Quick ಸುದ್ದಿಗೆ ಒಂದು click

ಅಜಿತ್ ‘ವಿಡಮುಯಾರ್ಚಿ’ ಫಸ್ಟ್ ಲುಕ್ ರಿಲೀಸ್…

‘ವಿಡಮುಯಾರ್ಚಿ’ ಫಸ್ಟ್ ಲುಕ್; ಕೈಯಲ್ಲಿ ಬ್ಯಾಗ್ ಹಿಡಿದು ಕೂಲ್ ಆಗಿ ಅಜಿತ್ ಎಂಟ್ರಿ

ತಮಿಳಿನ ಖ್ಯಾತ ನಟ ಅಜಿತ್ ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಸಿನಿಮಾ ‘ವಿಡಮುಯಾರ್ಚಿ’. ಹೈವೋಲ್ಟೇಜ್ ಆಕ್ಷನ್ ಸೀಕ್ವೆನ್ಸ್‌ ತುಣುಕುಗಳ ಮೂಲಕವೇ ಕುತೂಹಲ ಹೆಚ್ಚಿಸಿರುವ ಈ ಚಿತ್ರದ ಫಸ್ಟ್ ಲುಕ್ ಇತ್ತೀಚೆಗೆ ರಿಲೀಸ್ ಆಗಿದೆ. ಕೂಲಿಂಗ್ ಕ್ಲಾಸ್ ತೊಟ್ಟು ಕೈಯಲ್ಲಿ ಬ್ಯಾಗ್ ಹಿಡಿದು ಅಜಿತ್ ಕೂಲ್ ಆಗಿ ರಸ್ತೆ ಮೇಲೆ ಹೆಜ್ಜೆ ಹಾಕುತ್ತಿರುವ ಪೋಸ್ಟರ್ ಅನ್ನು ಫಸ್ಟ್‌ ಲುಕ್‌ನಲ್ಲಿ ಬಿಡುಗಡೆ ಮಾಡಲಾಗಿದೆ.

ಅಜಿತ್‌ ಹೊಸ ಗೆಟಪ್‌ !

ದಕ್ಷಿಣ ಭಾರತದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ʼಲೈಕಾ ಪ್ರೊಡಕ್ಷನ್ಸ್ʼ ನಡಿ ಸುಭಾಸ್ಕರನ್ ‘ವಿಡಮುಯಾರ್ಚಿ’ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ‘ಕಲಗ ತಲೈವನ್’ ಸಿನಿಮಾ ಖ್ಯಾತಿಯ ನಿರ್ದೇಶಕ ಮಗಿಳ್ ತಿರುಮೇನಿ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಿದ್ದಾರೆ. ಅಜಿತ್ ಕುಮಾರ್ ಜೋಡಿಯಾಗಿ ತ್ರಿಶಾ ಬಣ್ಣ ಹಚ್ಚಿದ್ದು, ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ, ಆರವ್, ರೆಜಿನಾ ಕಸ್ಸಂದ್ರ, ನಿಖಿಲ್ ಮತ್ತು ಅನೇಕರು ತಾರಾಬಳಗದಲ್ಲಿದ್ದಾರೆ. ಅದ್ಧೂರಿಯಾಗಿ ಬಿಗ್‌ ಬಜೆಟ್‌ ನಲ್ಲಿ ‘ವಿಡಮುಯಾರ್ಚಿ’ ಸಿನಿಮಾ ನಿರ್ಮಾಣ ಮಾಡಲಾಗುತ್ತಿದ್ದು, ಸಿನಿಮಾದ ಮೇಲೆ ಸಹಜವಾಗಿಯೇ ಒಂದಷ್ಟು ನಿರೀಕ್ಷೆ ಸೌಥ್‌ ಸಿನಿ  ದುನಿಯಾದಲ್ಲಿ ಮನೆ ಮಾಡಿದೆ.


‘ವಿಡಮುಯಾರ್ಚಿ’ ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದ್ದು, ಆಗಸ್ಟ್ ಮಧ್ಯದ ವೇಳೆಗೆ ಚಿತ್ರೀಕರಣವನ್ನು ಪೂರ್ಣಗೊಳಿಸಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ. ಚಿತ್ರೀಕರಣ ಮುಗಿದ ನಂತರ ಅಧಿಕೃತವಾಗಿ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ  ‘ವಿಡಮುಯಾರ್ಚಿ’ ಸಿನಿಮಾ ತೆರೆಗೆ ಬರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಅನಿರುದ್ಧ್ ಈ ಚಿತ್ರಕ್ಕೆ ಸಂಗೀತ ನೀಡುತ್ತಿದ್ದಾರೆ. ಓಂ ಪ್ರಕಾಶ್ ಛಾಯಾಗ್ರಹಣ, ಎನ್. ಬಿ ಶ್ರೀಕಾಂತ್ ಸಂಕಲನ, ಮಿಲನ್ ಕಲಾ ನಿರ್ದೇಶನ ‘ವಿಡಮುಯಾರ್ಚಿ’ ಸಿನಿಮಾಕ್ಕಿದೆ. ʼಸನ್ ಟಿವಿʼ ಸ್ಯಾಟಲೈಟ್ ಹಕ್ಕು ಖರೀದಿ ಮಾಡಿದ್ದು, ʼನೆಟ್ ಫ್ಲಿಕ್ಸ್ʼ ಒಟಿಟಿ ರೈಟ್ಸ್ ತನ್ನದಾಗಿಸಿಕೊಂಡಿದೆ.

G S Karthik Sudhan

Karthik Sudhan is a name that is familiar in journalistic circles and has rendered valuable service for many significant years. Known for his vast knowledge and work in the field of cinema, crime, investigation and politics, Karthik Sudhan has worked in reputed online publications of Kannada.

Related Posts

error: Content is protected !!