‘ರಾಯಲ್’ ಆಗಿ ಬಂತು ‘ಆಟಂ ಬಾಂಬ್’ನಂಥ ಸಾಂಗ್!

ಬಿಡುಗಡೆಯಾಯಿತು ‘ರಾಯಲ್’ ಹಾಡು…
ಡ್ಯಾನ್ಸ್ ನಂಬರ್ ಸಾಂಗ್‌ಗೆ ವಿರಾಟ್-ಸಂಜನಾ ಸ್ಟೆಪ್ಸ್
ಅದ್ಧೂರಿಯಾಗಿ ಮೂಡಿಬಂದ ‘ಆಟಂ ಬಾಂಬ್…’ ಸಾಂಗ್
‘ಕಿಸ್’ ಸಿನೆಮಾದ ಮೂಲಕ ಸ್ಯಂಡಲ್‌ವುಡ್‌ಗೆ ಪರಿಚಯವಾಗಿರುವ ಯುವ ನಟ ವಿರಾಟ್ ಅಭಿನಯದ ‘ರಾಯಲ್’ ಸಿನೆಮಾ ಬಿಡುಗಡೆಗೆ ಸಿದ್ದವಾಗುತ್ತಿದೆ. ಈಗಾಗಲೇ ‘ರಾಯಲ್’ ಸಿನೆಮಾದ ಬಹುತೇಕ ಪ್ರೀ-ಪ್ರೊಡಕ್ಷನ್ ಕೆಲಸಗಳನ್ನು ಪೂರ್ಣಗೊಳಿಸಿರುವ ‘ರಾಯಲ್’ ಚಿತ್ರತಂಡ, ಇದೀಗ ‘ರಾಯಲ್’ ಸಿನೆಮಾದ ಡ್ಯಾನ್ಸ್ ನಂಬರ್ ಹಾಡೊಂದನ್ನು ಬಿಡುಗಡೆ ಮಾಡಿದೆ.
ಚರಣ್ ರಾಜ್ ಸಂಗೀತ ಸಂಯೋಜನೆಯಲ್ಲಿ ‘ರಾಯಲ್’ ಸಿನೆಮಾದ ‘ಆಟಂ ಬಾಂಬ್…’ ಎಂಬ ಈ ಹಾಡು ಮೂಡಿ ಬಂದಿದ್ದು, ಈ ಗೀತೆಗೆ ಕವಿರಾಜ್ ಸಾಹಿತ್ಯ ಒದಗಿಸಿದ್ದಾರೆ. ಪಕ್ಕಾ ಮಾಸ್ ಶೈಲಿಯಲ್ಲಿ ಮೂಡಿಬಂದಿರುವ ಈ ಗೀತೆಗೆ ವಿಜಯ ಪ್ರಕಾಶ್ ಮತ್ತು ವೈಶ್ ಕಣ್ಣನ್ ಧ್ವನಿಯಾಗಿದ್ದಾರೆ. ನಾಯಕ ನಟ ವಿರಾಟ್ ಮತ್ತು ನಾಯಕ ನಟಿ ಸಂಜನಾ ಆನಂದ್ ಈ ಗೀತೆಗೆ ಭರ್ಜರಿಯಾಗಿ ಸ್ಪೆಪ್ಸ್ ಹಾಕಿದ್ದಾರೆ. ‘ಸರಿಗಮ ಕನ್ನಡ’ ಯು-ಟ್ಯೂಬ್ ಚಾನೆಲ್‌ನಲ್ಲಿ ಈ ಹಾಡು ಬಿಡುಗಡೆಯಾಗಿದ್ದು, ಹೊಸ ವರ್ಷದ ಹೊಸ್ತಿಲಿನಲ್ಲಿರುವ ಯುವ ಜೋಡಿಗಳಿಗೆ ಹೆಜ್ಜೆ ಹಾಕುವಂತೆ ಈ ಹಾಡು ಮೂಡಿಬಂದಿದೆ.
‘ರಾಯಲ್’ ಸಿನೆಮಾದ ‘ಆಟಂ ಬಾಂಬ್’ ಹಾಡಿನ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು.
ಮುಂದಿನ ವರ್ಷ ‘ರಾಯಲ್’ ಸಿನೆಮಾ ತೆರೆಗೆ
‘ಜಯಣ್ಣ ಫಿಲಂಸ್’ ಬ್ಯಾನರಿನಲ್ಲಿ ನಿರ್ಮಾಣವಾಗಿರುವ ‘ರಾಯಲ್’ ಸಿನೆಮಾಕ್ಕೆ ದಿನಕರ್ ಎಸ್. ನಿರ್ದೇಶನ ಮಾಡಿದ್ದಾರೆ. ಸದ್ಯ ಈ ವರ್ಷದ ಕೊನೆಗೆ ‘ರಾಯಲ್’ ಸಿನೆಮಾದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಮುಂದಿನ ವರ್ಷದ ಆರಂಭದಲ್ಲಿ ‘ರಾಯಲ್’ ಸಿನೆಮಾವನ್ನು ಅದ್ದೂರಿಯಾಗಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮುಂದಿನ ವರ್ಷದ ಫೆಬ್ರವರಿ ವೇಳೆಗೆ ‘ರಾಯಲ್’ ಸಿನೆಮಾ ಥಿಯೇಟರಿಗೆ ಬರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಇಲ್ಲಿಯವರೆಗೆ ಚಿತ್ರತಂಡ ಮಾತ್ರ ‘ರಾಯಲ್’ ಸಿನೆಮಾದ ಬಿಡುಗಡೆಯ ದಿನಾಂಕವನ್ನು ಇನ್ನೂ ಖಚಿತಪಡಿಸಿಲ್ಲ.