Telewalk

‘ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2’ ಟೀಸರ್‌ ಔಟ್‌…

ʼಅಮೇಜಾನ್‌ ಪ್ರೈಮ್ ವೀಡಿಯೋʼದ ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ ಸೀಸನ್‌-2’ ಟೀಸರ್‌ ಬಿಡುಗಡೆ

ಅತ್ಯಂತ ಜನಪ್ರಿಯ ಸಿರೀಸ್‌ಗಳಲ್ಲಿ ಒಂದಾಗಿರುವ  ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌’ನ ಎರಡನೇ ಸೀಸನ್‌ ಟೀಸರ್ ಇದೇ ಮೇ. 14 ರಂದು ಜಗತ್ತಿನಾದ್ಯಂತ ‘ಪ್ರೈಮ್ ವೀಡಿಯೋ’ದಲ್ಲಿ ಬಿಡುಗಡೆಯಾಗಿದೆ.

ಈಗಾಗಲೇ ʼಅಮೇಜಾನ್‌ ಪ್ರೈಮ್ ವೀಡಿಯೋʼದ ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್: ದಿ ರಿಂಗ್ಸ್ ಆಫ್‌ ಪವರ್ʼ ಮೊದಲ ಸೀಸನ್ ಜಾಗತಿಕವಾಗಿ ಅದ್ಭುತ ಯಶಸ್ಸು ಕಂಡಿದೆ ಮತ್ತು ‘ಪ್ರೈಮ್ ವೀಡಿಯೋ’ದ ಅತ್ಯುನ್ನತ ಒರಿಜಿನಲ್ ಸಿರೀಸ್‌ಗಳಲ್ಲಿ ಒಂದಾಗಿದೆ. ಜಗತ್ತಿನಾದ್ಯಂತ 100 ಮಿಲಿಯನ್‌ಗೂ ಹೆಚ್ಚು ಜನರು ಇದನ್ನು ವೀಕ್ಷಿಸಿದ್ದಾರೆ ಮತ್ತು ಈವರೆಗೆ ಯಾವುದೇ ಇತರ ಕಂಟೆಂಟ್ ಅನ್ನು ಬಿಡುಗಡೆ ಮಾಡಿದಾಗ ಆಗಿದ್ದಕ್ಕಿಂತ ಹೆಚ್ಚು ಪ್ರೈಮ್ ಸೈನ್ ಅಪ್‌ಗಳನ್ನು ಇದು ಕಂಡಿದೆ.

2024 ಆಗಸ್ಟ್ 29 ರಂದು ‘ಅಮೇಜಾನ್‌ ಪ್ರೈಮ್ ವೀಡಿಯೋ’ದಲ್ಲಿ ಎರಡನೇ ಸೀಸನ್ ಪ್ರಸಾರ

2024 ಆಗಸ್ಟ್‌ 29 ರಂದು ‘ಅಮೇಜಾನ್‌ ಪ್ರೈಮ್ ವೀಡಿಯೋ’ದಲ್ಲಿ ಪ್ರಸಾರವಾಗಲಿದೆ. ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌’ನ ಎರಡನೇ ಸೀಸನ್  ಜಾಗತಿಕವಾಗಿ ಅನಾವರಣಗೊಳ್ಳಲಿದೆ  ಎಂಬ ವಿಷಯವನ್ನು ‘ಪ್ರೈಮ್ ವೀಡಿಯೋ’ ಘೋಷಿಸಿದೆ.

ಇನ್ನೊಂದು ವಿಶೇಷವೆಂದರೆ, ಈ ಬಾರಿ ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌’ನ ಎರಡನೇ ಸೀಸನ್‌, ಪ್ರಪಂಚದಾದ್ಯಂತ ಸುಮಾರು 240 ಕ್ಕೂ ಹೆಚ್ಚು ದೇಶಗಳು ಮತ್ತು ಅಲ್ಲಿನ ಹಲವು ಪ್ರಾದೇಶಿಕ ಭಾಷೆಗಳಲ್ಲಿ ಕಾಣಿಸಿಕೊಳ್ಳಲಿದೆ ಎಂದು ‘ಅಮೇಜಾನ್‌ ಪ್ರೈಮ್ ವೀಡಿಯೋ’ ತಿಳಿಸಿದೆ.

ಇನ್ನು ಬಿಡುಗಡೆಯಾಗಿರುವ ‘ದಿ ಲಾರ್ಡ್ ಆಫ್‌ ದಿ ರಿಂಗ್ಸ್‌: ದಿ ರಿಂಗ್ಸ್ ಆಫ್‌ ಪವರ್‌’ನ ಎರಡನೇ ಸೀಸನ್ ಟೀಸರಿನಲ್ಲಿ, ವಿಶ್ವದ ಅದ್ಭುತ ಸಾಹಿತ್ಯಿಕ ವಿಲನ್‌ಗಳಲ್ಲಿ ಒಂದಾದ ಸೌರನ್‌ ಪಾತ್ರದಲ್ಲಿ ಚಾರ್ಲಿ ವಿಕರ್ಸ್‌ ವಾಪಸ್ ಬರುವುದನ್ನು ತೋರಿಸಲಾಗಿದೆ. ಈ ಟೀಸರಿನಲ್ಲಿ ಸಂಪೂರ್ಣ ಅಧಿಕಾರವನ್ನು ತನ್ನದಾಗಿಸಿಕೊಳ್ಳಬೇಕು ಎಂದು ಹೊರಟಿರುವ ಸೌರನ್‌ನ ದುಷ್ಟ ಶಕ್ತಿಯನ್ನು ತೋರಿಸಲಾಗಿದೆ. ದೃಶ್ಯ ವೈಭವಕ್ಕೆ ಹೆಸರಾಗಿರುವ ಈ ಸಿರೀಸ್‌, ಅತ್ಯಂತ ಜನಪ್ರಿಯವಾದ ಹಲವು ಪಾತ್ರಗಳನ್ನು ಒಳಗೊಳ್ಳಲಿರುವ ಸುಳಿವನ್ನೂ ಬಿಟ್ಟುಕೊಡಲಾಗಿದೆ. ಗ್ಯಾಲಾಡ್ರಿಯೆಲ್‌, ಎಲ್ರಾಂಡ್, ಪ್ರಿನ್ಸ್ ಡ್ಯುರಿಯನ್ 4, ಅರಾಂಡಿರ್ ಮತ್ತು ಸೆಲೆಬ್ರಿಂಬೋರ್‌ ಅವರನ್ನು ಈ ಟೀಸರ್‌ ಒಳಗೊಂಡಿದ್ದು, ಈ ಸೀರಿಸ್ ಮೇಲೆ ಮತ್ತಷ್ಟು ನಿರೀಕ್ಷೆಗಳನ್ನು ನೋಡುಗರಲ್ಲಿ ಮೂಡುವಂತೆ ಮಾಡಲು ಯಶಸ್ವಿಯಾಗಿದೆ.

ಟೀಸರ್‌ ಮೇಲೆ ಭಾರತದಲ್ಲೂ ಮೂಡಿದ ನೀರಿಕ್ಷೆ 

‘ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್‌ ಆಫ್ ಪವರ್’ ಎರಡನೇ ಸೀಸನ್‌ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಎಕ್ಸ್‌ಕ್ಲೂಸಿವ್ ಆಗಿ ‘ಪ್ರೈಮ್ ವೀಡಿಯೋ’ದಲ್ಲಿ ಲಭ್ಯವಿರಲಿದೆ. ‘ದಿ ಲಾರ್ಡ್‌ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್’ ಎರಡನೇ ಸೀಸನ್‌ನ ಟೀಸರ್ ಟ್ರೇಲರ್ ಮತ್ತು ಕೀ ಆರ್ಟ್ ಅಸೆಟ್‌ಗಳನ್ನು ನೋಡಲು ಮತ್ತು ಡೌನ್‌ಲೋಡ್ ಮಾಡಲು ಹಾಗೂ ಹೆಚ್ಚುವರಿ ಸಿರೀಸ್ ಮಾಹಿತಿಗಾಗಿ, ‘ಅಮೆಜಾನ್ ಎಂಜಿಎಂ ಸ್ಟುಡಿಯೋಸ್ ಪ್ರೆಸ್’ ಸೈಟ್‌ಗೆ ಭೇಟಿ ನೀಡಬಹುದು.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!