‘ಅಧಿಪತ್ರ’ ಹೊರಡಿಸಿದ ರೂಪೇಶ್ ಶೆಟ್ಟಿ!! ಸಿನಿಮಾಗೆ ಭರ್ಜರಿ ಡಿಮ್ಯಾಂಡ್…

‘ಅಧಿಪತ್ರ’ ಸಿನಿಮಾದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಸೇಲ್
ರೂಪೇಶ್ ಶೆಟ್ಟಿಯ ʼಅಧಿಪತ್ರʼ ಸಿನಿಮಾದ ಆಡಿಯೋ ಹಕ್ಕು ಖರೀದಿಸಿದ ʼಲಹರಿ ಆಡಿಯೋʼ ಸಂಸ್ಥೆ
ʼಬಿಗ್ ಬಾಸ್ʼ ಖ್ಯಾತಿಯ ರೂಪೇಶ್ ಶೆಟ್ಟಿ ನಟನೆಯ ಬಹು ನಿರೀಕ್ಷಿತ ಸಿನಿಮಾ ʼಅಧಿಪತ್ರʼ ತೆರೆಗೆ ಬರಲು ಸಿದ್ಧವಾಗುತ್ತಿದೆ. 2024 ಬಹು ನಿರೀಕ್ಷಿತ ಸಿನಿಮಾ ಸಾಲಿನಲ್ಲಿ ಗುರುತಿಸಿಕೊಂಡಿರುವ ʼಅಧಿಪತ್ರʼ ಸಿನಿಮಾದ ಕಡೆಯಿಂದ ಹೊಸ ಸುದ್ದಿಯೊಂದು ಈಗ ಹೊರಬಿದ್ದಿದೆ. ಹೌದು, ಈಗಾಗಲೇ ಮೇಕಿಂಗ್ ಹಾಗೂ ಕಂಟೆಂಟ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಈ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ ಸಂಸ್ಥೆ ʼಲಹರಿ ಮ್ಯೂಸಿಕ್ʼ ಖರೀದಿ ಮಾಡಿದೆ. ಈ ಸುದ್ದಿಯನ್ನು ಇದೀಗ ಚಿತ್ರತಂಡವೇ ಖಚಿತಪಡಿಸಿದ್ದು, ಸಿನಿಮಾದ ಆಡಿಯೋ ರೈಟ್ಸ್ ದೊಡ್ಡ ಮೊತ್ತಕ್ಕೆ ಬಿಕರಿಯಾಗಿದೆ ಎಂದು ಹೇಳಿಕೊಂಡಿದೆ.
ಮೇ 10ಕ್ಕೆ ʼಅಧಿಪತ್ರʼ ಟೀಸರ್, ʼಅಧಿಪತ್ರʼ ಸಿನಿಮಾದ ಆಡಿಯೋ ಹಕ್ಕು ʼಲಹರಿʼ ತೆಕ್ಕೆಗೆ…
ಈಗಾಗಲೇ ʼಅಧಿಪತ್ರʼ ಸಿನಿಮಾದ ಶೂಟಿಂಗ್ ಹಾಗೂ ಮೇಕಿಂಗ್ ಎರಡೂ ಒಂದಷ್ಟು ಸಿನಿಮಾ ಮಂದಿಯ ಗಾಮನ ಸೆಳೆದಿದೆ. ಸದ್ಯ ʼಅಧಿಪತ್ರʼ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ಭರದಿಂದ ಸಾಗುತ್ತಿದೆ. ತೆರೆಗೆ ಬರಲು ರೆಡಿಯಾಗುತ್ತಿರುವ ʼಅಧಿಪತ್ರʼ ಸಿನಿಮಾದ ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಇದೇ ಮೇ ತಿಂಗಳ 10ರಂದು ʼಲಹರಿ ಆಡಿಯೋʼ ಯು-ಟ್ಯೂಬ್ ಚಾನೆಲ್ ನಲ್ಲಿ ʼಅಧಿಪತ್ರʼ ಸಿನಿಮಾದ ಮೊದಲ ಝಲಕ್ ಹೊರಬೀಳಲಿದೆ.
ಚಿತ್ರಕ್ಕೆ ಚಯನ್ ಶೆಟ್ಟಿ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಚಿತ್ರ ಆಡ್ ಇಂಡಸ್ಟ್ರಿ ನಲ್ಲಿ ಕ್ರಿಯೇಟಿವ್ ಆಡ್ಸ್ ಮೂಲಕ ಗಮನ ಸೆಳೆದಿದ ಚಯನ್ ಶೆಟ್ಟಿ ಈಗ ಅಧಿಪತ್ರ ಆಕ್ಷನ್ ಕಟ್ ಹೇಳಿದ್ದಾರೆ , ರೂಪೇಶ್ ಗೆ ಜೋಡಿಯಾಗಿ ಗಿಚ್ಚಿ ಗಿಲಿಗಿಲಿ ಖ್ಯಾತಿಯ ಜಾಹ್ನವಿ ಸಾಥ್ ಕೊಟ್ಟಿದ್ದಾರೆ. ಕಾಂತಾರ ಖ್ಯಾತಿಯ ಪ್ರಕಾಶ್ ತುಮಿನಾಡು, ರಘು ಪಾಂಡೇಶ್ವರ್, ಎಂಕೆ ಮಠ, ದೀಪಕ್ ರೈ, ಅನಿಲ್ ಉಪ್ಪಾಲ್, ಕಾರ್ತಿಕ್ ಭಟ್, ಪ್ರಶಾಂತ್ ತಾರಾಬಳಗದಲ್ಲಿದ್ದಾರೆ.
ಸಸ್ಪೆನ್ಸ್ – ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬರುತ್ತಿರುವ ʼಅಧಿಪತ್ರʼ ಸಿನಿಮಾವನ್ನು ʼಕೆ. ಆರ್ ಸಿನಿಕಂಬೈನ್ಸ್ʼ ಬ್ಯಾನರ್‌ನಡಿ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಕಾರ್ತಿಕ್ ಶೆಟ್ಟಿ ಹಾಗೂ ಸತೀಶ್ ಶೆಟ್ಟಿ ʼಅಧಿಪತ್ರʼ ಸಿನಿಮಾದ ಸಹ ನಿರ್ಮಾಣದಲ್ಲಿ ಭಾಗಿಯಾಗಿದ್ದಾರೆ.