Quick ಸುದ್ದಿಗೆ ಒಂದು click

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಎಂ. ನರಸಿಂಹಲು ನೂತನ ಸಾರಥಿ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷರಾಗಿ ಎಂ. ನರಸಿಂಹಲು ಆಯ್ಕೆ

2024-25 ನೇ ಸಾಲಿನ ಕೆ.ಎಫ್ .ಸಿ .ಸಿ ಚುನಾವಣೆಯ ಫಲಿತಾಂಶ ಪ್ರಕಟ

ಪ್ರದರ್ಶಕರ ವಲಯಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನ

ಬೆಂಗಳೂರು: ಡಿ. 14., ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ (ಕೆ.ಎಫ್ .ಸಿ .ಸಿ) ಯ 2024-25ನೇ ಸಾಲಿನ ವಾರ್ಷಿಕ ಚುನಾವಣೆ ಡಿ. 14ರ ಶನಿವಾರ ನಡೆಯಿತು. ಕೆ.ಎಫ್ .ಸಿ .ಸಿ ಕಚೇರಿಯ ಪಕ್ಕದಲ್ಲಿರುವ ಗುರುರಾಜ ಕಲ್ಯಾಣ ಮಂಟಪದಲ್ಲಿ ಚುನಾವಣಾ ಅಧಿಕಾರಿಯ ನೇತೃತ್ವದಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರಗಳ ಮೂಲಕ ಬಹಳ ಅಚ್ಚುಕಟ್ಟಾಗಿ ಆಯೋಜನೆಗೊಂಡಿತ್ತು. ಡಿ. 14ರ ಶನಿವಾರ ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 6.00 ಗಂಟೆಯ ವರೆಗೆ ನಡೆದ ಚುನಾವಣೆಯ ಫಲಿತಾಂಶ ಡಿ. 14ರ ಶನಿವಾರ ರಾತ್ರಿ 9.30ರ ವೇಳೆಗೆ ಪ್ರಕಟವಾಯಿತು.

ಇನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 2024-25ನೇ ಸಾಲಿನ ವಾರ್ಷಿಕ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನ ಪ್ರದರ್ಶಕರ ವಲಯಕ್ಕೆ ಮೀಸಲಾಗಿದ್ದು, ವಜೇಶ್ವರಿ ಚಿತ್ರಮಂದಿರದ ಮಾಲೀಕ ಸುಂದರ್ ರಾಜ್. ಆರ್ ವಿರುದ್ಧ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು. ಎಂ ಅವರ ನಡುವೆ ನೇರ ಪೈಪೋಟಿ ನಡೆದಿತ್ತು. ಅಂತಿಮವಾಗಿ ವೈಭವಿ ಚಿತ್ರಮಂದಿರದ ಮಾಲೀಕ ನರಸಿಂಹಲು. ಎಂ ಅಧ್ಯಕ್ಷ ಸ್ಥಾನಕ್ಕೆ ಬಹುಮತಗಳಿಂದ ಆಯ್ಕೆಯಾಗಿದ್ದಾರೆ. 2024 -25ರ ಸಾಲಿನ ಚುನಾವಣೆ ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯಗಳಿಂದ ಒಟ್ಟು 128 ಆಕಾಂಕ್ಷಿಗಳು ಸ್ಪರ್ಧೆಯ ಕಣದಲ್ಲಿದ್ದು, ಇದರಲ್ಲಿ ಅಂತಿಮವಾಗಿ 24 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಬಾರಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಚುನಾವಣೆಯಲ್ಲಿ ಒಟ್ಟು 1409 ಅರ್ಹ ಮತದಾರರು ಮತ ಚಲಾಯಿಸಿದ್ದು, ಇದರಲ್ಲಿ ನಿರ್ಮಾಪಕ , ವಿತರಕ ಹಾಗೂ ಪ್ರದರ್ಶಕ ವಲಯದ ಸದಸ್ಯರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು. ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಈ ಬಾರಿ ಚುನಾವಣೆಯ ಕಣದಲ್ಲಿ ಯುವ ಅಭ್ಯರ್ಥಿಗಳ ಸಂಖ್ಯೆ ಹೆಚ್ಚಿದ್ದು , ತುಂಬಾ ಉತ್ಸುಕದಿಂದ ಎಲ್ಲರೂ ಬಂದು ಮತ ಚಲಾಯಿಸಿ ನೂತನ ಪದಾಧಿಕಾರಿಗಳ ತಂಡವನ್ನು ಆಯ್ಕೆ ಮಾಡಲಾಗಿದೆ

2024 -25ರ ಸಾಲಿನ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳ ಪಟ್ಟಿ ಹೀಗಿದೆ

1. ನರಸಿಂಹಲು. ಎಂ., ಅಧ್ಯಕ್ಷರು
2. ವೆಂಕಟೇಶ್ ಕೆ. ವಿ (ಸಫೇರ್), ಉಪಾಧ್ಯಕ್ಷರು (ನಿರ್ಮಾಪಕ ವಲಯ)
3. ಶಿಲ್ಪ ಶ್ರೀನಿವಾಸ್, ಉಪಾಧ್ಯಕ್ಷರು, (ವಿತರಕ ವಲಯ)
4. ರಂಗಪ್ಪ, ಉಪಾಧ್ಯಕ್ಷರು, (ಪ್ರದರ್ಶಕರ ವಲಯ)
5. ರಾಮಕೃಷ್ಣ ಡಿ.ಕೆ., ಗೌರವ ಕಾರ್ಯದರ್ಶಿ, (ನಿರ್ಮಾಪಕರ ವಲಯ)
6. ಎಂ. ಎನ್. ಕುಮಾರ್, ಗೌರವ ಕಾರ್ಯದರ್ಶಿ, (ವಿತರಕ ವಲಯ)
7.  ಎಲ್. ಸಿ. ಕುಶಾಲ್, ಗೌರವ ಕಾರ್ಯದರ್ಶಿ, (ಪ್ರದರ್ಶಕರ ವಲಯ)
8. ಖಜಾಂಚಿಯಾಗಿ ಮಾದೇವ್ (ಚಿಂಗಾರಿ)

 

Related Posts

error: Content is protected !!