Quick ಸುದ್ದಿಗೆ ಒಂದು click

ಅಮೆರಿಕಾದಲ್ಲಿ ನಟ ಶಿವರಾಜಕುಮಾರ್‌ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ

ನಟ ಶಿವಣ್ಣ ಶಸ್ತ್ರ ಚಿಕಿತ್ಸೆಯ ಬಗ್ಗೆ ಅಧಿಕೃತ ಮಾಹಿತಿ ಬಿಡುಗಡೆ

ಐಸಿಯುನಲ್ಲಿ ಶಿವರಾಜಕುಮಾರ್‌ ಅವರಿಗೆ ಮುಂದುವರೆದ ಚಿಕಿತ್ಸೆ

ಬೆಂಗಳೂರು: ಡಿ. 25,  ಇತ್ತೀಚೆಗಷ್ಟೇ ಅನಾರೋಗ್ಯದ ಸಲುವಾಗಿ ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಾಕ್ಕೆ ತೆರಳಿದ್ದ ಸ್ಯಾಂಡಲ್‌ವುಡ್‌ ನಟ ಶಿವರಾಜಕುಮಾರ್‌ ಅವರಿಗೆ ಡಿ. 24 ರ ಮಂಗಳವಾರದಂದು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಶಿವರಾಜಕುಮಾರ್‌ ಆರೋಗ್ಯ ಸ್ಥಿರವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಮೆರಿಕಾದ ಫ್ಲೋರಿಡಾದ ಮಿಯಾಮಿ ಕ್ಯಾನ್ಸರ್‌ ಇನ್ಸ್‌ಸ್ಟಿಟ್ಯೂಟ್‌ನಲ್ಲಿ ಶಿವರಾಜಕುಮಾರ್‌ ಚಿಕಿತ್ಸೆಗೆ ದಾಖಲಾಗಿದ್ದು, ಶಿವರಾಜಕುಮಾರ್‌ ಅವರ ಶಸ್ತ್ರ ಚಿಕಿತ್ಸೆಯ ಕುರಿತಂತೆ ಡಿ. 25ರ ಬುಧವಾರ ಮುಂಜಾನೆ ಹೆಲ್ತ್‌ ಬುಲೆಟಿನ್‌ ಬಿಡುಗಡೆ ಆಗಿದೆ. ಈ ಹೆಲ್ತ್‌ ಬುಲೆಟಿನ್‌ನಲ್ಲಿ ಶಿವರಾಜಕುಮಾರ್‌ ಅವರ ಶಸ್ತ್ರ ಚಿಕಿತ್ಸೆ ಡಿ. 24ರ ಮಂಗಳವಾರ ಸುಮಾರು 4-5 ಗಂಟೆಗಳ ಯಶಸ್ವಿಯಾಗಿ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆಯ ಬಳಿಕ ಶಿವರಾಜಕುಮಾರ್‌ ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತಿದೆ. ಸದ್ಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ಶಿವರಾಜಕುಮಾರ್‌ ಅವರನ್ನು ಐಸಿಯು ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿದ್ದು, ನುರಿತ ವೈದ್ಯರು ಶಿವರಾಜ ಕುಮಾರ್‌ ಅವರ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ ಎಂದು ಶಿವರಾಜಕುಮಾರ್‌ ಅವರಿಗೆ ಶಸ್ತ್ರ ಚಿಕಿತ್ಸೆ ಮಾಡಿರುವ ಹಿರಿಯ ವೈದ್ಯ ಡಾ. ಮುಗುರೇಶ್‌ ಮನೋಹರ್‌ ಮಾಹಿತಿ ನೀಡಿದ್ದಾರೆ.

ʼನಟ ಶಿವರಾಜಕುಮಾರ್‌ ಮೂತ್ರಪಿಂಡ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಸದ್ಯ ಕ್ಯಾನ್ಸರ್‌ ತಗುಲಿದ ಮೂತ್ರಪಿಂಡದ ಭಾಗವನ್ನು ತೆಗೆದು ಹಾಕಲಾಗಿದೆ. ಶಸ್ತ್ರಚಿಕಿತ್ಸೆಯ ನಂತರ ಕರುಳನ್ನು ಬಳಸಿ ಕೃತಕ ಮೂತ್ರಪಿಂಡವನ್ನು ಅಳವಡಿಸಲಾಗಿದೆ. ಶಸ್ತ್ರ ಚಿಕಿತ್ಸೆಯ ನಂತರ ಶಿವರಾಜಕುಮಾರ್‌ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಾಗಿದ್ದಾರೆʼ ಎಂದು ವೈದ್ಯರು ತಿಳಿಸಿದ್ದಾರೆ.

Related Posts

error: Content is protected !!