾಯಾಗ್ರಾಹಣ ಮಾಡಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ಸಂಯೋಜನೆ ಮಾಡಿದ್ದಾರೆ. ಅಮರನಾಥ್ ಸಂಕಲನ ಚಿತ್ರಕ್ಕಿದೆ. ಒಟ್ಟಾರೆ ಒಂದಷ್ಟು ಸೌಂಡ್ ಮಾಡುತ್ತಿರುವ ‘ರಾಮನ ಅವತಾರ’ ಸಿನಿಮಾ ಹೇಗಿರಲಿದೆ ಎಂಬುದು ಇದೇ 10ಕ್ಕೆ ಗೊತ್ತಾಗಲಿದೆ.

Related Posts

error: Content is protected !!