ರಿಲೀಸ್ ಆಯ್ತು ‘ಔಟ್ ಆಫ್ ಸಿಲಬಸ್’ ಟ್ರೇಲರ್

‘ಔಟ್ ಆಫ್ ಸಿಲಬಸ್’ ಟ್ರೇಲರ್ ಹೊರಬಂತು
2024ರ ಡಿಸೆಂಬರ್ 27ಕ್ಕೆ ‘ಔಟ್ ಆಫ್ ಸಿಲಬಸ್’ ತೆರೆಗೆ
ಹರೆಯದ ಹುಡುಗರ ಮತ್ತೊಂದು ಪ್ರೇಮ್ ಕಹಾನಿ
ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ಔಟ್ ಆಫ್ ಸಿಲಬಸ್’ ಸಿನೆಮಾದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀಮತಿ ವಿಜಯಕಲಾ ಸುಧಾಕರ್, ತನುಷ್ ಎಸ್ ವಿ, ದೇಸಾಯಿ ಗೌಡ ಜಂಟಿಯಾಗಿ ನಿರ್ಮಾಣ ಮಾಡಿರುವ, ‘ಔಟ್ ಆಫ್ ಸಿಲಬಸ್’ ಸಿನೆಮಾಕ್ಕೆ ಪ್ರದೀಪ್ ದೊಡ್ಡಯ್ಯ ನಿರ್ದೇಶನವಿದ್ದು, ಜೊತೆಗೆ ‘ಔಟ್ ಆಫ್ ಸಿಲಬಸ್’ ಸಿನೆಮಾದಲ್ಲಿ ತೆರೆಮೇಲೆ ನಾಯಕನಾಗಿಯೂ ಕಾಣಿಸಿಕೊಂಡಿದ್ದಾರೆ.
ಇನ್ನು ಬಿಡುಗಡೆಯಾಗಿರುವ ‘ಔಟ್ ಆಫ್ ಸಿಲಬಸ್’ ಸಿನೆಮಾದ ಟ್ರೇಲರ್ ಸಖತ್ ಇಂಟರೆಸ್ಟಿಂಗ್ ಆಗಿದ್ದು, ಯುವ ಜನತೆಯನ್ನು ಕೇಂದ್ರವಾಗಿಟ್ಟು ಸಿನೆಮಾದ ಕಥೆಯನ್ನು ಹೇಳಲಾಗಿದೆ. ಲವ್, ಕಾಮಿಡಿ, ಕಾಲೇಜ್ ಲೈಫ್, ಫ್ರೆಂಡ್‌ಶಿಪ್, ಫನ್ ಹೀಗೆ ಒಂದಷ್ಟು ಮನೋರಂಜನೆ ಕೊಡುವ ಎಲ್ಲ ಅಂಶಗಳನ್ನು ‘ಔಟ್ ಆಫ್ ಸಿಲಬಸ್’ ಒಳಗೊಂಡಿದೆ. ಅದರಲ್ಲೂ ಯುವ ಜನತೆಯನ್ನು ಕೇಂದ್ರವಾಗಿರಿಸಿಕೊಂಡು ಸಿನೆಮಾದ ಕಥೆಯನ್ನು ಹೇಳಲಾಗಿದೆ ಎಂಬ ಸಣ್ಣ ಸುಳಿವನ್ನು ಚಿತ್ರತಂಡ ‘ಔಟ್ ಆಫ್ ಸಿಲಬಸ್’ ಸಿನೆಮಾದ ಟ್ರೇಲರ್‌ನಲ್ಲಿ ಬಿಟ್ಟುಕೊಟ್ಟಿದೆ.
‘ಔಟ್ ಆಫ್ ಸಿಲಬಸ್’ ಸಿನೆಮಾದ ಟ್ರೇಲರ್ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಔಟ್ ಆಫ್ ಸಿಲಬಸ್’ನಲ್ಲಿ ಹಿರಿ-ಕಿರಿಯರ ಸಮಾಗಮ!
‘ಔಟ್ ಆಫ್ ಸಿಲಬಸ್’ ಸಿನೆಮಾದಲ್ಲಿ ನಾಯಕ ಪ್ರದೀಪ್ ದೊಡ್ಡಯ್ಯ ಅವರಿಗೆ ನಾಯಕಿಯಾಗಿ ಹೃತಿಕಾ ಶ್ರೀನಿವಾಸ್ ಜೋಡಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಅಚ್ಯುತ್ ಕುಮಾರ್, ಯೋಗರಾಜ್ ಭಟ್, ರಾಮಕೃಷ್ಣ, ಚಿತ್ಕಲಾ ಬಿರಾದಾರ್, ಮಂಜು ಪಾವಗಡ, ಮಹಾಂತೇಶ್ ಹಿರೇಮಠ್ ಮುಂತಾದವರು ‘ಔಟ್ ಆಫ್ ಸಿಲಬಸ್’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಔಟ್ ಆಫ್ ಸಿಲಬಸ್’ ಸಿನೆಮಾಕ್ಕೆ ದೇವ ವಡ್ಡೆ ಛಾಯಾಗ್ರಹಣ, ಉಮೇಶ್ ಆರ್. ಬಿ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸೇರಿದ್ದಾರೆ.
ಇದೇ ವರ್ಷಾಂತ್ಯಕ್ಕೆ ‘ಔಟ್ ಆಫ್ ಸಿಲಬಸ್’ ರಿಲೀಸ್
ಅಂದಹಾಗೆ, ‘ಔಟ್ ಆಫ್ ಸಿಲಬಸ್’ ಸಿನೆಮಾ ಇದೇ ವರ್ಷಾಂತ್ಯಕ್ಕೆ ತೆರೆಗೆ ಬರುವ ಯೋಚನೆಯಲ್ಲಿದೆ. ‘ಔಟ್ ಆಫ್ ಸಿಲಬಸ್’ ಚಿತ್ರದ ಟ್ರೇಲರ್ ಬಿಡುಗಡೆ ಜೊತೆಗೆ ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಚಿತ್ರ ತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಇದೇ 2024ರ ಡಿಸೆಂಬರ್ 27ರಂದು ‘ಔಟ್ ಆಫ್ ಸಿಲಬಸ್’ ಸಿನೆಮಾವನ್ನು ಥಿಯೇಟರಿಗೆ ತರುವುದಾಗಿ ಚಿತ್ರತಂಡ ತಿಳಿಸಿದೆ.
ಇನ್ನು ಮೋಟಿವೇಶನ ಸ್ಪೀಕರ್ ಆಗಿ,ಹಲವಾರು ಮಕ್ಕಳಿಗೆ ಸ್ಪೂರ್ತಿದಾಯಕ ಮಾತುಗಳನ್ನ ಹೇಳಿ, ಅದರ ಜೊತೆಗೆ ಜಾಹೀರಾತು ಸಂಸ್ಥೆ ಮೂಲಕ ಕನ್ನಡ ಚಿತ್ರೋದ್ಯಮದ ಜೊತೆ ನಿರಂತರವಾದ ಸಂಪರ್ಕ ಹೊಂದಿರುವ, ಪ್ರದೀಪ್ ದೊಡ್ಡಯ್ಯ, ಕನ್ನಡದ ಬಹಳಷ್ಟು ಖ್ಯಾತ ನಿರ್ದೇಶಕರುಗಳ ಜೊತೆಗೆ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ‘ಔಟ್ ಆಫ್ ಸಿಲಬಸ್’ ಸಿನೆಮಾದ ಮೂಲಕ ಈಗ ಪ್ರದೀಪ್ ದೊಡ್ಡಯ್ಯ ನಾಯಕ ಕಂ ನಿರ್ದೇಶಕನಾಗಿ ಸ್ಯಾಂಡಲ್‌ವುಡ್‌ಗೆ ಪರಿಚಯವಾಗುತ್ತಿದ್ದಾರೆ.