Pop Corner

ಚಿರಂಜೀವಿ ‘ವಿಶ್ವಂಭರ’ ಸಿನಿಮಾಗೆ ಆಶಿಕಾ ಎಂಟ್ರಿ‌!

ಮೆಗಾಸ್ಟಾರ್ ಚಿರಂಜೀವಿ ಹೊಸ ಸಿನಿಮಾದಲ್ಲಿ ಆಶಿಕಾ ರಂಗನಾಥ್…

ಮತ್ತೊಂದು ತೆಲುಗು ಚಿತ್ರದಲ್ಲಿ ‘ಚುಟು ಚುಟು…’ ಚೆಲುವೆ

ಚಂದನವನದ ‘ಚುಟು ಚುಟು…’ ಚೆಲುವೆ ಆಶಿಕಾ ರಂಗನಾಥ್ ಸದ್ಯ ಕನ್ನಡದ ಸಿನೆಮಾಗಳ ಜೊತೆಗೆ ತೆಲುಗು ಸಿನೆಮಾಗಳಲ್ಲೂ ಬ್ಯುಸಿಯಾಗಿದ್ದಾರೆ.  ಈ ಮೊದಲು ಜೂನಿಯರ್ ಎನ್ ಟಿಆರ್ ಸಹೋದರ ಕಲ್ಯಾಣ್ ರಾಮ್ ಅಭಿನಯದ ‘ಅಮಿಗೋಸ್‌’ ಸಿನೆಮಾದ ಮೂಲಕ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದ ಆಶಿಕಾ ರಂಗನಾಥ್‌, ಆ ಬಳಿಕ ‘ನಾ ಸಾಮಿ ರಂಗ’ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ್ ಜೋಡಿಯಾಗಿ ನಟಿಸಿದ್ದರು. ಈಗಾಗಲೇ ತೆಲುಗಿನ ಹಲವು ಸ್ಟಾರ್ ನಟರ ಜೊತೆಗೆ ಅಭಿನಯಿಸಿ, ತೆಲುಗು ಚಿತ್ರ ಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಗಿ ಸೈ ಎನಿಸಿಕೊಂಡಿರುವ ಆಶಿಕಾ ರಂಗನಾಥ್‌, ಇದೀಗ ಮೊದಲ ಬಾರಿಗೆ ತೆಲುಗಿನ ಮೆಗಾ ಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಆಶಿಕಾ ರಂಗನಾಥ್‌ ತೆಲುಗು ಚಿತ್ರರಂಗದಲ್ಲಿ ಮತ್ತೊಂದು ದೊಡ್ಡ ಹೆಗ್ಗುರುತು ಮೂಡಿಸಿದಂತಾಗಿದೆ.

‘ವಿಶ್ವಂಭರ’ನ ಜೊತೆ ಆಶಿಕಾ ಹೆಜ್ಜೆ… 

ಹೌದು, ತೆಲುಗಿನ ಮೆಗಾ ಸ್ಟಾರ್‌ ಚಿರಂಜೀವಿ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಸಿನೆಮಾ ‘ವಿಶ್ವಂಭರ’ ದಲ್ಲಿ ʼಚುಟು ಚುಟು…ʼ ಚೆಲುವೆ ಆಶಿಕಾ ರಂಗನಾಥ್‌ ಪ್ರಮುಖ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ. ಸದ್ಯ ಈ ಪಾತ್ರದ ಬಗ್ಗೆ ಚಿತ್ರತಂಡದ ಕಡೆಯಿಂದ ಹೆಚ್ಚಿನ ಮಾಹಿತಿ ಹೊರಬಾರದಿದ್ದರೂ, ಆಶಿಕಾ ಅವರ ಪಾತ್ರದ ಬಗ್ಗೆ ಪ್ರೇಕ್ಷಕರಲ್ಲಿ ಒಂದಷ್ಟು ನಿರೀಕ್ಷೆ ಹೆಚ್ಚಿದೆ. ‘ವಿಶ್ವಂಭರ’ ಸಿನೆಮಾದಲ್ಲಿ ಮೆಗಾಸ್ಟಾರ್ ಚಿರಂಜೀವಿಗೆ ನಾಯಕಿಯಾಗಿ ತ್ರಿಷಾ ಕೃಷ್ಣನ್​ ನಟಿಸಲಿದ್ದಾರೆ. ಈ ಸಿನೆಮಾದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಆಶಿಕಾ ರಂಗನಾಥ್‌ ಕಾಣಿಸಿಕೊಳ್ಳಲಿದ್ದಾರೆ.

ಮುಂದಿನ ವರ್ಷ ‘ವಿಶ್ವಂಭರ’ ನ ಜೊತೆ ಬರಲಿದ್ದಾರೆ ಆಶಿಕಾ

‘ಯು ವಿ ಕ್ರಿಯೇಷನ್ ಬ್ಯಾನರ್’ ನಡಿ ವಿಕ್ರಮ್, ವಂಶಿ ಹಾಗೂ ಪ್ರಮೋದ್ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ‘ಬಿಂಬಿಸಾರ’ ಚಿತ್ರ ನಿರ್ದೇಶಿಸಿದ್ದ ವಸಿಷ್ಠ ‘ವಿಶ್ವಂಭರ’ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಆಸ್ಕರ್ ವಿಜೇತ ಎಂ. ಎಂ ಕೀರವಾಣಿ ಅವರು ಈ ಸಿನಿಮಾಗೆ ಸಂಗೀತ ಮಾಡುತ್ತಿದ್ದಾರೆ. ಚೋಟಾ ಕೆ ನಾಯ್ಡು ಛಾಯಾಗ್ರಹಣ, ರಾಮ ಲಕ್ಷ್ಮಣ ಸಾಹಸ ನಿರ್ದೇಶನ ‘ವಿಶ್ವಂಭರ’ ಚಿತ್ರಕ್ಕಿದೆ. ಈಗಾಗಲೇ ‘ವಿಶ್ವಂಭರ’ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷ 2025ರ ಸಂಕ್ರಾಂತಿ ಹಬ್ಬಕ್ಕೆ ‘ವಿಶ್ವಂಭರ’ ಸಿನೆಮಾ ಬಿಡುಗಡೆಯಾಗಲಿದೆ. ಒಟ್ಟಾರೆ ಆಶಿಕಾ ಹೊಸ ಸಿನೆಮಾ ‘ವಿಶ್ವಂಭರ’ ಹೇಗಿರಲಿದೆ ಎಂಬುದು, ಆಶಿಕಾ ಹೊಸ ಲುಕ್‌ ಹೇಗಿರಲಿದೆ, ಪ್ರೇಕ್ಷಕರಿಗೆ ಎಷ್ಟರ ಮಟ್ಟಿಗೆ ಎಂಬುದು ಗೊತ್ತಾಗಬೇಕಾದರೆ ಇನ್ನೂ ಕೆಲ ತಿಂಗಳು ಕಾಯಬೇಕು.

Related Posts

error: Content is protected !!