ಜನ್ಮದಿನಕ್ಕೂ ಮುನ್ನ ಅಭಿಮಾನಿಗಳಿಗೆ ಶಿವಣ್ಣ ಪತ್ರ

ಎಕ್ಸ್ ಖಾತೆಯ ಮೂಲಕ ಅಭಿಮಾನಿಗಳಿಗೆ ಸೆಂಚುರಿ ಸ್ಟಾರ್ ಪತ್ರ
ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಶಿವಣ್ಣ ದರ್ಶನವಿಲ್ಲ
ಶಿವಣ್ಣ ಪತ್ರದಲ್ಲಿ ಏನಿದೆ..?
“ಅಭಿಮಾನಿ ದೇವರುಗಳಿಗೆ,ಪ್ರತಿ ವರ್ಷ ನನ್ನ ಹುಟ್ಟುಹಬ್ಬ ದೊಡ್ಡ ಹಬ್ಬ ಆಗೋದು ನಿಮ್ಮ ಜೊತೆ ಕಳೆದಾಗ. ನೀವು ಅಕ್ಕರೆಯಿಂದ ಕೊಡೋ ಹ್ಯಾಂಡ್ ಶೇಕ್ ಪ್ರೀತಿಯ ಅಪ್ಪುಗೆ, ನೀಡೋ ಆಶೀರ್ವಾದ ನಿಮ್ಮ ಶಿವುಗೆ ಶ್ರೀರಕ್ಷೆ. ಈ ವರ್ಷ Birthdayಗೆ ನಿಮ್ಮ ಜೊತೆ ಇರೋದಕ್ಕೆ ಆಗೋದಿಲ್ಲ, ಆದರೆ ವರ್ಷವಿಡೀ ಒಟ್ಟಿಗೆ ಪ್ರತಿ ದಿನ ಸೆಲೆಬ್ರೇಟ್ ಮಾಡೋಣ. ನಾನು Birthdayಗೆ ಇಲ್ಲದೆ ಇದ್ರೂ ನಿಮ್ಮ ಜೊತೆ ರಣಗಲ್ ಇರ್ತಾನೆ, ಜುಲೈ 12 | 10:10ಕ್ಕೆ ನಿಮ್ಮ ಆಶೀರ್ವಾದ ಸದಾ ಇರಲಿ” ಎಂದು ಶಿವರಾಜ್ ಕುಮಾರ್ ಹೇಳಿದ್ದಾರೆ.
NimmaShivanna (@DrShivaRajkumar) posted: ಅಭಿಮಾನಿ ದೇವರುಗಳಲ್ಲಿ ವಿನಂತಿ.. https://x.com/nimmashivanna/
ಶಿವಣ್ಣ ಬರ್ತ್‌ಡೇ ಗೆ ʼಭೈರತಿ ರಣಗಲ್ʼ ಟೀಸರ್…
ಇನ್ನು ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಶಿವಣ್ಣ ಅವರ ಮುಂಬರುವ ಸಿನೆಮಾ ʼಭೈರತಿ ರಣಗಲ್ʼ ನ ಮೊದಲ ಟೀಸರ್ ಬಿಡುಗಡೆಯಾಗುತ್ತಿದೆ. ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿರುವ ʼಭೈರತಿ ರಣಗಲ್ʼನಲ್ಲಿ ಅವಿನಾಶ್, ದೇವರಾಜ್, ಛಾಯಾ ಸಿಂಗ್, ಬಾಬು ಹಿರಣ್ಣಯ್ಯ, ಮಧು ಗುರುಸ್ವಾಮಿ ಮತ್ತು ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ನಟಿಸಿದ್ದಾರೆ. ಸುಮಾರು ಎಂಟು ವರ್ಷಗಳ ಬಳಿಕ ʼಮಫ್ತಿʼ ಚಿತ್ರದ ಪ್ರೀಕ್ವೆಲ್ ಆಗಿ ʼಭೈರತಿ ರಣಗಲ್ʼ ಚಿತ್ರ ತೆರೆಗೆ ಬರುತ್ತಿದೆ.
ನರ್ತನ್ ನಿರ್ದೇಶನದ ಈ ಸಿನಿಮಾ ಆ.15 ರಂದು ರಿಲೀಸ್ ಆಗಲಿದೆ ಎನ್ನಲಾಗಿತ್ತು. ಆದರೆ ಚಿತ್ರದ ಕೆಲ ಕೆಲಸಗಳು ಬಾಕಿ ಉಳಿದಿದೆ ಈ ಕಾರಣದಿಂದ ರಿಲೀಸ್ ಡೇಟ್ ಮುಂದೂಡಿಕೆ ಆಗಿದೆ. ಇದರ ಜೊತೆಗೆ ಶಿವರಾಜಕುಮಾರ್ ಅಭಿನಯಿಸುತ್ತಿರುವ ಮುಂದಿನ ಇತರ ಸಿನಿಮಾದ ಪೋಸ್ಟರ್ ಹಾಗೂ ಟೀಸರ್ ಗಳು ಕೂಡ ಶಿವರಾಜ್ ಕುಮಾರ್ ಹುಟ್ಟುಹಬ್ಬದಂದು ಅವರ ರಿಲೀಸ್ ಆಗುವ ಸಾಧ್ಯತೆಯಿದೆ.