ಲೀಗಲ್-ಥ್ರಿಲ್ಲರ್ ʼದ ಜಡ್ಜ್‌ಮೆಂಟ್ʼ ಟ್ರೇಲರ್ ರಿಲೀಸ್

ಟ್ರೇಲರ್‌ನಲ್ಲಿ ಕುತೂಹಲ ಮೂಡಿಸಿದ ಚಿತ್ರದ ಕಥಾಹಂದರ
ಈಗಾಗಲೇ ತನ್ನ ಟೈಟಲ್, ಕಂಟೆಂಟ್ ಮತ್ತು ಕಾಸ್ಟಿಂಗ್ ಮೂಲಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಸೌಂಡ್ ಮಾಡುತ್ತಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾದ ಟ್ರೇಲರ್ (ಮೇ. 15, 2024 ರಂದು) ಅದ್ಧೂರಿಯಾಗಿ ಬಿಡುಗಡೆಯಾಗಿದೆ.
ಇನ್ನು ಚಿತ್ರತಂಡ ಆರಂಭದಿಂದಲೂ ಹೇಳಿಕೊಂಡು ಬಂದಿರುವಂತೆ, ಸಾಮಾಜಿಕ ವ್ಯವಸ್ಥೆ, ಕಾನೂನು ಮತ್ತು ನ್ಯಾಯಕ್ಕಾಗಿ ನಡೆಯುವ ಹೋರಾಟದ ಕಥೆಯ ಸಣ್ಣ ಎಳೆಯ ಝಲಕ್ ಅನ್ನು ʼದ ಜಡ್ಜ್‌ಮೆಂಟ್ʼ ಸಿನಿಮಾದ ಟ್ರೇಲರ್‌ನಲ್ಲಿ ಬಿಟ್ಟುಕೊಡಲಾಗಿದೆ. ನಟ ಕ್ರೇಜಿಸ್ಟಾರ್ ರವಿಚಂದ್ರನ್ ಬಹುಕಾಲದ ನಂತರ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಕರಿಕೋಟು ಧರಿಸಿ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟ ರವಿಚಂದ್ರನ್ ಅವರಿಗೆ ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ʼದ ಜಡ್ಜ್‌ಮೆಂಟ್ʼ ಸಿನಿಮಾದಲ್ಲಿ ನಟ ದೂದ್‌ಪೇಡಾ ಖ್ಯಾತಿಯ ದಿಗಂತ್ ಕಾನೂನಿನ ಬಲೆಯೊಳಗೆ ಸಿಲುಕಿಕೊಳ್ಳುವ ವ್ಯಕ್ತಿಯಾಗಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು,ನಟ ದಿಗಂತ್ ಅವರಿಗೆ ಧನ್ಯಾ ರಾಮಕುಮಾರ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಲಕ್ಷ್ಮೀ ಗೋಪಾಲಸ್ವಾಮಿ, ರವಿಶಂಕರ್ ಗೌಡ, ಸುಜಯ್ ಶಾಸ್ತ್ರೀ, ಕೃಷ್ಣ ಹೆಬ್ಬಾಳೆ, ಟಿ. ಎಸ್. ನಾಗಾಭರಣ, ರೇಖಾ ಕೂಡ್ಲಗಿ, ರೂಪಾ ರಾಯಪ್ಪ ಹೀಗೆ ಅನೇಕ ಖ್ಯಾತನಾಮ ಕಲಾವಿದರು ʼದ ಜಡ್ಜ್‌ಮೆಂಟ್ʼ ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ʼಜಿ9 ಕಮ್ಯುನಿಕೇಶನ್ ಆಂಡ್ ಮೀಡಿಯಾ ಎಂಟರ್‌ಟೈನ್ಮೆಂಟ್ʼ ನಿರ್ಮಿಸಿರುವ ಸಿನಿಮಾ
ʼಜಿ9 ಕಮ್ಯುನಿಕೇಶನ್ ಆಂಡ್ ಮೀಡಿಯಾ ಎಂಟರ್‌ಟೈನ್ಮೆಂಟ್ʼ ಬ್ಯಾನರಿನಲ್ಲಿ ಶರದ ಬಿ. ನಾಡಗೌಡ, ವಿಶ್ವನಾಥ ಗುಪ್ತಾ, ರಾಮು ರಾಯಚೂರ, ರಾಜಶೇಖರ ಪಾಟೀಲ ಮತ್ತು ಪ್ರತಿಮಾ ಬಿರಾದರ ಜಂಟಿಯಾಗಿ ನಿರ್ಮಿಸಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾಕ್ಕೆ ಗುರುರಾಜ ಕುಲಕರ್ಣಿ (ನಾಡಗೌಡ) ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಟ್ರೇಲರ್‌ಗೆ ಮೆಚ್ಚುಗೆ
ಈಗಾಗಲೇ ಬಿಡುಗಡೆಯಾಗಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾದ ಟ್ರೇಲರಿಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕನ್ನಡದಲ್ಲಿ ಲೀಗಲ್-ಥ್ರಿಲ್ಲರ್ ಶೈಲಿಯ ಸಿನಿಮಾಗಳ ಸಂಖ್ಯೆ ವಿರಳವಾಗಿದ್ದು, ಅಪರೂಪ ಸಿನಿಮಾಗಳ ಸಾಲಿಗೆ ʼದ ಜಡ್ಜ್‌ಮೆಂಟ್ʼ ಸಿನಿಮಾ ಕೂಡ ಸೇರ್ಪಡೆಯಾಗಲಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಮೇ. 24ಕ್ಕೆ ʼದ ಜಡ್ಜ್‌ಮೆಂಟ್ʼ ಸಿನಿಮಾ ತೆರೆಗೆ
ಅಂದಹಾಗೆ, ಸದ್ಯ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ʼದ ಜಡ್ಜ್‌ಮೆಂಟ್ʼ ಸಿನಿಮಾ ಇದೇ ಮೇ. 25ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ʼರಿಲಯನ್ಸ್ ಎಂಟರ್‌ಟೈನ್ಮೆಂಟ್ʼ ಸಂಸ್ಥೆ ʼದ ಜಡ್ಜ್‌ಮೆಂಟ್ʼ ಸಿನಿಮಾದ ಬಿಡುಗಡೆಯ ಹೊಣೆಯನ್ನು ವಹಿಸಿಕೊಂಡಿದ್ದು, ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚಿನ ಕೇಂದ್ರಗಳಲ್ಲಿ ʼದ ಜಡ್ಜ್‌ಮೆಂಟ್ʼ ಸಿನಿಮಾವನ್ನು ತೆರೆಗೆ ತರಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.