ಪ್ರೇಕ್ಷಕರ ಮುಂದೆ ಬಂದ ‘ಉತ್ತರಕಾಂಡ’ದ ‘ಮಾಲೀಕ’

‘ಉತ್ತರಕಾಂಡ’ ಸಿನೆಮಾದ ಶಿವಣ್ಣ ಲುಕ್ ರಿವೀಲ್!
ಹ್ಯಾಟ್ರಿಕ್ ಹೀರೋ ಬರ್ತ್‌ಡೇಗೆ ಚಿತ್ರತಂಡದ ಕಡೆಯಿಂದ ಸ್ಪೆಷಲ್ ಗಿಫ್ಟ್
ಸ್ಯಾಂಡಲ್ ವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿರುವ ‘ಉತ್ತರಕಾಂಡ’ ಸಿನೆಮಾದಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಮತ್ತು ಡಾಲಿ ಧನಂಜಯ್ ಒಟ್ಟಾಗಿ ಅಭಿನಯಿಸುತ್ತಿರುವ ವಿಷಯ ನಿಮಗೆ ಗೊತ್ತಿರಬಹುದು. ಇದೀಗ ಈ ಸಿನೆಮಾದಲ್ಲಿ ನಟ ಶಿವರಾಜಕುಮಾರ್ ಅವರ ಬಹು ಬೇಡಿಕೆಯಲ್ಲಿದ್ದ ಲುಕ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ.
‘ಮಾಲೀಕ’ ನ ಅವತಾರದಲ್ಲಿ ಶಿವಣ್ಣನ ಎಂಟ್ರಿ…
ಅಂದಹಾಗೆ, ‘ಉತ್ತರಕಾಂಡ’ ಸಿನೆಮಾದಲ್ಲಿ ನಟ ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ‘ಮಾಲೀಕ’ ನ ಅವತಾರದಲ್ಲಿ ತೆರೆಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಹುಟ್ಟುಹಬ್ಬದ ಅಂಗವಾಗಿ ‘ಉತ್ತರಕಾಂಡ’ ಚಿತ್ರತಂಡ ಸಿನೆಮಾದಲ್ಲಿ ಶಿವಣ್ಣ ಕಾಣಿಸಿಕೊಳ್ಳುತ್ತಿರುವ ‘ಮಾಲೀಕ’ ನ ಅವತಾರದ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ಶಿವಣ್ಣನ ‘ಮಾಲೀಕ’ ನ ಅವತಾರ ಅಭಿಮಾನಿಗಳ ಗಮನ ಸೆಳೆಯುತ್ತಿದೆ.
‘ಉತ್ತರಕಾಂಡ’ ಎಂಬ ಆ್ಯಕ್ಷನ್ ಡ್ರಾಮಾ
ಬಹು ನಿರೀಕ್ಷಿತ ಚಿತ್ರ ‘ಉತ್ತರಕಾಂಡ’ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಇದು ರೋಹಿತ್ ಪದಕಿಯ ಈ ಸಿನೆಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಖ್ಯಾತ ಗಾಯಕ, ಸಂಯೋಜಕ ಅಮಿತ್ ತ್ರಿವೇದಿ ಈ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದು, ಅಧ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ. ಚಿತ್ರಕ್ಕೆ ವಿಶ್ವಾಸ್ ಕಶ್ಯಪ್ ಪ್ರೊಡಕ್ಷನ್ ವಿನ್ಯಾಸ ಮಾಡಿದ್ದು, ಅನಿಲ್ ಅನಿರುದ್ಧ್ ಸಂಕಲನವಿದೆ. ʼಕೆ.ಆರ್.ಜಿ. ಸ್ಟೂಡಿಯೋಸ್ʼ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
‘ಉತ್ತರಕಾಂಡ’ ಸಿನೆಮಾದಲ್ಲಿ ಶಿವರಾಜ್ ಕುಮಾರ್, ನಟರಾಕ್ಷಸ ಡಾಲಿ ಧನಂಜಯ ಅವರೊಂದಿಗೆ ಭಾವನಾ ಮೆನನ್, ಐಶ್ವರ್ಯ ರಾಜೇಶ್, ದಿಗಂತ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.