ಕ್ಲಾಸ್ ಆ್ಯಂಡ್ ಮಾಸ್ ಕಂಟೆಂಟ್; ‘ತಾಜ್’ ಟ್ರೇಲರ್ ರಿಲೀಸ್

‘ತಾಜ್’ ಟ್ರೇಲರ್‌ನಲ್ಲಿ ಕ್ಲಾಸ್ ಆ್ಯಂಡ್ ಮಾಸ್ ಕಂಟೆಂಟ್
ಹೊರಬಂತು ನೈಜಘಟನೆ ಆಧಾರಿತ ‘ತಾಜ್’ ಟ್ರೇಲರ್
ಈಗಾಗಲೇ ತನ್ನ ಟೈಟಲ್, ಟೀಸರ್ ಮತ್ತು ಹಾಡುಗಳ ಮೂಲಕ ಒಂದಷ್ಟು ಸದ್ದು ಮಾಡುತ್ತಿರುವ ‘ತಾಜ್’ ಸಿನಿಮಾದ ಟ್ರೇಲರ್ ಇದೀಗ ಬಿಡುಗಡೆಯಾಗಿದೆ. ಯುವ ನಿರ್ದೇಶಕ ಬಿ. ರಾಜರತ್ನ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ತಾಜ್’ ಸಿನೆಮಾದಲ್ಲಿ ನವ ನಟ ಷಣ್ಮುಖ ಜೈ ನಾಯಕನಾಗಿ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದು, ಅಪ್ಸರಾ ನಾಯಕಿಯಾಗಿ ಅಭಿನಯಿಸಿದ್ದಾರೆ.
ಕೋಮು ದಳ್ಳುರಿಯ ನಡವೆ ಅರಳಿದ ಪ್ರೇಮ್ ಕಹಾನಿ…
ಇನ್ನು ಬಿಡುಗಡೆಯಾಗಿರುವ ‘ತಾಜ್’ ಸಿನೆಮಾದ ಟ್ರೇಲರಿನಲ್ಲಿ ಹಿಂದೂ-ಮುಸ್ಲಿಂ ಪ್ರೇಮಕಥೆಯ ಸುತ್ತ ಚಿತ್ರದ ಕಥಾಹಂದರ ಸಾಗುವ ಅಂಶಗಳು ಎದ್ದು ಕಾಣುತ್ತಿದ್ದು, ಲವ್, ಆ್ಯಕ್ಷನ್, ಎಮೋಶನ್ ಹೀಗೆ ಎಲ್ಲ ಥರದ ಮನರಂಜನಾತ್ಮಕ ಅಂಶಗಳು ಇರುವ ಸಣ್ಣ ಝಲಕ್ ಅನ್ನು ಬಿಟ್ಟುಕೊಡಲಾಗಿದೆ.
ಮನರಂಜನೆಯ ಜೊತೆ ಸಂದೇಶ; ‘ತಾಜ್’ ಟ್ರೇಲರ್ ಝಲಕ್!
‘ಶ್ರೀ ಪಾವನಿ ಲಕ್ಷ್ಮೀ ಕಂಬೈನ್ಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘ತಾಜ್’ ಸಿನೆಮಾವನ್ನು ಬೆಂಗಳೂರು, ತುಮಕೂರು, ಯಲಹಂಕ, ನೆಲಮಂಗಲ ಸುತ್ತಮುತ್ತ ಚಿತ್ರೀಕರಣ ಮಾಡಲಾಗಿದೆ. ಇನ್ನು ಬಿಡುಗಡೆಯಾಗಿರುವ ‘ತಾಜ್’ ಸಿನೆಮಾದ ಟ್ರೇಲರಿನಲ್ಲಿ ಹಿಂದೂ-ಮುಸ್ಲಿಂ ಪ್ರೇಮಕಥೆಯ ಸುತ್ತ ಚಿತ್ರದ ಕಥಾಹಂದರ ಸಾಗುವ ಅಂಶಗಳು ಎದ್ದು ಕಾಣುತ್ತಿದ್ದು, ಲವ್, ಆ್ಯಕ್ಷನ್, ಎಮೋಶನ್ ಹೀಗೆ ಎಲ್ಲ ಥರದ ಮನರಂಜನಾತ್ಮಕ ಅಂಶಗಳು ಇರುವ ಸಣ್ಣ ಝಲಕ್ ಅನ್ನು ಬಿಟ್ಟುಕೊಡಲಾಗಿದೆ. ಷಣ್ಮುಖ ಜೈ, ಅಪ್ಸರಾ, ಕಡ್ಡಿ ವಿಶ್ವ, ವರ್ಧನ್ ಅವರೊಂದಿದೆ ಬಲರಾಜವಾಡಿ, ಪದ್ಮವಾಸಂತಿ, ಶೋಭರಾಜ್ ಹೀಗೆ ದೊಡ್ಡ ಕಲಾವಿದರ ದಂಡೇ ‘ತಾಜ್’ ಸಿನೆಮಾದಲ್ಲಿದೆ. ‘ತಾಜ್’ ಹಾಡುಗಳಿಗೆ ಜೆಸ್ಸಿಗಿಫ್ಟ್ ಸಂಗೀತ ಸಂಯೋಜಿಸಿದ್ದು, ಹಿತನ್ ಹಾಸನ್ ಹಿನ್ನೆಲೆ ಸಂಗೀತ ನೀಡಿದ್ದಾರೆ.
ಸದ್ಯ ಬಿಡುಗಡೆಯಾಗಿರುವ ‘ತಾಜ್’ ಟ್ರೇಲರ್ ಒಂದಷ್ಟು ಸಿನಿಪ್ರಿಯರ ಗಮನ ಸೆಳೆಯುತ್ತಿದ್ದು, ಸಿನೆಮಾ ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಇಷ್ಟವಾಗಲಿದೆ ಎಂಬುದು ‘ತಾಜ್’ ಬಿಡುಗಡೆಯಾಗಿ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ.