Video

ಹೊಸವರ್ಷಕ್ಕೆ ‘ಛೂ‌ ಮಂತರ್’ ಹಾಕ್ತಿದ್ದಾರೆ ಶರಣ್‌!

ಜನವರಿ 10ಕ್ಕೆ ಶರಣ್‌ ‘ಛೂ‌ ಮಂತರ್’ ಚಿತ್ರ ತೆರೆಗೆ

ಕೊನೆಗೂ ಶರಣ್‌ ಸಿನೆಮಾಕ್ಕೆ ಸಿಕ್ಕಿತು ಬಿಡುಗಡೆ ಭಾಗ್ಯ…

ಮಂತ್ರವಾದಿ ಗೆಟಪ್‌ನಲ್ಲಿ ‘ಛೂ‌ ಮಂತರ್’ ಹಾಕಲು ಶರಣ್‌ ರೆಡಿ

ಕಾಮಿಡಿ ಕಿಂಗ್‌ ಶರಣ್‌ ‘ಛೂ‌ ಮಂತರ್’ ಎಂಬ ಔಟ್‌ ಅಂಡ್‌ ಔಟ್‌ ಹಾರರ್‌-ಕಾಮಿಡಿ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು ಅನೇಕರಿಗೆ ಗೊತ್ತಿರಬಹುದು. ಸುಮಾರು ಮೂರು ವರ್ಷಗಳ ಹಿಂದೆಯೇ ಶುರುವಾಗಿದ್ದ ಈ ಸಿನೆಮಾದ ಬಿಡುಗಡೆಗೆ ಅದೇಕೋ ಕಾಲ ಕೂಡಿ ಬಂದಿರಲಿಲ್ಲ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇಷ್ಟೊತ್ತಿಗಾಗಲೇ ಶರಣ್‌ ನಟನೆಯ ಬಹುನಿರೀಕ್ಷಿತ ‘ಛೂ‌ ಮಂತರ್’ ಸಿನೆಮಾ ಬಿಡುಗಡೆಯಾಗಿ ವರ್ಷವೇ ಕಳೆದಿರುತ್ತಿತ್ತು. ಆದರೆ ಕೆಲ ಕಾರಣಗಳಿಂದ ‘ಛೂ‌ ಮಂತರ್’ ಸಿನೆಮಾದ ಬಿಡುಗಡೆಯನ್ನು ಎರಡು ಬಾರಿ ಮುಂದೂಡಿದ್ದ ಚಿತ್ರತಂಡ, ಈ ಬಾರಿ ಮಿಸ್‌ ಮಾಡದೇ ಶರಣ್‌ ಸಿನೆಮಾವನ್ನು ಥಿಯೇಟರಿಗೆ ತಂದೇ ತರುವ ಶಪಥ ಮಾಡಿದೆ.

ಹಾರರ್‌-ಕಾಮಿಡಿ ‘ಛೂ‌ ಮಂತರ್’ ಕಹಾನಿ…

ಅಂದಹಾಗೆ, ‘ಛೂ‌ ಮಂತರ್’ ಪ್ಯಾನ್‌ ಇಂಡಿಯಾ ಸಿನೆಮಾ ಎಂಬುದು ಚಿತ್ರತಂಡದ ಮಾತು. ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲೂ ‘ಛೂ‌ ಮಂತರ್’ ತಯಾರಾಗಿದೆ. ‘ತರುಣ್ ಸ್ಟುಡಿಯೋಸ್’  ಲಾಂಛನದಲ್ಲಿ ಮಾನಸ ತರುಣ್ ಹಾಗೂ ತರುಣ್ ಶಿವಪ್ಪ ನಿರ್ಮಿಸಿರುವ, ‘ಛೂ‌ ಮಂತರ್’ ಸಿನೆಮಾಕ್ಕೆ ‘ಕರ್ವ’ ಖ್ಯಾತಿಯ ನವನೀತ್ ನಿರ್ದೇಶನ ಮಾಡಿದ್ದಾರೆ. ‘ಛೂ ಮಂತರ್‌’ ಸಿನೆಮಾದಲ್ಲಿ ಶರಣ್, ಚಿಕ್ಕಣ್ಣ, ಮೇಘನಾ ಗಾಂವ್ಕರ್, ಅದಿತಿ ಪ್ರಭುದೇವ, ಪ್ರಭು ಮುಂಡ್ಕೂರ್‌, ಧರ್ಮ ಮುಂತಾದ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅನುಪ್ ಕಟ್ಟುಕರನ್ ಛಾಯಾಗ್ರಹಣ ಹಾಗೂ ಚಂದನ್ ಶೆಟ್ಟಿ ಸಂಗೀತ ನಿರ್ದೇಶನವಿರುವ ‘ಛೂ ಮಂತರ್’ ಚಿತ್ರಕ್ಕೆ ಅವಿನಾಶ್ ಬಸುತ್ಕರ್ ಹಿನ್ನೆಲೆ ಸಂಗೀತವಿದೆ.

ತಣ್ಣಗೆ ಕೂತವರನ್ನು ಬೆಚ್ಚಿ ಬೀಳಿಸುವ ‘ಛೂ‌ ಮಂತರ್’ ಟೀಸರ್‌…

‘ಛೂ‌ ಮಂತರ್’ ಚಿತ್ರದ ಕಥೆಯಲ್ಲಿ ಮನೆಯೊಂದರಲ್ಲಿ ದೆವ್ವಗಳ ವಾಸ ಇರುತ್ತದೆ. ಪುರಾತನ ದೆವ್ವಗಳ ಈ ಒಂದು ಅಟ್ಟಹಾಸ ತಗ್ಗಿಸಲು ನಾಯಕ ಶರಣ್ ಬರೋದು ಇಲ್ಲಿ ವಿಶೇಷವಾಗಿಯೇ ಇದೆ. ದೆವ್ವಗಳನ್ನ ಓಡಿಸೋ ರೀತಿನೂ ಭಯಗೊಳಿಸುತ್ತದೆ. ಚಿಕ್ಕಣ್ಣ ಕೂಡ ಇಲ್ಲಿ ದೆವ್ವ ಅನ್ನೋ ಮ್ಯಾಟರ್, ಇದೇ ಟೀಸರ್‌ ಅಲ್ಲಿಯೇ ರಿವೀಲ್ ಆಗಿದೆ. ‘ಛೂ‌ ಮಂತರ್’ ಅನ್ನೋ ಟೈಟಲೇ ಹೇಳುವಂತೆ, ಇದೊಂದು ಮಂತ್ರವಾದಿಯ ಚಿತ್ರ. ನಟಿ ಮೇಘನಾ ಗಾಂವ್ಕರ್ ಮೇಲೆ ದೆವ್ವ ಬರೋ ದೃಶ್ಯ ಇಲ್ಲಿ ಬೆಚ್ಚಿ ಬೀಳಿಸುತ್ತದೆ. ಡಾ. ರಾಜಕುಮಾರ್ ಹಾಡನ್ನ ಇಲ್ಲಿ ಅದ್ಭುತವಾಗಿಯೇ ಬಳಸಿಕೊಳ್ಳಲಾಗಿದೆ. ʼಯಾವ ಕವಿಯು…ʼ ಅನ್ನೋ ಹಾಡಿಗೆ ಇಲ್ಲಿ ಹಾರರ್ ಟಚ್ ಬಂದಂತೆ ಇದೆ. ಹಳೆ ಮನೆಯೊಂದರ ಗ್ರಾಮಾಫೋನ್‌ನಲ್ಲಿ ಪ್ಲೇ ಆಗೋ ಈ ಹಾಡು ಇಲ್ಲಿ ಬೇರೆ ರೀತಿಯೇ ಕೇಳಿಸುತ್ತದೆ. ಒಮ್ಮೆ ಮಧುರವಾಗಿ, ಮತ್ತೊಮ್ಮೆ ಹಾರರ್ ರೀತಿಯಲ್ಲಿಯೇ ಫೀಲ್ ಕೊಡುತ್ತದೆ.

‘ಛೂ‌ ಮಂತರ್’ ಸಿನೆಮಾದ ಟೀಸರ್‌ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್‌ ಅನ್ನು ಕ್ಲಿಕ್‌ ಮಾಡಬಹುದು…

2025ರ ಜನವರಿ 10ಕ್ಕೆ ‘ಛೂ‌ ಮಂತರ್’ ರಿಲೀಸ್‌ 

‘ಛೂ‌ ಮಂತರ್’ ಚಿತ್ರ 2025ರ ಜನವರಿ 10 ರಂದು ಬಿಡುಗಡೆಯಾಗಲಿದೆ. ಬಹು ದಿನಗಳಿಂದಲೂ ಈ ಚಿತ್ರಕ್ಕೆ ರಿಲೀಸ್ ಭಾಗ್ಯ ಅದ್ಯಾಕೋ ಮುಂದಕ್ಕೆ ಹೋಗುತ್ತಿತ್ತು. ಒಂದೆರಡು ಸಲ ರಿಲೀಸ್ ಡೇಟ್ ಕೂಡ ಅನೌನ್ಸ್ ಆಗಿತ್ತು. ಈಗ ‘ಛೂ‌ ಮಂತರ್’ ಸಿನೆಮಾದ ರಿಲೀಸ್‌ ಡೇಟ್‌ ಪಕ್ಕಾ ಎಂದಿರುವ ಚಿತ್ರತಂಡ, ಮುಂದಿನ ವರ್ಷ ಚಿತ್ರ ಬರ್ತದೆ ಅಂತ ವಿಶೇಷ ಟೀಸರ್ ಮೂಲಕವೇ ಹೇಳಿಕೊಂಡಿದೆ. ಶರಣ್ ಪಾತ್ರದ ಝಲಕ್ ಕೂಡ ಈ ಒಂದು ಟೀಸರ್ ನಲ್ಲಿದೆ. ಅದಿತಿ ಪ್ರಭುದೇವ, ಮೇಘನಾ ಗಾಂವ್ಕರ್, ಚಿಕ್ಕಣ್ಣ ಹೀಗೆ ಚಿತ್ರದ ಪ್ರಮುಖ ಪಾತ್ರಗಳ ತುಣುಕನ್ನು ‘ಛೂ‌ ಮಂತರ್’ ಟೀಸರ್‌ ಮೂಲಕ ರಿವೀಲ್ ಮಾಡಲಾಗಿದೆ. ಇನ್ನೂ ‘ಛೂ‌ ಮಂತರ್’ ಟೀಸರ್‌ ನೋಡಿದವರಿಗೆ ಇದೊಂದು ಹಾರರ್‌ ಚಿತ್ರ ಅನ್ನೋದು ಗೊತ್ತಾಗುತ್ತಿದೆ. ನಿರ್ದೇಶಕ ನವನೀತ್, ‘ಛೂ‌ ಮಂತರ್’ ಸಿನೆಮಾದಲ್ಲೂ ಒಳ್ಳೆ ಕಂಟೆಂಟ್ ತಂದಿದ್ದಾರೆ  ಅನ್ನೋದು ಟೀಸರ್‌ನಲ್ಲಿ ಗೊತ್ತಾಗುತ್ತಿದೆ. ಅಷ್ಟು ಸ್ಪೆಷಲ್ ಆಗಿಯೇ ಈ ಸಿನೆಮಾ ಮಾಡಿದ್ದಾರೆ ಎಂದೆನಿಸುವ ಅನೇಕ ಅಂಶಗಳು ಸಿನಿಮಾದ ಈ ಒಂದು ಟೀಸರ್ ನಲ್ಲಿವೆ.

 

Related Posts

error: Content is protected !!