Video

‘ಗಜರಾಮ’ ಟೈಟಲ್ ಟ್ರ್ಯಾಕ್ ರಿಲೀಸ್

ಹಾಡಿನಲ್ಲಿ ಹೊರಬಂದ ‘ಗಜರಾಮ’

ಪ್ರಚಾರದ ಭಾಗವಾಗಿ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಿದ ಚಿತ್ರತಂಡ

ನಟ ರಾಜವರ್ಧನ್‌ ಅಭಿನಯದ ‘ಗಜರಾಮ’ ಸಿನೆಮಾ ತೆರೆಗೆ ಬರಲು ಸಿದ್ಧವಾಗುತ್ತಿದೆ. ಸದ್ಯ ನಿಧಾನವಾಗಿ ‘ಗಜರಾಮ’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಈಗ ಒಂದೊಂದೆ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರನ್ನು ತನ್ನತ್ತ ಸೆಳೆಯುವ ಕಸರತ್ತು ಮಾಡುತ್ತಿದೆ. ಕೆಲ ದಿನಗಳ ಹಿಂದಷ್ಟೇ ‘ಗಜರಾಮ’ ಸಿನೆಮಾದ ‘ಸಾರಾಯಿ ಶಾಂತಮ್ಮ…’ ಎಂಬ ಐಟಂ ಡ್ಯಾನ್ಸ್‌ ನಂಬರ್‌ ಹಾಡೊಂದನ್ನು ಬಿಡುಗಡೆ ಮಾಡಿದ್ದ ಚಿತ್ರತಂಡ, ಈಗ ‘ಗಜರಾಮ’ನ ಟೈಟಲ್‌ ಟ್ರ್ಯಾಕ್‌ ಅನ್ನು ಬಿಡುಗಡೆ ಮಾಡಿದೆ.

‘ಗಜರಾಮ’ ಸಿನೆಮಾದ ‘ಹೆದರದಲೆ ನುಗ್ಗುತ್ತಿರು ಗಜರಾಮ…’ ಟೈಟಲ್ ಟ್ರ್ಯಾಕ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು…

ಮನೋಮೂರ್ತಿ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ‘ಗಜರಾಮ’ ಸಿನೆಮಾದ ‘ಹೆದರದಲೆ ನುಗ್ಗುತ್ತಿರು ಗಜರಾಮ…’ ಎಂಬ ಟೈಟಲ್‌ ಟ್ರ್ಯಾಕ್‌ಗೆ ಚೇತನ್ ಕುಮಾರ್ ಸಾಹಿತ್ಯ ಒದಗಿಸಿದ್ದಾರೆ. ಮಾಸ್‌ ಆಗಿ ಮೂಡಿಬಂದಿರುವ ಈ ಗೀತೆ ಗಾಯಕ ಹೇಮಂತ್ ಧ್ವನಿಯಲ್ಲಿ ಮೂಡಿಬಂದಿದೆ.

ಸುನೀಲ್ ಕುಮಾರ್ ವಿ. ಎ ನಿರ್ದೇಶನದ ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ‘ಗಜರಾಮ’ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ. ಶಿಷ್ಯ ದೀಪಕ್, ಕಬೀರ್ ದುಹಾನ್ ಸಿಂಗ್, ಸಂತು, ಪವನ್, ವಿಜಯ್ ಚೆಂಡೂರು ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ. ‘ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹಮೂರ್ತಿ ‘ಗಜರಾಮ’ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಸಿನೆಮಾ ಹಾಡುಗಳು ಮೂಡಿ ಬಂದಿವೆ.

Related Posts

error: Content is protected !!