Quick ಸುದ್ದಿಗೆ ಒಂದು click

‘ನಂಗೆ ಅಲ್ಲವಾ’ ಎಂದು ಹಾಡಿ ಕುಣಿದ ಸಂಜಿತ್ ಹೆಗ್ಡೆ!

ಸಂಜಿತ್ ಹೆಗ್ಡೆ-ಸಂಜನಾ ದಾಸ್ ರೋಮ್ಯಾಂಟಿಕ್ ಗಾನಬಜಾನ…

‘ನಂಗೆ ಅಲ್ಲವಾ…’ ಎಂದು ಹಾಡಿ ಕುಣಿದ ಸ್ಟಾರ್ ಸಿಂಗರ್

ಕನ್ನಡದ ಸ್ಟಾರ್ ಸಿಂಗರ್ ಸಂಜಿತ್ ಹೆಗ್ಡೆ ಬರೀ ಕನ್ನಡಕ್ಕೆ ಸೀಮಿತವಾಗದೇ ತಮಿಳು, ತೆಲುಗು ಹಾಗೂ ಹಿಂದಿರಂಗದಲ್ಲಿಯೂ ತಮ್ಮ ಗಾಯನದ ಮೂಲಕ ಸಂಗೀತ ಪ್ರಿಯರನ್ನು ರಂಜಿಸುತ್ತಿದ್ದಾರೆ. ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಸಂಜಿತ್ ಅತಿ ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆ ಪಡೆದುಕೊಂಡರು. ಬರೀ ಗಾಯನಕ್ಕೆ ಸೀಮಿತವಾಗದೇ ನಟನೆಯಲ್ಲಿಯೂ ತೊಡಗಿಸಿಕೊಂಡಿರುವ ಸಂಜಿತ್ ಈಗ ಮತ್ತೊಂದು ಹೊಸ ಹಾಡಿನ ಮೂಲಕ ಪ್ರತ್ಯಕ್ಷರಾಗಿದ್ದಾರೆ.

ಸಂಚಿತ್ ಹೆಗ್ಡೆ ಯುವ ನಟಿ ಸಂಜನಾ ದಾಸ್ ಜೊತೆ… 

‘ನಂಗೆ ಅಲ್ಲವಾ’ ಅಂತಾ ಸಂಚಿತ್ ಹೆಗ್ಡೆ ಯುವ ನಟಿ ಸಂಜನಾ ದಾಸ್ ಜೊತೆಗೂಡಿ ಹಾಡಿ ಕುಣಿದಿದ್ದಾರೆ. ಹಾಗಂತ ಇದು ಸಿನಿಮಾ ಗೀತೆಯಲ್ಲ. ಬದಲಾಗಿ ಸಂಚಿತ್ ತಮ್ಮ ತಂಡದೊಂದಿಗೆ ಸೇರಿ ಸ್ವತಂತ್ರವಾಗಿ ರಚಿಸಿರುವ ಗಾನಬಜಾನ.  ನಾಗಾರ್ಜುನ್ ಶರ್ಮಾ ಪದಪೊಣಿಸಿರುವ ಹಾಡಿಗೆ ಸಂಜಿತ್ ಹೆಗ್ಡೆ ಕಂಠ ಕುಣಿಸಿದ್ದಾರೆ. ಜೊತೆಗೆ ಸಂಗೀತ ಕೂಡ ಸಂಯೋಜಿಸಿದ್ದು, ಬಿಜೋಯ್ ಶೆಟ್ಟಿ ನಿರ್ದೇಶನದಲ್ಲಿ ‘ನಂಗೆ ಅಲ್ಲವಾ’ ಹಾಡು ಮೂಡಿಬಂದಿದೆ.

ಯುವ ಪ್ರೇಮಿಗಳ ಆಂಥೆಮ್ ನಂತಿರುವ ‘ನಂಗೆ ಅಲ್ಲವಾ’ ಗೀತೆ ಕೇಳುಗರನ್ನು ಮಂತ್ರ ಮುಗ್ದರನ್ನಾಗಿ ಮಾಡುತ್ತದೆ. ಈ ಹಾಡಿನ ಬಗ್ಗೆ ಮನಬಿಚ್ಚಿರುವ ಸಂಚಿತ್, “ಈ ಹಾಡು ನನ್ನ ಜೀವನವನ್ನು ಬದಲಾಯಿಸಿತು. ನಾನು ತುಂಬಾ ಆತಂಕಗೊಂಡಿದ್ದೇನೆ ಮತ್ತು ಇದನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ಉತ್ಸುಕನಾಗಿದ್ದೇನೆ. “ನಂಗೆ ಅಲ್ಲವಾ” ನನ್ನ ಪ್ರೀತಿಯ ಜೀವನದ ಪ್ರಯಣವನ್ನು ವ್ಯಕ್ತಪಡಿಸಲು ನನಗೆ ಸಹಾಯ ಮಾಡಿತು. ಈ ಪ್ರಯಾಣದಲ್ಲಿ ಭಾಗವಾಗಿರುವ ಪ್ರತಿಯೊಬ್ಬರಿಗೂ ನಾನು ತುಂಬಾ ಕೃತಜ್ಞನಾಗಿದ್ದೇನೆ. ಈ ಹಾಡು ಬಿಡುಗಡೆಯೊಂದಿಗೆ ಹೃದಯ ತುಂಬಾ ಹಗುರ ಎನಿಸುತ್ತದೆ” ಎಂದಿದ್ದಾರೆ.

ಸಂಜಿತ್ ಹಿಂದಿಯಲ್ಲಿ “ಬಾದಲ್” ಮತ್ತು “ಗುಲಾಬೋ” ಹಾಡುಗಳೊಂದಿಗೆ ಈಗಾಗಲೇ ಹೊಸ ಅಲೆ ಸೃಷ್ಟಿಸಿದ್ದಾರೆ. ಈಗ ಅದೇ ಸಾಲಿಗೆ ‘ನಂಗೆ ಅಲ್ಲವಾ…’ ಗಾನಬಜಾನ ಸೇರ್ಪಡೆಯಾಗಿದೆ. ಸಂಜಿತ್ ಹೆಗ್ಡೆ ಯೂ ಟ್ಯೂಬ್ ಚಾನೆಲ್ ನಲ್ಲಿ ಹಾಗೂ ಎಲ್ಲಾ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹಾಡು ಲಭ್ಯವಿದೆ. ‘ವಾರ್ನರ್ ಮ್ಯೂಸಿಕ್ ಇಂಡಿಯಾ’ ಈ ಹಾಡನ್ನು ಬಿಡುಗಡೆ ಮಾಡಿದೆ.

Related Posts

error: Content is protected !!