ಸಪ್ತಪದಿ ತುಳಿಯಲು ತರುಣ್ ಸುಧೀರ್ ತೆರೆಮರೆಯಲ್ಲಿ ತಯಾರಿ..?

ಕನ್ನಡದ ನಿರ್ದೇಶಕ ತರುಣ್ ಸುಧೀರ್ ಮದುವೆ ಬಗ್ಗೆ ಗುಸುಗುಸು…
ನಟಿ ಸೋನಾಲ್ ಜೊತೆಗೆ ಹರಿದಾಡುತ್ತಿದೆ ತರುಣ್ ಹೆಸರು

ಸೋನಾಲ್ ಮಾಂತೇರೋ ಜತೆ ತರುಣ್ ಮದುವೆ?
ಅಂದಹಾಗೆ, ನಿರ್ದೇಶಕ ತರುಣ್ ಸುಧೀರ್ ಸಪ್ತಪದಿ ತುಳಿಯಲು ಹೊರಟಿರುವುದು ಕನ್ನಡದ ನಟಿ ಸೋನಾಲ್ ಮಾಂತೇರೋ ಅವರೊಂದಿಗೆ ಎಂದು ಹೇಳಲಾಗುತ್ತಿದೆ.ನಟ ದರ್ಶನ್ ತೂಗುದೀಪ ಅಭಿನಯದ ʼರಾಬರ್ಟ್ʼ ಸಿನೆಮಾಕ್ಕೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದರು. ಈ ಸಿನೆಮಾದಲ್ಲಿ ನಟಿ ಸೋನಾಲ್ ಮಾಂತೇರೋ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.
ʼರಾಬರ್ಟ್ʼ ಸಿನೆಮಾದ ಬಳಿಕ ಇಬ್ಬರ ನಡುವೆ ಒಳ್ಳೆಯ ಗೆಳೆತನ ಬೆಳೆದಿದ್ದು, ತರುಣ್ ಸುಧೀರ್ ಮತ್ತು ಸೋನಾಲ್ ಜೋಡಿ ಕೆಲವು ತಾರೆಯರ ಪಾರ್ಟಿಗಳಲ್ಲಿ ಕೂಡ ಅಲ್ಲಲ್ಲಿ ಕಾಣಿಸಿಕೊಂಡಿತ್ತು.
ಸದ್ಯ ತರುಣ್ ಸುದೀರ್ ‘ಮಹಾನಟಿ’ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕೂಡ ಗುರುತಿಸಿಕೊಂಡಿದ್ದಾರೆ. ಇನ್ನು ತರುಣ್ ಸುಧೀರ್ ಕೈ ಹಿಡಿಯಾಲಿದ್ದಾರೆ ಎಂದು ಹೇಳಲಾಗುತ್ತಿರುವ ನಟಿ ಸೋನಾಲ್ ಮಾಂತೇರೋ ಮೂಲತಃ ಮಂಗಳೂರಿನ ಹುಡುಗಿ. ಮೊದಲಿಗೆ ತುಳು ಸಿನಿಮಾಗಳಲ್ಲಿ ನಟಿಸಿದ್ದ ಸೋನಾಲ್ ಆ ಬಳಿಕ ‘ಅಭಿಸಾರಿಕೆ’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್ ಪ್ರವೇಶಿಸಿದ್ದರು. ಕನ್ನಡದಲ್ಲಿ ʼಪಂಚತಂತ್ರʼ, ʼರಾಬರ್ಟ್ʼ ಹೀಗೆ ಒಂದಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇನ್ನು ಈ ಜೋಡಿ ಸಪ್ತಪದಿ ತುಳಿಯಲಿದೆ ಎನ್ನಲಾಗುತ್ತಿದ್ದರೂ, ತಮ್ಮ ಮದುವೆಯ ಬಗ್ಗೆ ತರುಣ್ ಹಾಗೂ ಸೋನಾಲ್ ಮಾತ್ರ ಯಾವುದೇ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ.