ತೆಲುಗಿನ ಮೆಗಾ ಸುಪ್ರೀಂ ಹೀರೋ ಸಾಯಿ ಧರಮ್ ತೇಜ್ ಹೊಸ ಸಿನಿಮಾ ಅನೌನ್ಸ್

ಮೆಗಾಸ್ಟಾರ್ ಫ್ಯಾಮಿಲಿ ಹೀರೋ ಈಗ ಪ್ಯಾನ್ ಇಂಡಿಯಾ ಸ್ಟಾರ್…
ಸಾಯಿ ಧರಮ್ ತೇಜ್ ಹೊಸ ಸಿನಿಮಾ ಘೋಷಣೆ
‘ವಿರೂಪಾಕ್ಷ’ ಹಾಗೂ ‘ಬ್ರೋ’ ಸಿನಿಮಾಗಳ ಬ್ಲಾಕ್ ಬಸ್ಟರ್ ಹಿಟ್ ಬಳಿಕ ತೆಲುಗಿನ ಯುವ ಹೀರೋ ಸಾಯಿ ಧರಮ್ ತೇಜ್ ಮತ್ತೊಂದು ಹೊಸ ಸಿನಿಮಾ ಘೋಷಿಸಿದ್ದಾರೆ. ಈ ಬಾರಿ ಮೆಗಾ ಹೀರೋ ಪ್ಯಾನ್ ಇಂಡಿಯಾ ಚಿತ್ರ ಜಗತ್ತನ್ನು ಪ್ರವೇಶಿಸಲಿದ್ದಾರೆ. ಸಾಯಿ ಧರಮ್ ತೇಜ್ 18ನೇ ಸಿನಿಮಾ ಪೋಸ್ಟರ್ ಬಿಡುಗಡೆಯಾಗಿದೆ. ಮರುಭೂಮಿಯ ನಡುವೆ ಒಂಟಿ ಹಸಿರು ಮರವನ್ನು ಒಳಗೊಂಡಿರುವ ಪೋಸ್ಟರ್ ಆಕರ್ಷಕವಾಗಿದ್ದು, ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.
ಸಾಯಿ ಧರಮ್ ತೇಜ್ ಪ್ಯಾನ್ ಇಂಡಿಯಾ ಚಿತ್ರ
#SDT18 ಎಂಬ ತಾತ್ಕಾಲಿಕ ಶೀರ್ಷಿಕೆ ಇಡಲಾಗಿದ್ದು, ರೋಹಿತ್ ಕೆಪಿ ಸಿನಿಮಾ ನಿರ್ದೇಶಿಸುತ್ತಿದ್ದಾರೆ. ಇದು ಇವರ ಮೊದಲ ಪ್ರಯತ್ನ. ‘ಪ್ರೈಮ್‌ಶೋ ಎಂಟರ್‌ಟೈನ್‌ಮೆಂಟ್’ ಬ್ಯಾನರ್ ಅಡಿ ನಿರಂಜನ್ ರೆಡ್ಡಿ ಹಾಗೂ ಚೈತ್ರಾ ರೆಡ್ಡಿ ಚಿತ್ರ ನಿರ್ಮಿಸಿದ್ದಾರೆ. ಸದ್ಯ ಹೈದ್ರಾಬಾದ್ ನಲ್ಲಿ ಅದ್ಧೂರಿ ಸೆಟ್ ಹಾಕಿ ಮೊದಲ ಹಂತದ ಚಿತ್ರೀಕರಣ ನಡೆಸಲಾಗುತ್ತಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರಮೂಡಿ ಬರಲಿದೆ.