Pop Corner

ಇತಿ ಚಿತ್ತ ಬಾಲಿವುಡ್ ನತ್ತ..!

ಹಿಂದಿ ಕಡೆಗೆ ಮುಖ ಮಾಡಲು ರೆಡಿಯಾದ ಮತ್ತೊಬ್ಬ ಕನ್ನಡತಿ ಇತಿ ಆಚಾರ್ಯ

ಬರ್ತಡೇ ದಿನವೇ ಹೊಸ ಚಿತ್ರದ ಅಪ್ ಡೇಟ್ ಕೊಟ್ಟ ನಟಿ

ಕನ್ನಡದಲ್ಲಿ ‘ಕವಚ’, ‘ಧ್ವನಿ’, ‘ಡೀಲ್‌ ರಾಜಾ’, ‘ಪಂಗನಾಮ’ ಸಿನೆಮಾಗಳಲ್ಲಿ ಅಭಿನಯಿಸಿ ನಟಿಯಾಗಿ ಗುರುತಿಸಿಕೊಂಡಿರುವ ಇತಿ ಆಚಾರ್ಯ, ನಂತರ ನಿಧಾನವಾಗಿ ಕನ್ನಡದ ಜೊತೆಗೆ ತೆಲುಗು ಮತ್ತು ತಮಿಳಿನಲ್ಲೂ ಕೆಲವು ಸಿನೆಮಾಗಳಲ್ಲಿ ಅಭಿನಯಿಸಿದ್ದರು. ಸದ್ಯ ಅಭಿನಯದ ಜೊತೆಗೆ ಇತಿ ಆಚಾರ್ಯ ಮಾಡೆಲಿಂಗ್‌ ನಲ್ಲೂ ಮಿಂಚುತ್ತಿದ್ದಾರೆ.

ಗ್ಲಾಮರಸ್‌ ಹುಡುಗಿಯ ಸಾಧನೆ…

2016ರ ʼಮಿಸ್ ಸೌತ್ ಇಂಡಿಯಾʼ ವಿನ್ನರ್ ಕಿರೀಟ ಮುಡಿಗೇರಿಸಿಕೊಂಡಿರುವ ಈ ಕನ್ನಡತಿ ‘ಆರ್.ವಿ.ಎಸ್.ಪಿ. ಪ್ರೊಡಕ್ಷನ್ ಹೌಸ್’ ಮೂಲಕ ನಿರ್ಮಾಪಕಿ ಆಗಿಯೂ ಗುರುತಿಸಿಕೊಂಡಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ಮಲಯಾಳಂ ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಇತಿ ಆಚಾರ್ಯ, ‘ಟೈಮ್ಸ್ ಸ್ಕ್ವೇರ್ ಬಿಲ್ ಬೋರ್ಡ್ ಹೋರ್ಡಿಂಗ್ಸ್’ ಕಾಣಿಸಿಕೊಂಡಿದ್ದರು. ಅಮೇರಿಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಮೆರ್ಲಿನ್ ಬಾಬಾಜಿ ಸಾಂಗ್‌ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಇತಿ ಆಚಾರ್ಯ ಅವರು ಜನಪ್ರಿಯತೆ ಪಡೆದಿದ್ದಾರೆ. ಅವರಿಂದು ಜನ್ಮದಿನದ ಸಂಭ್ರಮದಲ್ಲಿದ್ದಾರೆ.

ಇತಿ ಕಣ್ಣಲ್ಲಿ ಬಾಲಿವುಡ್‌ ಕನಸು…

ಇದೀಗ ಇತಿ ಆಚಾರ್ಯ ತಮ್ಮ ಹುಟ್ಟುಹಬ್ಬದ ಅಂಗವಾಗಿ ಹೊಸ ಸಿನಿಮಾದ ಅಪ್ ಡೇಟ್ ಹಂಚಿಕೊಂಡಿದ್ದಾರೆ. ‘ದಿ ಶೂಸ್ ಐ ವೋರ್’ ಎಂಬ ಹೊಸ ಹಿಂದಿ ಚಿತ್ರದಲ್ಲಿ ಇತಿ ನಾಯಕಿಯಾಗಿ ಬಣ್ಣ ಹಚ್ಚುತ್ತಿದ್ದಾರೆ. ಯುವ ಪ್ರತಿಭೆ ಸಂಜಯ್ ಚರಣ್ ನಿರ್ದೇಶನದ ಈ ಸಿನಿಮಾದಲ್ಲಿ ಇನ್ನಮುಲ್ಕ್ ಮತ್ತು ಸ್ಕ್ಯಾಮ್ ಖ್ಯಾತಿಯ ಫೈಸಲ್ ರಶೀದ್ ಗೆ ಜೋಡಿಯಾಗಿ ಕನ್ನಡತಿ ಅಭಿನಯಿಸಲಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇತಿ ಆಚಾರ್ಯ, ‘ನಾನು ಈ ಸಿನಿಮಾದ ಭಾಗವಾಗಿರುವುದಕ್ಕೆ ಖುಷಿ ಇದೆ. ತುಂಬಾ ಉತ್ಸುಕಳಾಗಿದ್ದೇನೆ. ಈ ಪಯಣದಲ್ಲಿ ಸಾಕಷ್ಟು ಕಲಿಯುವುದು ಇದೆ. ವಿಭಿನ್ನ ಕಥೆಯಾಗಿದ್ದು, ಇದೊಂದು ಟೆಕ್ನಿಕಲ್ ಸಿನಿಮಾ’ ಎಂದಿದ್ದಾರೆ.

Related Posts

error: Content is protected !!