ದಾಖಲೆ ಮೊತ್ತಕ್ಕೆ ‘ಫೈರ್ ಫ್ಲೈ’ ಆಡಿಯೋ ಹಕ್ಕು ಬಿಕರಿ…?

ದಾಖಲೆ ಮೊತ್ತಕ್ಕೆ ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಆಡಿಯೋ ಮಾರಾಟ
‘ಆನಂದ್ ಆಡಿಯೋ’ ತೆಕ್ಕೆಗೆ ‘ಫೈರ್ ಫ್ಲೈ’ ಮ್ಯೂಸಿಕ್ ರೈಟ್ಸ್
ಈಗಾಗಲೇ ತನ್ನ ಟೈಟಲ್ ಮೂಲಕ ಕನ್ನಡ ಚಿತ್ರರಂಗದಲ್ಲಿ ಒಂದಷ್ಟು ಸದ್ದು ಮಾಡುತ್ತಿರುವ ‘ಫೈರ್ ಫ್ಲೈ’ ಸಿನೆಮಾದ ಕಡೆಯಿಂದ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅಂದಹಾಗೆ, ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ಎಂಬ ಕಾರಣದ ಜೊತೆಗೆ ಹೆಸರಾಂತ ತಾರೆಯರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಚ್ಯುತ್ ಕುಮಾರ್ ಹಾಗೂ ಸುಧಾರಾಣಿ ‘ಫೈರ್ ಫ್ಲೈ’ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ನವ ನಾಯಕ ಮತ್ತು ನಿರ್ದೇಶಕ ವಂಶಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ‘ಫೈರ್ ಫ್ಲೈ’ ಸಿನೆಮಾದ ಆಡಿಯೋ ಹಕ್ಕುಗಳು ದಾಖಲೆ ಮೊತ್ತಕ್ಕೆ ಮಾರಾಟವಾಗಿದೆಯಂತೆ!
ಶೀಘ್ರದಲ್ಲೇ ‘ಫೈರ್ ಫ್ಲೈ’ ಹಾಡುಗಳ ಬಿಡುಗಡೆ
ವಂಶಿ ಚೊಚ್ಚಲ ಬಾರಿಗೆ ನಿರ್ದೇಶಿಸಿ ನಟಿಸುತ್ತಿರುವ ‘ಫೈರ್ ಫ್ಲೈ’ ಸಿನೆಮಾಗೆ ಚರಣ್ ರಾಜ್ ಅದ್ಭುತ ಸಂಗೀತ ಒದಗಿಸಿದ್ದಾರೆ. ಶೀಘ್ರದಲ್ಲಿಯೇ ಚರಣ್ ಟ್ಯೂನ್ ಹಾಕಿರುವ ಹಾಡುಗಳು ಬಿಡುಗಡೆಯಾಗಲಿವೆ. ಚಿತ್ರತಂಡದ ಮೂಲಗಳ ಪ್ರಕಾರ ‘ಆನಂದ್ ಆಡಿಯೋ’ ಸಂಸ್ಥೆ ಒಂದೊಳ್ಳೆ ಮೊತ್ತಕ್ಕೆ ‘ಫೈರ್ ಫ್ಲೈ’ ಆಡಿಯೋ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಆಗಸ್ಟ್ ಅಥವಾ ಸೆಪ್ಟೆಂಬರ್ ವೇಳೆಗೆ ‘ಆನಂದ್ ಆಡಿಯೋ’ ಯೂ-ಟ್ಯೂಬ್ ನಲ್ಲಿ ಹಾಡುಗಳ ಹಬ್ಬ ಶುರುವಾಗಲಿದೆ.
‘ಫೈರ್ ಫ್ಲೈ’ ಸಿನೆಮಾದಲ್ಲಿ ವಂಶಿ ಅವರು ಹೀರೋ ಆಗಿ ಅಭಿನಯಿಸುತ್ತಿದ್ದಾರೆ. ಅಲ್ಲದೇ, ಅವರೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಹ್ಯಾಟ್ರಿಕ್ ಹೀರೋ’ ಶಿವರಾಜ್ಕುಮಾರ್ ಅವರ ಪುತ್ರಿ ನಿವೇದಿತಾ ಅವರು ಈ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಈ ಚಿತ್ರದ ಮೂಲಕ ವಂಶಿ ಅವರು ಸ್ವತಂತ್ರ ನಿರ್ದೇಶಕರಾಗಿ ಹಾಗೂ ಪೂರ್ಣಪ್ರಮಾಣದ ಹೀರೋ ಆಗಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ.
ಈ ಚಿತ್ರಕ್ಕೆ ಜಯ್ ರಾಮ್ ಅವರು ಸಹ-ನಿರ್ದೇಶಕನ ಮಾಡುತ್ತಿದ್ದಾರೆ. ಅಭಿಲಾಷ್ ಕಳತ್ತಿ ಅವರ ಛಾಯಾಗ್ರಹಣ, ಚರಣ್ ರಾಜ್ ಅವರ ಸಂಗೀತ ನಿರ್ದೇಶನ, ರಘು ನಿಡುವಳ್ಳಿ ಅವರ ಸಂಭಾಷಣೆ ಈ ಸಿನಿಮಾಗಿದೆ. ಬೆಳಕಿನ ಹಬ್ಬ ದೀಪಾವಳಿಗೆ ‘ಫೈರ್ ಫ್ಲೈ’ ಸಿನೆಮಾ ಥಿಯೇಟರ್ ಗೆ ಬರಲಿದೆ.