ಎಲ್ಲವೂ ‘ಪೌಡರ್’ಮಯ…! ಚಿತ್ರದ ‘ಮಿಷನ್ ಘಮ ಘಮ…’ ಗೀತೆ ಬಿಡುಗಡೆ

‘ಪೌಡರ್’ ಚಿತ್ರದ ‘ಮಿಷನ್ ಘಮ ಘಮ…’ ಗೀತೆ ಬಿಡುಗಡೆ
ಈಗಾಗಲೇ ತಾನ್ನ ಟೈಟಲ್ ಮತ್ತು ಕಂಟೆಂಟ್ ಮೂಲಕ ಒಂದಷ್ಟು ಸುದ್ದಿ ಮಾಡುತ್ತಿರುವ ನಿರೀಕ್ಷಿತ ‘ಪೌಡರ್’ ಚಿತ್ರ ಬಿಡುಗಡೆಗೆ ತಯಾರಾಗುತ್ತಿದೆ. ಈಗಾಗಲೇ ನಿಧಾನವಾಗಿ ತಾನ್ನ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇದೀಗ ‘ಮಿಷನ್ ಘಮ ಘಮ…’ ಎಂಬ ತನ್ನ ಮೊದಲ ಗೀತೆಯನ್ನು ಇಂದು ಬಿಡುಗಡೆ ಮಾಡಿ ಮತ್ತೊಮ್ಮೆ ಸುದ್ದಿಯಲ್ಲಿದೆ.
ವಾಸುಕಿ ವೈಭವ್, ಎಂ. ಸಿ. ಬಿಜ್ಜು ಕಾಂಬಿನೇಷನ್ ಅಲ್ಲಿ ಮೂಡಿ ಬಂದಿರುವ ‘ಪೌಡರ್’ ಚಿತ್ರದ ಗೀತೆ
ಹೆಸರಾಂತ ಗಾಯಕ, ಸಂಗೀತ ನಿರ್ದೇಶಕ ವಾಸುಕಿ ವೈಭವ್ ಮತ್ತು ಖ್ಯಾತ ಗಾಯಕ ಎಂ.ಸಿ.ಬಿಜ್ಜು ಅವರ ಕಾಂಬಿನೇಷನ್ ಅಲ್ಲಿ ಮೂಡಿ ಬಂದಿರುವ ಮೊದಲ ಗೀತೆ ಇದಾಗಿದ್ದು, ತನ್ನ ವಿಭಿನ್ನವಾದ ಟ್ಯೂನ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದೆ. ಮಾಧುರ್ಯ ಪ್ರಧಾನ ಗೀತೆಗಳಿಗೆ ಹೆಸರುವಾಸಿಯಾದ ವಾಸುಕಿ ವೈಭವ್ ಮತ್ತು ರ್ಯಾಪ್ ಸಂಗೀತದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಎಂ.ಸಿ.ಬಿಜ್ಜು ಒಟ್ಟಾಗಿ ಬಂದಿರುವುದು ಹಾಡಿಗೆ ಹೆಚ್ಚು ಮೆರಗನ್ನು ತಂದಿದೆ.
‘ಪೌಡರ್’ ನಲ್ಲಿ ಅಂಥದ್ದೇನಿದೆ..?
ಇಬ್ಬರು ಯುವಕರು ಒಂದು ನಿಗೂಢವಾದ ‘ಪೌಡರ್’ ಪ್ರಭಾವದಿಂದಾಗಿ ಧಿಡೀರನೇ ಸಿರಿವಂತರಾಗಲು ಮಾಡುವ ಪ್ರಯತ್ನಗಳು, ಅವರಿಗೆ ಎದುರಾಗುವ ಸಮಸ್ಯೆಗಳು ಇವೆಲ್ಲವನ್ನೂ ಎಳೆಯಾಗಿ ಬಿಚ್ಚಿಡುವ ಕಥೆಯೇ ‘ಪೌಡರ್’ . ಆ ಯುವಕರು ಎಲ್ಲಾ ಸಮಸ್ಯೆಗಳನ್ನು ಮೀರಿ ನಿಲ್ಲುವರೇ? ಅವರ ಎಲ್ಲಾ ಕನಸುಗಳು ನನಸಾಗುವುದೇ? ‘ಪೌಡರ್’ ಹಿಂದಿನ ‘ಪೌವರ್ʼ ಅವರಿಗೆ ತಿಳಿಯುವುದೇ? ಈ ಎಲ್ಲಾ ಪ್ರಶ್ನೆಗಳಿಗೆ ಇದೇ ಆಗಸ್ಟ್ 15ರಂದು ಚಿತ್ರಮಂದಿರಗಳಲ್ಲಿ ಉತ್ತರ ದೊರೆಯಲಿದೆ.
ದಿಗಂತ್ ಮಂಚಾಲೆ, ಧನ್ಯ ರಾಮ್ ಕುಮಾರ್, ಶರ್ಮಿಳಾ ಮಾಂಡ್ರೆ, ಅನಿರುದ್ಧ್ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರುವ ‘ಪೌಡರ್’ ಚಿತ್ರಕ್ಕೆ ಜನಾರ್ದನ್ ಚಿಕ್ಕಣ್ಣ ಆಕ್ಷನ್ ಕಟ್ ಹೇಳಿದ್ದು, ವಾಸುಕಿ ವೈಭವ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಅದ್ವೈತ ಗುರುಮೂರ್ತಿ ಮುಖ್ಯ ಛಾಯಾಗ್ರಾಹಕರಾಗಿರುತ್ತಾರೆ ಹಾಗೂ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿರುತ್ತಾರೆ. ‘ಕೆ.ಆರ್.ಜಿ. ಸ್ಟೂಡಿಯೋಸ್ʼ ಮತ್ತು ‘ಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ʼ ನ ಚೊಚ್ಚಲ ಸಹಯೋಗವಾದ ‘ಪೌಡರ್’ ಚಿತ್ರವನ್ನು ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಹ್ಮಣ್ಯಂ ʼಕೆ.ಆರ್.ಜಿ. ಸ್ಟೂಡಿಯೋಸ್ʼ ಬ್ಯಾನರ್ ಅಡಿಯಲ್ಲಿ ಹಾಗೂ ಅರು ಕುಮಾರ್ ʼಟಿ.ವಿ.ಎಫ್ ಮೋಷನ್ ಪಿಕ್ಚರ್ಸ್ʼ ಬ್ಯಾನರ್ ಅಡಿಯಲ್ಲಿ ನಿರ್ಮಿಸುತ್ತಿದ್ದಾರೆ.