ಆಕ್ಷನ್ ಪ್ಯಾಕ್ಡ್ ‘ಸಂಬರಲ ಏಟಿಗಟ್ಟು’ ಟೀಸರ್ ಔಟ್!

ಸಾಯಿದುರ್ಗಾ ತೇಜ್ ‘ಸಂಬರಲ ಏಟಿಗಟ್ಟು’ ಟೀಸರ್ ರಿಲೀಸ್
ಸಾಯಿದುರ್ಗಾ ತೇಜ್ ಸಿನಿಮಾಗೆ ಗ್ಲೋಬಲ್ ಸ್ಟಾರ್ ರಾಮ್ ಚರಣ್ ಸಾಥ್…
ಮೆಗಾ ಸುಪ್ರೀಂ ಹೀರೋ ಸಾಯಿದುರ್ಗಾ ತೇಜ್ ನಟನೆಯ ‘ಸಂಬರಲ ಏಟಿಗಟ್ಟು’
ತೆಲುಗು ಚಿತ್ರರಂಗದ ಪ್ರತಿಭಾನ್ವಿತ ನಟರಲ್ಲಿ ಒಬ್ಬರಾದ ಸಾಯಿದುರ್ಗಾ ತೇಜ್ ಈಗ ಮತ್ತೊಂದು ಬಿಗ್ ಬಜೆಟ್ ಆಕ್ಷನ್ ಸಿನೆಮಾದ ಮೂಲಕ ಅಭಿಮಾನಿಗಳ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಹೌದು, ಕಳೆದ ಬಾರಿ ‘ವಿರೂಪಾಕ್ಷ’ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದ ಸಾಯಿದುರ್ಗಾ ತೇಜ್, ಈಗ ಸಿಕ್ಸ್ ಪ್ಯಾಕ್ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದಾರೆ. ಸದ್ಯ ತೆಲುಗಿನ ಮೆಗಾ ಸುಪ್ರೀಂ ಹೀರೋ ಖ್ಯಾತಿಯ ಸಾಯಿದುರ್ಗಾ ತೇಜ್ ‘ಸಂಬರಲ ಏಟಿಗಟ್ಟು’ ಎಂಬ ಆಕ್ಷನ್ ಸಿನೆಮಾದಲ್ಲಿ ಅಭಿನಯಿಸುತ್ತಿದ್ದು, ಇತ್ತೀಚೆಗೆ ಈ ಸಿನೆಮಾದ ಟೈಟಲ್ ಟೀಸರ್ ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ತೆಲುಗಿನ ಖ್ಯಾತ ನಟ ಗ್ಲೋಬಲ್ ಸ್ಟಾರ್ ರಾಮ್ ಚರಣ್ ತೇಜ ‘ಸಂಬರಲ ಏಟಿಗಟ್ಟು’ ಸಿನೆಮಾದ ಟೈಟಲ್ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಸಿಕ್ಸ್ ಪ್ಯಾಕ್ ಆಕ್ಷನ್ ಲುಕ್‌ನಲ್ಲಿ ಸಾಯಿದುರ್ಗಾ ತೇಜ್
ಇನ್ನು ಹೆಸರೇ ಹೇಳುವಂತೆ, ‘ಸಂಬರಲ ಏಟಿಗಟ್ಟು’ ಸಿನೆಮಾ ಔಟ್ ಆಂಡ್ ಔಟ್ ಆಕ್ಷನ್ ಶೈಲಿಯ ಸಿನೆಮಾ. ಇದೇ ಮೊದಲ ಬಾರಿಗೆ ಈ ಸಿನೆಮಾದಲ್ಲಿ ನಾಯಕ ನಟ ಸಾಯಿದುರ್ಗಾ ತೇಜ್ ಸಿಕ್ಸ್ ಪ್ಯಾಕ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಸಾಯಿದುರ್ಗಾ ತೇಜ್ ಈ ಗೆಟಪ್ ಅವರ ಅಭಿಮಾನಿಗಳು ಮತ್ತು ತೆಲುಗು ಸಿನಿ ಪ್ರೇಕ್ಷಕರನ್ನು ಬೆರಗು ಕಣ್ಣಿನಿಂದ ನೋಡುವಂತೆ ಮಾಡಿದೆ. ‘ಸಂಬರಲ ಏಟಿಗಟ್ಟು’ ಸಿನೆಮಾದ ಟೀಸರ್‌ನಲ್ಲಿ ಭರ್ಜರಿ ಆಕ್ಷನ್ ಮೂಲಕ ಅಬ್ಬರಿಸಿರುವ ಸಾಯಿದುರ್ಗಾ ತೇಜ್ ರಕ್ತಸಿಕ್ತ ಇತಿಹಾಸ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರುತ್ತಿದ್ದಾರೆ.
ಸಾಯಿದುರ್ಗಾ ತೇಜ್ ಅಭಿನಯದ ‘ಸಂಬರಲ ಏಟಿಗಟ್ಟು’ ಸಿನಿಮಾದ ಟೈಟಲ್ ಟೀಸರ್ ಅನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
2025ಕ್ಕೆ ‘ಸಂಬರಲ ಏಟಿಗಟ್ಟು’ ಸಿನೆಮಾ ತೆರೆಗೆ
ಯುವ ಪ್ರತಿಭೆ ರೋಹಿತ್ ಕೆ. ಪಿ ‘ಸಂಬರಲ ಏಟಿಗಟ್ಟು’ ಸಿನೆಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಸಂಬರಲ ಏಟಿಗಟ್ಟು’ ಸಿನೆಮಾಕ್ಕೆ ವೆಟ್ರಿವೇಲ್ ಪಳನಿಸ್ವಾಮಿ ಛಾಯಾಗ್ರಹಣ, ನವೀನ್ ವಿಜಯಕೃಷ್ಣ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ‘ಸಂಬರಲ ಏಟಿಗಟ್ಟು’ ಸಿನೆಮಾದ ಹಾಡುಗಳಿಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ವರ್ಷ ‘ಹನುಮಾನ್’ ನಂತಹ ಸೂಪರ್ ಹಿಟ್ ಸಿನೆಮಾವನ್ನು ಕೊಟ್ಟಿರುವ ಕೆ. ನಿರಂಜನ್ ರೆಡ್ಡಿ ಹಾಗೂ ಚೈತನ್ಯ ರೆಡ್ಡಿ ‘ಪ್ರೈಮ್ ಶೋ ಎಂಟರ್ ಟೈನ್ಮೆಂಟ್’ ನಡಿ ‘ಸಂಬರಲ ಏಟಿಗಟ್ಟು’ ಸಿನೆಮಾವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ‘ಸಂಬರಲ ಏಟಿಗಟ್ಟು’ ಸಿನೆಮಾ ತೆಲುಗು , ಕನ್ನಡ, ಮಲಯಾಳಂ, ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ತಯಾರಾಗುತ್ತಿದ್ದು, ಚಿತ್ರ ಮುಂದಿನ ವರ್ಷ (2025)ದ ಸೆಪ್ಟೆಂಬರ್ 25ಕ್ಕೆ ಬಿಡುಗಡೆಯಾಗಿ ತೆರೆಗೆ ಬರಲಿದೆ.