ಹೊರಬಂತು ʼಭೀಮʼನ ʼಬೇಬಿ ಚಿನ್ನಮ್ಮʼ ವಿಡಿಯೋ ಸಾಂಗ್

ʼDon’t Worry ಬೇಬಿ ಚಿನ್ನಮ್ಮ…ʼ ಲಿರಿಕಲ್ ವಿಡಿಯೋ ಹಾಡು ಬಿಡುಗಡೆ.
ನಟ ಕಂ ನಿರ್ದೇಶಕ ದುನಿಯಾ ವಿಜಯ್ ನಾಯಕನಾಗಿ ಅಭಿನಯಿಸಿ ಮತ್ತು ತಾನೇ ನಿರ್ದೇಶನ ಮಾಡುತ್ತಿರುವ ʼಭೀಮʼ ಸಿನಿಮಾದ ʼDon’t Worry ಬೇಬಿ ಚಿನ್ನಮ್ಮ…ʼ ಲಿರಿಕಲ್ ವಿಡಿಯೋ ʼಆನಂದ ಆಡಿಯೋʼ ಯು-ಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡಿಗೆ ಗಣಮುತ್ತು ಧ್ವನಿಯಾಗಿದ್ದಾರೆ. ನಾಗಾರ್ಜುನ ಶರ್ಮ ಈ ಗೀತೆಗೆ ಸಾಹಿತ್ಯ ಒದಗಿಸಿದ್ದಾರೆ.