Street Beat

‘ವೀರ್’ ಅವತಾರದಲ್ಲಿ ಜೆ.ಕೆ

ಜಯರಾಮ್‌ ಕಾರ್ತಿಕ್‌ (ಜೆ.ಕೆ) ಹೊಸ ಸಿನಿಮಾಕ್ಕೆ ಟೈಟಲ್‌ ಫಿಕ್ಸ್‌

ʼಅಶ್ವಿನಿ ನಕ್ಷತ್ರʼ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರನ್ನು ರಂಜಿಸಿದ್ದ ಜೆ.ಕೆ ಉರೂಫ್‌ ಜಯರಾಮ್‌ ಕಾರ್ತಿಕ್‌ ಆ ಬಳಿಕ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡಿದ್ದರು. ಹಲವು ಸಿನಿಮಾಗಳ ಮೂಲಕ ಕನ್ನಡ ಸಿನಿರಸಿಕರಿಂದಲೂ ಪ್ರೀತಿ ಪಡೆದಿರುವ ಜಯರಾಮ್ ಕಾರ್ತಿಕ್‌ (ಜೆ.ಕೆ) ಇದೀಗ ಸದ್ದಿಲ್ಲದೆ ʼವೀರ್‌ʼ ಎಂಬ ಹೊಸ ಸಿನಿಮಾವೊಂದನ್ನು ಒಪ್ಪಿಕೊಂಡಿದ್ದಾರೆ.

ಮೋಷನ್ ಪೋಸ್ಟರ್ ‘ವೀರ್’ನಾಗಿ ಜೆ.ಕೆ ಎಂಟ್ರಿ

ಜನ್ಮದಿನದ ಪ್ರಯುಕ್ತ ಸಿನಿಮಾದ ವಿಶೇಷ ಮೋಷನ್ ಪೋಸ್ಟರ್

ಈಗಾಗಲೇ ಸದ್ದಿಲ್ಲದೆ ಈ ಸಿನಿಮಾದ ಒಂದಷ್ಟು ಕೆಲಸಗಳು ನಡೆದಿದ್ದು, ಇತ್ತೀಚೆಗೆ ನಟ ಜಯರಾಮ್ ಕಾರ್ತಿಕ್‌ (ಜೆ.ಕೆ) ಅವರ ಜನ್ಮದಿನದ ಪ್ರಯುಕ್ತ ಚಿತ್ರತಂಡ ಸಿನಿಮಾದ ವಿಶೇಷ ಮೋಷನ್ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಜೆ. ಕೆ ಹೊಸ ಸಿನಿಮಾಗೆ ʼವೀರ್ʼ ಎಂಬ ಕ್ಯಾಚಿ ಟೈಟಲ್ ಇಡಲಾಗಿದ್ದು,  ಕ್ರೈಂ- ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾದಲ್ಲಿ ಜೆ. ಕೆ ಔಟ್‌ ಆ್ಯಂಡ್‌ ಔಟ್‌ ಮಾಸ್‌ ಮತ್ತು ಸ್ಟೈಲಿಶ್‌ ಗೆಟಪ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರತಂಡದ ಮೂಲಗಳ ಪ್ರಕಾರ, ಜೆ. ಕೆ ಈ ಸಿನಿಮಾದಲ್ಲಿ ಮೂಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ಎನ್ನಲಾಗುತ್ತಿದೆ.

‘ವೀರ್’ಗಾಗಿ ಯುವ ನಿರ್ದೇಶಕನ ಜೊತೆ ಕೈ ಜೋಡಿಸಿದ ಜೆ.ಕೆ

ಜೆ.ಕೆ ಹೊಸ ಸಿನಿಮಾಗೆ ʼವೀರ್ʼಗೆ ಯುವ ಪ್ರತಿಭೆ ಲೋಹಿತ್ ಆರ್. ನಾಯ್ಕ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅಂದಹಾಗೇ, ಯುವ ಪ್ರತಿಭೆ ಲೋಹಿತ್ ಅವರಿಗಿದು ಚೊಚ್ಚಲ ಪ್ರಯತ್ನ. ʼವೀರ್ʼ ಸಿನಿಮಾ ಮೂಲಕ ಲೋಹಿತ್ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಹರಿ ಸಂತು ಗರಡಿಯಲ್ಲಿ ಒಂದಷ್ಟು ವರ್ಷಗಳ ಕಾಲ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ದುಡಿದಿರುವ ಲೋಹಿತ್ ʼವೀರ್ʼ ಚಿತ್ರದ ಮೂಲಕ ಮೊದಲ ಬಾರಿಗೆ ಸ್ವತಂತ್ರ್ಯ ನಿರ್ದೇಶಕರಾಗಿ ಅದೃಷ್ಟ ಪರೀಕ್ಷೆಗಿಳಿದಿದ್ದಾರೆ.

ʼವೀರ್ʼ ಸಿನಿಮಾದಲ್ಲಿ ಜೆ.ಕೆಗೆ ಜೋಡಿಯಾಗಿ ಪ್ರಣತಿ ನಾಯಕಿಯಾಗಿ ಜೋಡಿಯಾಗಿದ್ದಾರೆ. ಉಳಿದಂತೆ ರೋಚಿತ್, ಮಂಜು ಪಾವಗಡ  ಮತ್ತಿತರರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ʼವೀರ್ʼ ಸಿನಿಮಾವನ್ನು ʼರಾಜರಾಜೇಶ್ವರಿ ಪ್ರೊಡಕ್ಷನ್ʼ ನಡಿ ಗೀತಾ ಜಯಶ್ರೀನಿವಾಸನ್ ಬಂಡವಾಳ ಹೂಡಿ ನಿರ್ಮಿಸುತ್ತಿದ್ದಾರೆ. ಸಿನಿಮಾಕ್ಕೆ ಆರ್. ದೇವೇಂದ್ರ ಛಾಯಾಗ್ರಹಣ, ಆರ್ಯನ್ ಗೌಡ ಸಂಕಲನವಿದೆ. ಸಿನಿಮಾದ ಹಾಡುಗಳಿಗೆ ಧ್ರುವ ಎಂ. ಬಿ ಸಂಗೀತ ಸಂಯೋಜನೆಯಿದ್ದು, ಭೂಷಣ್ ಮಾಸ್ಟರ್ ನೃತ್ಯ ಸಂಯೋಜನೆಯಿದೆ. ಸಿನಿಮಾದ ಹಾಡುಗಳಿಗೆ ಹರಿ ಸಂತು ಸಾಹಿತ್ಯವಿದೆ. ಸದ್ಯ ʼವೀರ್‌ʼ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಇದೇ ವರ್ಷದ ಕೊನೆಯೊಳಗೆ ʼವೀರ್‌ʼ ಸಿನಿಮಾ ತೆರೆಗೆ ಬರುವ ಯೋಜನೆಯಲ್ಲಿದೆ .

Related Posts

error: Content is protected !!