‘ಶಿವಗಣ’ದಲ್ಲಿ ಶಿವಣ್ಣ-ಗಣೇಶ್ ಜೊತೆಯಾಟ

ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಶಿವರಾಜಕುಮಾರ್-ಗಣೇಶ್
ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ನಟ ಗೋಲ್ಡನ್ ಸ್ಟಾರ್ ಗಣೇಶ್ ಮೊದಲ ಬಾರಿಗೆ ಒಂದೇ ಸಿನೆಮಾದಲ್ಲಿ ಜೋಡಿಯಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಕೆಲ ದಿನಗಳಿಂದ ಹಾರಿದಾಡುತ್ತಿತ್ತು. ಈ ಬಗ್ಗೆ ಒಂದಷ್ಟು ಅಂತೆ-ಕಂತೆಗಳು ಹಾರಿದಾಡುತ್ತಿದ್ದರೂ, ಇದೀಗ ಈ ಇಬ್ಬರೂ ಸ್ಟಾರ್ ಒಟ್ಟಿಗೇ ಅಭಿನಯಿಸುತ್ತಿರುವ ಸಿನೆಮಾದ ಸುದ್ದಿ ಬಹುತೇಕ ಪಕ್ಕಾ ಆಗಿದೆ.
ಶಿವರಾಜಕುಮಾರ್ ಬರ್ತ್‌ಡೇಗೆ ಟೈಟಲ್ ಪೋಸ್ಟರ್ ರಿಲೀಸ್
ಇನ್ನು ಶಿವರಾಜಕುಮಾರ್ ಮತ್ತು ಗಣೇಶ್ ಮೊದಲ ಬಾರಿಗೆ ಅಭಿನಯಿಸುತ್ತಿರುವ ಈ ಸಿನಿಮಾಕ್ಕೆ ‘ಶಿವಗಣ’ ಎಂದು ಹೆಸರಿಡಲಾಗಿದೆ. ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅವರ ಜನ್ಮದಿನದ ಪ್ರಯುಕ್ತ ‘ಶಿವಗಣ’ ಸಿನೆಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದೆ. ‘ರಾಮ್ ಬಾಬು ಪ್ರೊಡಕ್ಷನ್ಸ್’ ಬ್ಯಾನರಿನಲ್ಲಿ ಎಂ. ಬಿ. ಬಾಬು (ಸೂರಪ್ಪ ಬಾಬು) ನಿರ್ಮಾಣ ಮಾಡುತ್ತಿರುವ ಈ ಸಿನೆಮಾಕ್ಕೆ ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದಾರೆ.
ಶೀಘ್ರದಲ್ಲಿಯೇ ಸೆಟ್ಟೇರಲಿದೆ ‘ಶಿವಗಣ’
ಸದ್ಯ ‘ಶಿವಗಣ’ ಸಿನೆಮಾದ ಟೈಟಲ್ ಪೋಸ್ಟರ್ ಬಿಡುಗಡೆಯಾಗಿದ್ದು, ಈ ವರ್ಷದ ಕೊನೆಗೆ ಈ ಸಿನೆಮಾ ಸೆಟ್ಟೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಉಳಿದಂತೆ ಈ ಸಿನೆಮಾದ ಕಥಾಹಂದರ ಇತರ ಕಲಾವಿದರು, ತಂತ್ರಜ್ಞರ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.