Quick ಸುದ್ದಿಗೆ ಒಂದು click

‘ಲಚ್ಚಿ’ ಮುಡಿಗೆ ಪ್ರಶಸ್ತಿ ಗರಿ

‘ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ಪ್ರಶಸ್ತಿ

ಭಾರತೀಯ ಭಾಷಾ ಚಿತ್ರಗಳ ವಿಭಾಗದಲ್ಲಿ ‘ಲಚ್ಚಿ’ ಚಿತ್ರಕ್ಕೆ ಮೊದಲ ಸ್ಥಾನ

ಕೋಲ್ಕತ್ತಾದಲ್ಲಿ ಡಿ. 4 ರಿಂದ ಡಿ. 11ರ ವರೆಗೆ ನಡೆದ ಚಿತ್ರೋತ್ಸವ

‘ಸಪ್ತಗಿರಿ ಕ್ರಿಯೇಷನ್‌’ ಬ್ಯಾನರಿನಲ್ಲಿ ಕೃಷ್ಣೇಗೌಡ ನಿರ್ಮಿಸಿ, ನಿರ್ದೇಶಿಸಿರುವ ‘ಲಚ್ಚಿ’ ಸಿನೆಮಾ ಈ ಬಾರಿ ‘ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ ನಲ್ಲಿ ‘ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಇದೇ ಡಿಸೆಂಬರ್‌ 4 ರಿಂದ 11ರ ವರೆಗೆ ಒಂದು ವಾರಗಳ ಕಾಲ ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ನಡೆದ ’30ನೇ ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ ನಲ್ಲಿ ದೇಶ-ವಿದೇಶಗಳ ಸುಮಾರು 300ಕ್ಕೂ ಹೆಚ್ಚು ಸಿನೆಮಾಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಪ್ರದರ್ಶನಗೊಂಡಿದ್ದವು.

‘ಭಾರತೀಯ ಭಾಷಾ ಚಿತ್ರಗಳ ವಿಭಾಗ’ದಲ್ಲಿ ಪ್ರಶಸ್ತಿ ಗೆದ್ದ ‘ಲಚ್ಚಿ’

ಇನ್ನು ಈ ಬಾರಿ ಕೋಲ್ಕತ್ತಾದಲ್ಲಿ ನಡೆದ ’30ನೇ ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ ನಲ್ಲಿ ‘ಭಾರತೀಯ ಭಾಷಾ ಚಿತ್ರಗಳ ವಿಭಾಗ’ದಲ್ಲಿ ‘ಲಚ್ಚಿ’ ಸಿನೆಮಾ ‘ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಭಾರತದ ವಿವಿಧ ಭಾಷೆಗಳ ಸುಮಾರು 80ಕ್ಕೂ ಹೆಚ್ಚು ಸಿನೆಮಾಗಳು ಈ ವಿಭಾಗದಲ್ಲಿ ಸ್ಪರ್ಧೆಯಲ್ಲಿದ್ದು, ಅಂತಿಮವಾಗಿ ‘ಲಚ್ಚಿ’ ಸಿನೆಮಾ ‘ಭಾರತೀಯ ಭಾಷಾ ಚಿತ್ರಗಳ ವಿಭಾಗ’ದಲ್ಲಿ’ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.  ‘ಲಚ್ಚಿ’ ಸಿನೆಮಾಕ್ಕೆ ಪ್ರಶಸ್ತಿ ಸಿಕ್ಕುವ ಮೂಲಕ ಸುಮಾರು ಒಂದೂವರೆ ದಶಕದ ಬಳಿಕ ಕನ್ನಡದ ಚಿತ್ರವೊಂದಕ್ಕೆ ‘ಕೋಲ್ಕತ್ತಾ ಇಂಟರ್‌ನ್ಯಾಷನಲ್‌ ಫಿಲಂ ಫೆಸ್ಟಿವಲ್‌’ನಲ್ಲಿ ‘ಮೊದಲ ಅತ್ಯುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಂತಾಗಿದೆ.

ಕೃಷ್ಣೇಗೌಡ ನಿರ್ಮಾಣ, ನಿರ್ದೇಶನದ ‘ಲಚ್ಚಿ’ ಸಿನೆಮಾ

ಕನ್ನಡ ಚಿತ್ರರಂಗದಲ್ಲಿ ನಟನಾಗಿ, ನಿರ್ಮಾಪಕನಾಗಿ ಮತ್ತು ನಿರ್ದೇಶಕನಾಗಿ ಗುರುತಿಸಿಕೊಂಡಿರುವ ಕೃಷ್ಣೇಗೌಡ ನಿರ್ಮಾಣ ಮತ್ತು ನಿರ್ದೇಶನದಲ್ಲಿ ‘ಲಚ್ಚಿ’ ಸಿನೆಮಾ ಮೂಡಿಬಂದಿದೆ. ಮಾಜಿ ಸಚಿವೆ ಮತ್ತು ಹಿರಿಯ ಲೇಖಕಿ ಡಾ. ಬಿ. ಟಿ. ಲಲಿತಾ ನಾಯ್ಕ್‌ ಅವರ ಕಾದಂಬರಿಯನ್ನು ಆಧರಿಸಿ ತೆರೆಗೆ ಬಂದಿರುವ ‘ಲಚ್ಚಿ’ ಸಿನೆಮಾದಲ್ಲಿ ಗ್ರೀಷ್ಮಾ ಶ್ರೀಧರ್‌, ತೇಜಸ್ವಿನಿ ಗೌಡ, ನಾರಾಯಣ ಸ್ವಾಮಿ, ಕಾವೇರಿ ಶ್ರೀಧರ್‌, ಮಹಾದೇವ ಹಡಪದ, ಕೃಷ್ಣೇಗೌಡ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಲಚ್ಚಿ’ ಸಿನೆಮಾಕ್ಕೆ ಅರ್ಜುನ್‌ ರಾಜ ಛಾಯಾಗ್ರಹಣ, ನಾಗೇಶ್‌ ಎನ್‌. ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಹೆಣ್ಣು ಮಗುವೊಂದನ್ನು ಉಳಿಸಿಕೊಳ್ಳಲು ಹೋರಾಡುವ ತಾಯಿಯೊಬ್ಬಳ ಹೋರಾಟದ ಕಥೆಯನ್ನು ‘ಲಚ್ಚಿ’ ಸಿನೆಮಾದ ಮೂಲಕ ತೆರೆಮೇಲೆ ತರಲಾಗಿದೆ.

Related Posts

error: Content is protected !!