‘ಕೆ.ಡಿ’ ಬಾಯಲ್ಲಿ ‘ಶಿವ ಶಿವಾ…’ ಹಾಡು

ಹೊರಬಂತು ‘ಕೆ.ಡಿ’ ಸಿನೆಮಾದ ಮಾಸ್ ಸಾಂಗ್
ಜೋಗಿ ಪ್ರೇಮ್ ಮತ್ತು ಧ್ರುವ ಸರ್ಜಾ ಅಭಿನಯದ ‘ಕೆ.ಡಿ’ ಸಿನೆಮಾ
ಕೈಲಾಶ್ ಖೇರ್ ಧ್ವನಿಯಲ್ಲಿ ಮೂಡಿಬಂದ ಹಾಡು
ನಿರ್ದೇಶಕ ಜೋಗಿ ಪ್ರೇಮ್ ಮತ್ತು ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕಾಂಬಿನೇಶನ್‌ನಲ್ಲಿ ಮೂಡಿಬರುತ್ತಿರುವ ‘ಕೆ.ಡಿ’ ಸಿನೆಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ‘ಕೆ.ಡಿ’ ಸಿನೆಮಾದ ಬಹುತೇಕ ಶೂಟಿಂಗ್ ಮುಗಿಸಿರುವ ಚಿತ್ರತಂಡ, ಇದೀಗ ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ ‘ಕೆ.ಡಿ’ ಸಿನೆಮಾದ ಮಾಸ್ ಹಾಡೊಂದನ್ನು ಬಿಡುಗಡೆ ಮಾಡಿದೆ.
ಪ್ರೇಮ್ ‘ನಿನ್ನಾಟ ಬಲ್ಲೂರ್… ಯಾರೋ?’
‘ಗುರುವೇ ನಿನ್ನಾಟ ಬಲ್ಲೂರ್… ಗುರುವೇ ನಿನ್ನಾಟ ಬಲ್ಲೂರ್… ಗುರುವೇ ನಿನ್ನಾಟ ಬಲ್ಲೂರ್ ಯಾರ್ ಯಾರೋ… ಶಿವನೇ ನಿನ್ನಾಟ ಬಲ್ಲೂರ್ ಯಾರ್ ಯಾರೋ, ಶಿವಾ… ಶಿವ ಶಿವ ಶಿವ ಶಿವ ಶಿವ ಶಿವ’ ಎಂಬ ಪಲ್ಲವಿಯ ಸಾಲುಗಳಿಂದ ಶುರುವಾಗುವ ‘ಕೆ.ಡಿ’ ಸಿನೆಮಾದ ಈ ಮಾಸ್ ಲಿರಿಕಲ್ ವಿಡಿಯೋ ಹಾಡು ಕೈಲಾಶ್ ಖೇರ್ ಧ್ವನಿಯಲ್ಲಿ ಮೂಡಿಬಂದಿದೆ. ನಿರ್ದೇಶಕ ಜೋಗಿ ಪ್ರೇಮ್ ಅವರೇ ಸಾಹಿತ್ಯ ರಚಿಸಿರುವ ಈ ಹಾಡಿಗೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದಾರೆ.
‘ಆನಂದ್ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ ‘ಕೆ.ಡಿ’ ಸಿನೆಮಾದ ‘ಗುರುವೇ ನಿನ್ನಾಟ ಬಲ್ಲೂರ್…’ ಸಿನೆಮಾದ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದ್ದು, ಸದ್ಯ ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಹರಿದಾಡುತ್ತಿದೆ. ಇನ್ನು ಪಕ್ಕಾ ಮಾಸ್ ಆಗಿ ಮೂಡಿಬಂದಿರುವ ‘ಕೆ.ಡಿ’ ಸಿನೆಮಾದ ಈ ಹಾಡಿನಲ್ಲಿ ಧ್ರುವ ಸರ್ಜಾ ಭರ್ಜರಿಯಾಗಿ ಸ್ಪೆಪ್ಸ್ ಹಾಕಿದ್ದಾರೆ.
‘ಕೆ.ಡಿ’ ಸಿನೆಮಾದ ‘ಗುರುವೇ ನಿನ್ನಾಟ ಬಲ್ಲೂರ್…’ ಹಾಡಿನ ಲಿರಿಕಲ್ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ವರ್ಷಾಂತ್ಯಕ್ಕೆ ಮಾಸ್ ಹಾಡಿನಲ್ಲಿ ‘ಕೆ. ಡಿ’ ಎಂಟ್ರಿ
ಒಟ್ಟಾರೆ, ಈ ವರ್ಷಾಂತ್ಯದಲ್ಲಿ ‘ಕೆ.ಡಿ’ ಸಿನೆಮಾದ ಮಾಸ್ ಹಾಡಿನ ಲಿರಿಕಲ್ ವಿಡಿಯೋವನ್ನು ಬಿಡುಗಡೆ ಮಾಡುವ ಮೂಲಕ ಮಾಸ್ ಆಡಿಯನ್ಸ್ ಗಮನ ಸೆಳೆಯುವ ಕಸರತ್ತು ಮಾಡಿದೆ ಚಿತ್ರತಂಡ. ಅಂದಹಾಗೆ, ನಿಧಾನವಾಗಿ ‘ಕೆ.ಡಿ’ ಸಿನೆಮಾದ ಪ್ರಚಾರ ಕಾರ್ಯಗಳಿಗೂ ಚಾಲನೆ ನೀಡಿರುವ ‘ಕೆ.ಡಿ’ ಚಿತ್ರತಂಡ, ಮುಂದಿನ ವರ್ಷ ಏಪ್ರಿಲ್ ವೇಳೆಗೆ ‘ಕೆ. ಡಿ’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ ಎನ್ನಲಾಗಿದೆ.