‘ದೇವನಾಂಪ್ರಿಯ’ನ ಹೊಸ ಪೋಸ್ಟರ್ ಬಿಡುಗಡೆ

ಬರ್ತಡೇ ಖುಷಿಯಲ್ಲಿ ತಾಂಡವ್ ರಾಮ್…
ಎರಡನೇ ಹಂತದ ಚಿತ್ರೀಕರಣಕ್ಕೆ ರೆಡಿ ‘ದೇವನಾಂಪ್ರಿಯ’…
ತಾಂಡವ್ ಹುಟ್ಟುಹಬ್ಬಕ್ಕೆ ‘ದೇವನಾಂಪ್ರಿಯ’ ಹೊಸ ಪೋಸ್ಟರ್
ಕನ್ನಡ ಕಿರುತೆರೆಯಲ್ಲಿ ‘ಜೋಡಿ ಹಕ್ಕಿ’, ‘ಭೂಮಿಗೆ ಬಂದ ಭಗವಂತ’ ದಂತಹ ಹಲವು ಧಾರಾವಾಹಿಗಳಲ್ಲಿ ನಟಿಸಿ ಕಿರುತೆರೆ ಪ್ರೇಕ್ಷಕರ ಮೆಚ್ಚುಗೆ ಗಳಿಸಿರುವ ನಟ ತಾಂಡವ್ ರಾಮ್. ಈಗ ಕಿರುತೆರೆಯಿಂದ ಹಿರಿತೆರೆಯತ್ತ ಮುಖ ಮಾಡುತ್ತಿರುವ ನಟ ತಾಂಡವ ರಾಮ್ ಕನ್ನಡ ಚಿತ್ರರಂಗದಲ್ಲಿ ಗಟ್ಟಿಯಾಗಿ ನೆಲೆಯೂರಬೇಕೆಂಬ ಕನಸು ಕಾಣುತ್ತಿದ್ದಾರೆ. ಅದರಂತೆ ಒಂದೊಳ್ಳೆ ಕಥೆ ಆಯ್ಕೆ ಮಾಡಿಕೊಂಡು ‘ದೇವನಾಂಪ್ರಿಯ’ ಎಂಬ ಸಿನೆಮಾ ಮೂಲಕ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈಗಾಗಲೇ ಸದ್ದಿಲ್ಲದೆ ‘ದೇವನಾಂಪ್ರಿಯ’ ಚಿತ್ರದಲ್ಲಿ ಬ್ಯುಸಿಯಾಗಿರುವ ತಾಂಡವ ರಾಮ್ ಈಗ ಜನ್ಮದಿನದ ಖುಷಿಯಲ್ಲಿದ್ದಾರೆ. ತಾಂಡವ್ ರಾಮ್ ಹುಟ್ಟುಹಬ್ಬದ ವಿಶೇಷವಾಗಿ ‘ದೇವನಾಂಪ್ರಿಯ’ ಚಿತ್ರತಂಡ ಸಿನೆಮಾದ ಹೊಸ ಪೋಸ್ಟರ್ ರಿಲೀಸ್ ಮಾಡಿದೆ. ಸದ್ಯ ಬಿಡುಗಡೆಯಾಗಿರುವ ‘ದೇವನಾಂಪ್ರಿಯ’ ಚಿತ್ರದ ಪೋಸ್ಟರ್ ಬಳಹ ಆಕರ್ಷವಾಗಿದ್ದು, ಇಡೀ ಕುಟುಂಬ ಕುಳಿತು ನೋಡುವ ಚಿತ್ರ ಎಂಬ ಸುಳಿವನ್ನು ಚಿತ್ರತಂಡ ಪೋಸ್ಟರ್‌ನಲ್ಲಿ ಬಿಟ್ಟುಕೊಟ್ಟಿದೆ.
ಮೊದಲ ಹಂತದ ಚಿತ್ರೀಕರಣ ಮುಗಿಸಿದ ‘ದೇವನಾಂಪ್ರಿಯ’
ಈಗಾಗಲೇ ‘ದೇವನಾಂಪ್ರಿಯ’ ಸಿನೆಮಾದ ಮೊದಲ ಹಂತದ ಚಿತ್ರೀಕರಣವನ್ನು ಚಿತ್ರತಂಡ ಯಶಸ್ವಿಯಾಗಿ ಮುಗಿಸಿಕೊಂಡಿದೆ. ಶೀಘ್ರದಲ್ಲೇ ಎರಡನೇ ಹಂತದ ಚಿತ್ರೀಕರಣಕ್ಕೆ ಹೊರಡಲು ಚಿತ್ರತಂಡ ಸಜ್ಜಾಗಿದೆ. ಇದರ ನಡುವೆಯೇ ಚಿತ್ರತಂಡ ‘ದೇವನಾಂಪ್ರಿಯ’ ಸಿನೆಮಾದ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಇನ್ನು ಫ್ಯಾಮಿಲಿ ಹಾಗೂ ರೀವಿಂಜ್ ಕಥಾಹಂದರ ಹೊಂದಿರುವ ‘ದೇವನಾಂಪ್ರಿಯ’ ಸಿನಿಮಾವನ್ನು ‘ಎ ಕ್ಯೂಬ್ ಫಿಲಂಸ್’ ಸಂಸ್ಥೆಯ ಅಡಿಯಲ್ಲಿ ಮೂಡಿ ಬರಲಿದೆ. ‘ದೇವನಾಂಪ್ರಿಯ’ ಸಿನೆಮಾದಲ್ಲಿ ತಾಂಡವ ರಾಮ್ ಅವರೊಂದಿಗೆ ಹಿರಿಯ ನಟಿ ಉಮಾಶ್ರೀ. ತಾರಾ ಅನುರಾಧಾ, ಚರಣ್ ರಾಜ್, ವೀಣಾ ಸುಂದರ್, ಧರ್ಮ, ತಬಲಾ ನಾಣಿ, ರವಿಶಂಕರ್ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ದೇವನಾಂಪ್ರಿಯ’ ಸಿನೆಮಾಕ್ಕೆ ಕಾರ್ತಿಕ್ ಶರ್ಮಾ ಛಾಯಾಗ್ರಹಣ, ಅರ್ಜುನ್ ಕಿಟ್ಟು ಸಂಕಲನವಿದೆ. ಸದ್ಯ ಸಿನೆಮಾದ ಚಿತ್ರೀಕರಣದಲ್ಲಿ ನಿರತವಾಗಿರುವ ಚಿತ್ರತಂಡ 2025ರ ಕೊನೆಗೆ ‘ದೇವನಾಂಪ್ರಿಯ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.