‘ಫೈರ್ ಫ್ಲೈ’ ಚಿತ್ರೀಕರಣ ಮುಕ್ತಾಯ

ಶಿವಣ್ಣನ ಪುತ್ರಿಯ ಚೊಚ್ಚಲ ನಿರ್ಮಾಣದ ಚೊಚ್ಚಲ ಚಿತ್ರ
ನಿವೇದಿತಾ ಶಿವರಾಜಕುಮಾರ್ ನಿರ್ಮಾಣದ ‘ಫೈರ್ ಫ್ಲೈ’ ಸಿನಿಮಾಗೆ ಕುಂಬಳಕಾಯಿ
‘ಫೈರ್ ಫ್ಲೈ’ ಶೂಟಿಂಗ್‌ಗೆ ಪ್ಯಾಕಪ್ ಎಂದ ನಟ ಕಂ ನಿರ್ದೇಶಕ ವಂಶಿ
ನಟ ಶಿವರಾಜಕುಮಾರ್ ಅವರ ದ್ವಿತೀಯ ಪುತ್ರಿ ನಿವೇದಿತಾ ಶಿವರಾಜಕುಮಾರ್, ‘ಫೈರ್ ಫ್ಲೈ’ ಸಿನೆಮಾದ ಮೂಲಕ ನಿರ್ಮಾಪಕಿಯಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಈಗ ಶಿವರಾಜಕುಮಾರ್ ಪುತ್ರಿ ನಿವೇದಿತಾ ನಿರ್ಮಾಣದ ಚೊಚ್ಚಲ ಸಿನೆಮಾ ‘ಫೈರ್ ಫ್ಲೈ’ ಸದ್ದಿಲ್ಲದೆ ತನ್ನ ಚಿತ್ರೀಕರಣವನ್ನೂ ಪೂರ್ಣಗೊಳಿಸಿದೆ. ಹೌದು, ಇತ್ತೀಚೆಗಷ್ಟೇ ‘ಫೈರ್ ಫ್ಲೈ’ ಸಿನೆಮಾದ ಚಿತ್ರೀಕರಣ ಮುಗಿದಿದ್ದು, ಸಿನೆಮಾದ ಕೊನೆ ದಿನದ ಚಿತ್ರೀಕರಣದ ವೇಳೆ ನಟರಾದ ಶಿವರಾಜ್ ಕುಮಾರ್, ಗೀತಾ ಶಿವರಾಜ್ ಕುಮಾರ್, ನಿವೇದಿತಾ ಶಿವರಾಜ್ ಕುಮಾರ್, ನಿರ್ದೇಶಕ ವಂಶಿ, ಸಂಗೀತ ನಿರ್ದೇಶಕ ಚರಣ್ ರಾಜ್, ನಾಯಕಿ ರಚನಾ ಸೇರಿದಂತೆ ಇಡೀ ‘ಫೈರ್ ಫ್ಲೈ’ ಚಿತ್ರತಂಡ ಭಾಗಿಯಾಗಿತ್ತು.
‘ಫೈರ್ ಫ್ಲೈ’ ಚಿತ್ರಕ್ಕೆ ವಂಶಿ ಹೀರೋ ಕಂ ಡೈರೆಕ್ಟರ್…
‘ಫೈರ್ ಫ್ಲೈ’ ಸಿನೆಮಾದಲ್ಲಿ ಯುವ ಪ್ರತಿಭೆ ವಂಶಿ ನಾಯಕನಾಗಿ ನಟಿಸುತ್ತಿದ್ದಾರೆ. ಇದರೊಂದಿಗೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದಾರೆ. ‘ಫೈರ್ ಫ್ಲೈ’ನಲ್ಲಿ ನಟ ಕಮ್ ನಿರ್ದೇಶಕನಾಗಿ ವಂಶಿ ಅವರು ‘ಡಬಲ್ ರೋಲ್’ನಲ್ಲಿ ಕಾಣಿಸಿಕೊಂಡಿದ್ದಾರೆ! ಉಳಿದಂತೆ ‘ಫೈರ್ ಫ್ಲೈ’ ಸಿನೆಮಾದಲ್ಲಿ ವಂಶಿ ಜೊತೆ ಸುಧಾರಾಣಿ, ಅಚ್ಯುತ್ ಕುಮಾರ್, ಶೀತಲ್ ಶೆಟ್ಟಿ ಸೇರಿದಂತೆ ಹಲವು ಹಿರಿಯ ನಟರು ಕೂಡ ಅಭಿನಯಿಸಿದ್ದಾರೆ. ಇನ್ನು ‘ಫೈರ್ ಫ್ಲೈ’ ಸಿನೆಮಾದಲ್ಲಿ ನಾಯಕ ವಂಶಿಗೆ ನಾಯಕಿಯಾಗಿ ರಚನಾ ಇಂದರ್ ಜೊತೆಯಾಗಿ ಅಭಿನಯಿಸಿದ್ದಾರೆ. ಬೆಂಗಳೂರು ಸುತ್ತಮುತ್ತ ‘ಫೈರ್ ಫ್ಲೈ’ ಸಿನೆಮಾದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಸದ್ಯ ಚಿತ್ರೀಕರಣ ಪೂರೈಸಿರುವ ‘ಫೈರ್ ಫ್ಲೈ’ ಚಿತ್ರತಂಡ ಇದೀಗ ಪೋಸ್ಟ್ ಪ್ರೊಡಕ್ಷನ್ ಕೆಲಸಗಳತ್ತ ಮುಖ ಮಾಡಿದೆ.
‘ಫೈರ್ ಫ್ಲೈ’ ಮೂಲಕ ಯುವ ಪ್ರತಿಭೆಗಳ ಪರಿಚಯ
‘ಫೈರ್ ಫ್ಲೈ’ ಸಿನೆಮಾಗೆ ಅಭಿಲಾಷ್ ಕಳತ್ತಿ ಛಾಯಾಗ್ರಹಣವಿದೆ. ಸಿನೆಮಾದ ಹಾಡುಗಳಿಗೆ ಚರಣ್ ರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ‘ಫೈರ್ ಫ್ಲೈ’ ಸಿನೆಮಾಕ್ಕೆ ರಘು ನಿಡುವಳ್ಳಿ ಅವರ ಸಂಭಾಷಣೆಯಿದೆ. ‘ಶ್ರೀ ಮುತ್ತು ಸಿನಿ ಸರ್ವಿಸ್’ ಸಂಸ್ಥೆ ಹೆಸರಿನಲ್ಲಿ ನಟ ಶಿವರಾಜಕುಮಾರ್ ಪುತ್ರಿ ನಿವೇದಿತಾ ಶಿವರಾಜಕುಮಾರ್ ಮೊದಲ ಬಾರಿಗೆ ಈ ಸಿನೆಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇನ್ನು ‘ಫೈರ್ ಫ್ಲೈ’ ಸಿನೆಮಾದ ಮೂಲಕ ಒಂದಷ್ಟು ಯುವ ಪ್ರತಿಭೆಗಳು ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದು, 2025ರ ಮಧ್ಯ ಭಾಗದಲ್ಲಿ ‘ಫೈರ್ ಫ್ಲೈ’ ಸಿನೆಮಾ ಥಿಯೇಟರಿಗೆ ಬರುವ ಸಾಧ್ಯತೆಯಿದೆ.