ರಶ್ಮಿಕಾ ಜತೆ ರಿಲೇಷನ್ ಶಿಪ್ ಬಗ್ಗೆ ಮಾತಾಡಿದ್ರ ವಿಜಯ್ ದೇವರಕೊಂಡ..!?

ಡೇಟ್ ಲೈಫ್ ಬಗ್ಗೆ ವಿಜಯ್ ಟಾಕ್!
‘ಕರ್ಲಿಟೇಲ್ಸ್’ಗೆ ನೀಡಿದ ಸಂದರ್ಶನದಲ್ಲಿ ತಮ್ಮ ರಿಲೇಷನ್ ಶಿಪ್ ಸ್ಟೇಟಸ್ ಬಗ್ಗೆ ಮಾತನಾಡಿದ ದೇವರಕೊಂಡ
ಮತ್ತೆ ಮುನ್ನೆಲೆಗೆ ಬಂದ ರಶ್ಮಿಕಾ – ವಿಜಯ್ ರಿಲೇಷನ್‌ಶಿಪ್ ಸುದ್ದಿ
ಮುಚ್ಚಿಟ್ಟ ಗುಟ್ಟು ಬಿಚ್ಚಿಟ್ಟ ವಿಜಯ್…
ಹೌದು, ಇಲ್ಲಿಯವರೆಗೆ ತಮ್ಮ ಡೇಟಿಂಗ್ ಬಗ್ಗೆ ಎಲ್ಲಿಯೂ ಮಾತನಾಡಿರದ ವಿಜಯ್ ದೇವರಕೊಂಡ, ಇದೀಗ ತಾನು ರಿಲೇಷನ್ ಶಿಪ್‌ನಲ್ಲಿ ಇದ್ದೇನೆ ಎಂದು ಸ್ವತಃ ಒಪ್ಪಿಕೊಂಡಿದ್ದಾರೆ. ‘ಕರ್ಲಿ ಟೇಲ್ಸ್‘ಗೆ ನೀಡಿದ ಸಂದರ್ಶನದಲ್ಲಿ, ‘ನಾನು ಸಿಂಗಲ್ ಅಲ್ಲ‘ ಎಂದು ಹೇಳಿದ್ದಾರೆ. ಈ ಮೂಲಕ ‘ಅರ್ಜುನ್ ರೆಡ್ಡಿ‘ ನಟ ತಮ್ಮ ರಿಲೇಷನ್ ಶಿಪ್ ಸ್ಟೇಟಸ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ವಿಜಯ್ ಏನಂದ್ರು..?
ಫ್ರೆಂಡ್‌ಶಿಪ್ ಫಸ್ಟ್…, ಡೇಟಿಂಗ್ ನೆಕ್ಸ್ಟ್!
‘ಅರ್ಜುನ್ ರೆಡ್ಡಿ‘ ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ..?
ಎಲ್ಲರಿಗೂ ಗೊತ್ತಿರುವಂತೆ ವಿಜಯ್ ದೇವರಕೊಂಡ – ರಶ್ಮಿಕಾ ಮಂದಣ್ಣ ಜೋಡಿ ‘ಗೀತಾ ಗೋವಿಂದಂ‘, ‘ಡಿಯರ್ ಕಾರ್ಮೆಡ್‘ ಸಿನೆಮಾದಲ್ಲಿ ಒಟ್ಟಿಗೆ ಅಭಿನಯಿಸಿದ್ದಾರೆ. ಇದಾದ ಬಳಿಕ ಇಬ್ಬರೂ ಅನೇಕ ಕಡೆ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಪಾರ್ಟಿ, ಹಾಲಿಡೇ ಮೋಡ್‌ನಲ್ಲಿ ವಿಜಯ್ – ರಶ್ಮಿಕಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಇಬ್ಬರು ತಾವು ಸ್ನೇಹಿತರಷ್ಟೇ ಎಂದು ಹೇಳುತ್ತಾ ಬಂದಿದ್ದಾರೆ. ಆದರೆ ಇದೀಗ ವಿಜಯ್ ದೇವರಕೊಂಡ ಅವರು ರಿಲೇಷನ್ ಶಿಪ್ ಬಗ್ಗೆ ಮಾತನಾಡಿದ ಬಳಿಕ ರಶ್ಮಿಕಾ ಅವರ ಜತೆಗಿನ ಸಂಬಂಧವನ್ನು ಅವರು ದೃಢಪಡಿಸಿದ್ದಾರೆ ಎನ್ನುವ ಮಾತುಗಳು ಟಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ಇನ್ನು ಕಳೆದ ಕೆಲ ಸಮಯದಿಂದ ರಶ್ಮಿಕಾ ಬ್ಯಾಕ್ ಟು ಬ್ಯಾಕ್ ಹಿಟ್ ಸಿನೆಮಾಗಳಲ್ಲಿ ಅಭಿನಯಿಸುತ್ತಿದ್ದರೆ, ಮತ್ತೊಂದೆಡೆ ವಿಜಯ್ ದೇವರಕೊಂಡ ಅವರ ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಹೇಳಿಕೊಳ್ಳುವ ಮಟ್ಟಿಗೆ ಕಮಾಲ್ ಮಾಡುತ್ತಿಲ್ಲ. ಸದ್ಯ ವಿಜಯ್ ದೇವರಕೊಂಡ ಇನ್ನೂ ಹೆಸರಿಡದ ‘ವಿಡಿ12‘ ಸಿನೆಮಾದಲ್ಲಿ ಅಭಿನಯಿಸುತ್ತಿದ್ದರೆ, ಅತ್ತ ರಶ್ಮಿಕಾ ಮಂದಣ್ಣ ‘ಪುಷ್ಪ-2‘ ಸಿನೆಮಾದ ಬಿಡುಗಡೆ ಎದುರು ನೋಡುತ್ತಿದ್ದಾರೆ.