Street Beat

‘ಚೌಕಿದಾರ್’ ಬಳಗ ಸೇರಿದ ಸುಧಾರಾಣಿ

ಪೃಥ್ವಿ ಅಂಬಾರ್-ಧನ್ಯಾ ರಾಮಕುಮಾರ್ ‘ಚೌಕಿದಾರ್’ ಸಿನೆಮಾಗೆ ಸುಧಾರಾಣಿ ಎಂಟ್ರಿ

ಸುಧಾರಾಣಿ ಅವರ ಹೊಸ ಗೆಟಪ್‌ ಪರಿಚಯಿಸಿದ ಚಿತ್ರತಂಡ

ಭರದಿಂದ ಸಾಗಿದ ‘ಚೌಕಿದಾರ್’ ಚಿತ್ರೀಕರಣ

‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಹಾಗೂ ದೊಡ್ಮನೆ ಹುಡ್ಗಿ ಧನ್ಯಾ ರಾಮಕುಮಾರ್ ಜೋಡಿಯಾಗಿ ನಟಿಸುತ್ತಿರುವ ‘ಚೌಕಿದಾರ್’ ಸಿನೆಮಾದ ಚಿತ್ರೀಕರಣ ಭರದಿಂದ ನಡೆಯುತ್ತಿದೆ. ‘ಚೌಕಿದಾರ್’ ಸಿನೆಮಾದಲ್ಲಿ ‘ಡೈಲಾಗ್‌ ಕಿಂಗ್’ ಸಾಯಿಕುಮಾರ್, ‘ಲಕ್ಷ್ಮೀ ಮಹಾಲಕ್ಷ್ಮೀ’ ಸಿನೆಮಾ ಖ್ಯಾತಿಯ ಹಿರಿಯ ನಟಿ ಶ್ವೇತಾ, ಧರ್ಮ ಸೇರಿದಂತೆ ಅನೇಕ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ತನ್ನ ತಾರಾಬಳಗದ ಮೂಲಕ ಒಂದಷ್ಟು ಸಿನೆಮಾ ಮಂದಿಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿರುವ ‘ಚೌಕಿದಾರ್’ ಸಿನೆಮಾಕ್ಕೆ  ಇದೀಗ ಮತ್ತೊಬ್ಬ ಹಿರಿಯ ನಟಿ ಸುಧಾರಾಣಿ ಎಂಟ್ರಿ ಕೊಟ್ಟಿದ್ದಾರೆ.

‘ಚೌಕಿದಾರ್’ ಬಳಕ್ಕೆ ಸುಧಾರಾಣಿ ಎಂಟ್ರಿ

ಹೌದು, ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಕಲಾವಿದೆಯಾಗಿರುವ ಸುಧಾರಾಣಿ ‘ಚೌಕಿದಾರ್’ ಚಿತ್ರತಂಡ ಸೇರಿಕೊಂಡಿದ್ದಾರೆ. ಈ ಸುದ್ದಿಯನ್ನು ಸ್ವತಃ ಚಿತ್ರತಂಡವೇ ಖಚಿತಪಡಿಸಿದೆ. ಆದರೆ ‘ಚೌಕಿದಾರ್’ ಸಿನೆಮಾದಲ್ಲಿ ಸುಧಾರಾಣಿ ಪಾತ್ರದ ಬಗ್ಗೆ ಚಿತ್ರತಂಡ ಯಾವುದೇ ಗಟ್ಟುರಟ್ಟು ಮಾಡದೇ ಕುತೂಹಲ ಹೆಚ್ಚಿಸಿದೆ. ಇನ್ನು ‘ಚೌಕಿದಾರ್’ ಸಿನೆಮಾಕ್ಕೆ ಚಂದ್ರಶೇಖರ್ ಬಂಡಿಯಪ್ಪ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಪೃಥ್ವಿರಾಜ್ ಧಘಾರಿ ಸಹ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರೀತಿ-ಪ್ರೇಮಕಥೆಯಲ್ಲಿ ಮಿಂಚುತ್ತಿದ್ದ ಪೃಥ್ವಿ ಅಂಬಾರ್ ‘ಚೌಕಿದಾರ್’ ಸಿನೆಮಾಗಾಗಿ ರಗಡ್ ಅವತಾರ ತಾಳಿದಿದ್ದಾರೆ.

‘ಚೌಕಿದಾರ್’ ಚಿತ್ರಕ್ಕೆ ಸಚಿನ್ ಬಸ್ರೂರು ಸಂಗೀತ ಸಂಯೋಜಿಸುತ್ತಿದ್ದಾರೆ. ‘ಚೌಕಿದಾರ್’ ಸಿನೆಮಾಕ್ಕೆ ಸಿದ್ದು ಕಂಚನಹಳ್ಳಿ ಛಾಯಾಗ್ರಹಣ, ಜ್ಞಾನೇಶ್ ಬಿ. ಮಠದ್ ಸಂಕಲನ ಕಾರ್ಯ ನಿರ್ವಹಿಸುತ್ತಿದ್ದಾರೆ. ರವಿ ವರ್ಮಾ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ‘ಚೌಕಿದಾರ್’ ಸಿನೆಮಾದ ಹಾಡುಗಳಿಗೆ ಪ್ರಮೋದ್ ಮರವಂತೆ, ಸಂತೋಷ್ ನಾಯಕ್, ಡಾ. ವಿ. ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆಯುತ್ತಿದ್ದಾರೆ. ಬಹುಭಾಷೆಯಲ್ಲಿ ಮೂಡಿಬರುತ್ತಿರುವ ಈ ಸಿನೆಮಾಗೆ ಶಿಕ್ಷಣ ತಜ್ಞರಾದ ಕಲ್ಲಹಳ್ಳಿ ಚಂದ್ರಶೇಖರ್ ‘ವಿ. ಎಸ್. ಎಂಟರ್‌ಟೈನ್ಮೆಂಟ್‌ʼ ಬ್ಯಾನರ್‌ ಮೂಲಕ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಸದ್ಯ ‘ಚೌಕಿದಾರ್’ ಸಿನೆಮಾದ ಕೆಲಸಗಳು ಜೋರಾಗಿ ನಡೆಯುತ್ತಿದ್ದು, 2025ರ ಮಧ್ಯದ ವೇಳೆಗೆ ‘ಚೌಕಿದಾರ್’ ಸಿನೆಮಾ ತೆರೆಗೆ ಬರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

Related Posts

error: Content is protected !!