ಮಾಸ್ ಟ್ರೇಲರ್ ನಲ್ಲಿ’ಹಿರಣ್ಯ’ನ ಎಂಟ್ರಿ…

ರಾಜವರ್ಧನ್ ‘ಹಿರಣ್ಯ’ ಸಿನಿಮಾಗೆ ಡಾಲಿ ಧನಂಜಯ್-ರಾಗಿಣಿ ಸಾಥ್…
ಹೊರಬಂತು ‘ಹಿರಣ್ಯ’ನ ಔಟ್ ಆ್ಯಂಡ್ ಔಟ್ ಮಾಸ್ ಟ್ರೇಲರ್
ಈಗಾಗಲೇ ತನ್ನ ಟೈಟಲ್, ಟೀಸರ್ ಹಾಗೂ ಹಾಡುಗಳ ಮೂಲಕ ಚಿತ್ರರಂಗದಲ್ಲಿ ಒಂದಷ್ಟು ನಿರೀಕ್ಷೆ ಮೂಡಿಸಿ ಸೌಂಡ್ ಮಾಡುತ್ತಿರುವ ‘ಹಿರಣ್ಯ’ ಸಿನಿಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ‘ಹಿರಣ್ಯ’ ಸಿನೆಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಡಾಲಿ ಧನಂಜಯ್, ನಟಿ ರಾಗಿಣಿ ದ್ವಿವೇದಿ ವಿಶೇಷ ಅತಿಥಿಯಾಗಿ ಭಾಗಿಯಾಗಿ ‘ಹಿರಣ್ಯ’ ಚಿತ್ರತಂಡಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ‘ಹಿರಣ್ಯ’ ಚಿತ್ರದ ನಾಯಕ ರಾಜವರ್ಧನ್ ಸೇರಿದಂತೆ ಚಿತ್ರದ ಕಲಾವಿದರು, ತಂತ್ರಜ್ಞರು ಹಾಜರಿದ್ದರು.
ಹೇಗಿದೆ ‘ಹಿರಣ್ಯ’ನ ಟ್ರೇಲರ್..?
ಚಿತ್ರತಂಡವೇ ಹೇಳಿಕೊಂಡಿರುವಂತೆ, ‘ಹಿರಣ್ಯ’ ಔಟ್ ಆ್ಯಂಡ್ ಔಟ್ ಮಾಸ್ ಕಥಾಹಂದರದ ಸಿನೆಮಾ. ಅದರಂತೆ ‘ಹಿರಣ್ಯ’ ಸಿನೆಮಾದ ಟ್ರೇಲರ್ ಕೂಡ ಔಟ್ ಆ್ಯಂಡ್ ಔಟ್ ಮಾಸ್ ಆಗಿಯೇ ಮೂಡಿಬಂದಿದೆ. ಲವ್, ಆ್ಯಕ್ಷನ್, ಸೆಂಟಿಮೆಂಟ್, ಎಮೋಶನ್ಸ್ ಮೆಲೋಡಿ ಸಾಂಗ್ಸ್, ಅದ್ಧೂರಿ ಮೇಕಿಂಗ್ ಹೀಗೆ ಎಲ್ಲವೂ ‘ಹಿರಣ್ಯ’ ಸಿನೆಮಾದ ಟ್ರೇಲರ್ ನಲ್ಲಿ ಗಮನ ಸೆಳೆಯುತ್ತಿದೆ.
ನಿರ್ದೆಶಕ ಪ್ರವೀಣ್ ಅವ್ಯೂಕ್, ಕ್ರೂರ ಗುಣ ಹೊಂದಿದ ಪಾತ್ರವನ್ನಿಟ್ಟುಕೊಂಡು ‘ಹಿರಣ್ಯ’ ಸಿನೆಮಾದ ಕಥೆ ಹೆಣೆದಿದ್ದಾರೆ. ಈ ಹಿಂದೆ ‘ಬಿಚ್ಚುಗತ್ತಿ’ ಸಿನೆಮಾ ಮೂಲಕ ಭರವಸೆ ಮೂಡಿಸಿದ್ದ ರಾಜವರ್ಧನ್ ‘ಹಿರಣ್ಯ’ ಸಿನೆಮಾದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದು, ರಿಹಾನಾ ನಾಯಕಿಯಾಗಿ ನಟಿಸಿದ್ದಾರೆ. ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಸ್ಪೆಷಲ್ ರೋಲ್ ನಲ್ಲಿ ನಟಿಸಿದ್ದು, ಉಳಿದಂತೆ ಹುಲಿ ಕಾರ್ತಿಕ್, ಅರವಿಂದ್ ರಾವ್, ದಿಲೀಪ್ ಶೆಟ್ಟಿ ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ವೇದಾಸ್ ಇನ್ಫಿನಿಟಿ ಪಿಚ್ಚರ್’ ಬ್ಯಾನರ್‌ನಲ್ಲಿ ವಿಘ್ನೇಶ್ವರ್ ಮತ್ತು ವಿಜಯ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರಕ್ಕೆ ಯೋಗೇಶ್ವರನ್ ಆರ್. ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.
ಜುಲೈ. 19ಕ್ಕೆ ‘ಹಿರಣ್ಯ’ ತೆರೆಗೆ
ಸದ್ಯ ಟ್ರೇಲರ್ ಮೂಲಕ ನಿಧಾನವಾಗಿ ಸಿನಿ ಪ್ರಿಯರ ಗಮನ ಸೆಳೆಯುತ್ತಿರುವ ‘ಹಿರಣ್ಯ’ ಸಿನೆಮಾ ಇದೇ ಜುಲೈ 19ಕ್ಕೆ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಜಾಕ್ ಮಂಜು ಒಡೆತನದ ‘ಶಾಲಿನಿ ಆರ್ಟ್ಸ್’ ಈ ಸಿನೆಮಾವನ್ನು ರಾಜ್ಯಾದ್ಯಂತ ವಿತರಣೆ ಮಾಡಲಿದೆ.