Video

‘ಆರಾಮ್ ಅರವಿಂದ್ ಸ್ವಾಮಿ’ಗೆ ಟ್ರೇಲರ್ ನಲ್ಲಿ ಟೆನ್ಷನ್…!

‘ಅರವಿಂದ್ ಸ್ವಾಮಿ’ ಲುಕ್‌ನಲ್ಲಿ ಅನೀಶ್‌ ಗೆ ಬರೀ ಟೆನ್ಷನ್…

‘ಆರಾಮ್ ಅರವಿಂದ್ ಸ್ವಾಮಿ’ ಜೊತೆಗೆ ಕಾಮಿಡಿ, ಆಕ್ಷನ್‌, ಟ್ವಿಸ್ಟ್…

ಟ್ರೇಲರ್ ನಲ್ಲಿ ‘ಆರಾಮ್ ಅರವಿಂದ್ ಸ್ವಾಮಿ’ ಅನೀಶ್ ಫನ್ ರೈಡ್

ಈಗಾಗಲೇ ತನ್ನ ಟೈಟಲ್‌, ಟೀಸರ್‌ ಮತ್ತು ಹಾಡುಗಳ ಮೂಲಕ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಒಂದಷ್ಟು ನಿರೀಕ್ಷೆ ಹೆಚ್ಚಿಸಿದ್ದ ನಟ ಅನೀಶ್ ತೇಜೇಶ್ವರ್ ಅಭಿನಯದ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾದ ಟ್ರೇಲರ್ ಬಿಡುಗಡೆಯಾಗಿದೆ. ಕಾಮಿಡಿ ಜೊತೆಗೆ ಎಮೋಷನ್, ಆಕ್ಷನ್ ಅಂಶಗಳನ್ನು ಬ್ಲೆಂಡ್ ಮಾಡಿ ಟ್ರೇಲರ್ ಕಟ್ ಮಾಡಲಾಗಿದೆ. 2 ನಿಮಿಷ 14 ಸೆಕೆಂಡ್ ಇರುವ ‘ಆರಾಮ್ ಅರವಿಂದ್ ಸ್ವಾಮಿ’ ಟ್ರೇಲರ್ ಫುಲ್ ಫನ್ ಆಗಿ ಮೂಡಿ ಬಂದಿದೆ. ಇನ್ನು ‘ಆರಾಮ್ ಅರವಿಂದ್ ಸ್ವಾಮಿ’ ಟ್ರೇಲರ್ ನಲ್ಲಿ ನೋಡೋಕ್ಕೆ ಫುಲ್ ‘ಆರಾಮ್’ ಆಗಿ ಇರುವ ‘ಅರವಿಂದ್ ಸ್ವಾಮಿ’ ಲೈಫ್ ನಲ್ಲಿ ಬರೀ ಟೆನ್ಷನ್ ಗಳೇ ತುಂಬಿವೆ. ಪ್ರೀತಿ, ಮದುವೆ, ದುಡ್ಡ, ಫ್ಯಾಮಿಲಿ ಸುತ್ತ ಇಡೀ ಸಿನೆಮಾದ ಕಥೆ ಸಾಗುತ್ತದೆ ಎಂಬ ಸುಳಿವನ್ನು ‘ಆರಾಮ್ ಅರವಿಂದ್ ಸ್ವಾಮಿ’ ಟ್ರೇಲರ್ ನಲ್ಲಿ ಬಿಟ್ಟು ಕೊಡಲಾಗಿದೆ.  ಒಂದೇ ಮಾತಿನಲ್ಲಿ ಹೇಳುವುದಾದರೆ ‘ಆರಾಮ್ ಅರವಿಂದ್ ಸ್ವಾಮಿ’ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಸಿನೆಮಾ ಎಂಬುದನ್ನು ಚಿತ್ರತಂಡ ಟ್ರೇಲರ್‌ನಲ್ಲಿ ಒತ್ತಿ ಹೇಳಿದಂತಿದೆ.

ಗಮನ ಸೆಳೆದ ‘ಆರಾಮ್ ಅರವಿಂದ್ ಸ್ವಾಮಿ’ ಝಲಕ್‌!

ಇನ್ನು ಬಿಡುಗಡೆಯಾಗಿರುವ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾದ ಟ್ರೇಲರ್‌ ಝಲಕ್ ನೋಡಿದರೆ, ಈ ಸಿನೆಮಾದಲ್ಲಿ ಅನೀಶ್ ಮತ್ತೊಮ್ಮೆ ಕಾಮಿಡಿ ಕಮಾಲ್‌ ಮಾಡುವ ಪ್ರಯತ್ನಕ್ಕೆ ಕೈ ಹಾಕಿದ್ದು, ಸಿನೆಮಾ ಅನೀಶ್‌ ಅವರಿಗೆ ಬ್ರೇಕ್ ನೀಡುವ ಎಲ್ಲಾ ಲಕ್ಷಣ ಕಾಣುತ್ತಿದೆ. ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾದಲ್ಲಿ ನಾಯಕ ಅನೀಶ್‌ ತೇಜೇಶ್ವರ್‌ ಅವರಿಗೆ ಮಿಲನಾ ನಾಗರಾಜ್, ಹೃತಿಕಾ ಶ್ರೀನಿವಾಸ್ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ. ಸಿನೆಮಾದ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ವೈವಿಬಿ ಶಿವಸಾಗರ್ ಛಾಯಾಗ್ರಹಣ, ಉಮೇಶ್‌ ಆರ್‌. ಬಿ ಸಂಕಲನ ಕಾರ್ಯ ಮಾಡಿದ್ದಾರೆ. ಶ್ರೀಕಾಂತ್ ಪ್ರಸನ್ನ ಹಾಗೂ ಪ್ರಶಾಂತ್ ರೆಡ್ಡಿ ಜಂಟಿಯಾಗಿ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾಕ್ಕೆ ಬಂಡವಾಳ ಹೂಡಿ ನಿರ್ಮಿಸಿದ್ದಾರೆ. ‘ನಮ್‌ ಗಣಿ ಬಿಕಾಂ ಪಾಸ್‌’, ‘ಗಜಾನನ ಆಂಡ್‌ ಗ್ಯಾಂಗ್‌’ ಚಿತ್ರಗಳ ಮೂಲಕ ಭರವಸೆ ಮೂಡಿಸಿರುವ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌-ಕಟ್‌ ಹೇಳಿರುವ ಮೂರನೇ ಚಿತ್ರ ಇದಾಗಿದ್ದು, ‘ಆರಾಮ್ ಅರವಿಂದ್ ಸ್ವಾಮಿ’ ಇದೇ ತಿಂಗಳ 22ಕ್ಕೆ ಸಿನಿಮಾ ತೆರೆಗೆ ಬರ್ತಿದೆ.

‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು …

99 ರೂಪಾಯಿ ಟಿಕೇಟ್ ಆಫರ್!

‘ಆರಾಮ್ ಅರವಿಂದ್ ಸ್ವಾಮಿ’ ಚಿತ್ರ ಇದೇ ತಿಂಗಳು 22 ರಂದು ರಿಲೀಸ್ ಆಗುತ್ತಿದೆ. ನವೆಂಬರ್ 22 ರಂದು ಎಲ್ಲೆಡೆ ಬರ್ತಿರೋ ಈ ಚಿತ್ರದ ಟಿಕೇಟ್ ಕೇವಲ 99 ರೂಪಾಯಿ ಆಗಿದೆ. ಆದರೆ ಈ ಒಂದು ಆಫರ್ ಸಿನೆಮಾ ಥಿಯೇಟರ್‌ನಲ್ಲಿರೋವರೆಗೂ ಇರೋದಿಲ್ಲ. ಸಿನೆಮಾ ಬಿಡುಗಡೆಯಾದ ಮೂರು ದಿನಗಳ ಕಾಲ ಈ ಆಫರ್‌ ಇರಲಿದೆಯಂತೆ. ಅಂದರೆ ‘ಆರಾಮ್ ಅರವಿಂದ್ ಸ್ವಾಮಿ’ ಸಿನೆಮಾ ರಿಲೀಸ್ ಆದ ಮೂರು ದಿನ ಮಾತ್ರ ಈ ಒಂದು ಆಫರ್ ಇರುತ್ತದೆ. ಆ ಮೇಲೆ ಎಂದಿನಂತೆ ಟಿಕೇಟ್ ದರ ಇರಲಿದೆ ಎಂದಿವೆ ಚಿತ್ರತಂಡ.

Related Posts

error: Content is protected !!