‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಲೋಗೋ ಬಿಡುಗಡೆ

ಸಮಾಜಸೇವೆಗೆ ಅಡಿಯಿಟ್ಟ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’
ಫೌಂಡೇಶನ್ನ ನೂತನ ಲೋಗೋ ಲಾಂಚ್ ಮಾಡಿದ ಸಂಚಿತ್ ಸಂಜೀವ್
‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಶಿಕ್ಷಣ, ವೈದ್ಯಕೀಯ ಸೇವೆಗೆ ಫೌಂಡೇಶನ್ ಒತ್ತು
ಕನ್ನಡ ಚಿತ್ರರಂಗದ ನಟ, ಅಭಿನಯ ಚಕ್ರವರ್ತಿ ಖ್ಯಾತಿಯ ಕಿಚ್ಚ ಸುದೀಪ್ ಸಿನೆಮಾದ ಜೊತೆಗೆ ಅನೇಕ ಸಮಾಜಮುಖಿ ಕೆಲಸಗಳಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸಾಲು ಸಾಲು ಸಿನೆಮಾಗಳ ಬ್ಯುಸಿ ಆಗಿರುವ ಸುದೀಪ್ ಸದ್ದಿಲ್ಲದೇ ಸಮಾಜಸೇವೆ ಕೆಲಸಗಳಲ್ಲಿ ತೊಡಗಿಸಿಕೊಂಡು ಅನೇಕರಿಗೆ ಮಾದರಿಯಾಗಿದ್ದಾರೆ. ಈಗ ಇದೇ ಸಮಾಜಸೇವೆಯ ನಿಟ್ಟಿನಲ್ಲಿ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ (KSCF) ಎಂಬ ಹೊಸ ಚಾರಿಟೇಬಲ್ ಟ್ರಸ್ಟ್ ಪ್ರಾರಂಭಿಸಲಾಗಿದೆ. ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ (KSCF) ಎಂಬ ಹೊಸ ಚಾರಿಟೇಬಲ್ ಟ್ರಸ್ಟ್ ಮೂಲಕ ಶಿಕ್ಷಣ ಹಾಗೂ ವೈದ್ಯಕೀಯ ಸೇವೆ ಒದಗಿಸುವ ಮಹತ್ ಕಾರ್ಯಕ್ಕೆ ಅಡಿಯಿಡಲಾಗಿದೆ.
ಇತ್ತೀಚೆಗೆ ಈ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ (KSCF) ಎಂಬ ಹೊಸ ಚಾರಿಟೇಬಲ್ ಟ್ರಸ್ಟ್ ನ ನೂತನ ಲಾಂಛನ (ಲೋಗೋ) ಮತ್ತು ಟೀ ಶರ್ಟ್ ಅನ್ನು ನಟ ಸುದೀಪ್ ಅವರ ಸೋದರ ಅಳಿಯ ಸಂಚಿತ್ ಸಂಜೀವ್ ಬಿಡುಗಡೆ ಮಾಡಿದರು. ಈಗಾಗಲೇ ನಟ ಕಿಚ್ಚ ಸುದೀಪ್ ಸರ್ಕಾರಿ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿದ್ದಾರೆ. ಅದರ ಮುಂದುವರೆದ ಭಾಗವೆಂಬಂತೆ ‘ಕಿಚ್ಚ ಸುದೀಪ್ ಕೇರ್ ಫೌಂಡೇಶನ್’ ಸಂಸ್ಥಾಪಿಸಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಲು ಮುಂದಾಗಿದ್ದಾರೆ. ಸದ್ಯ ಕಿಚ್ಚ ಸುದೀಪ್ ‘ಮ್ಯಾಕ್ಸ್’ ಸಿನೆಮಾ ಥಿಯೇಟರಿನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿರುವಂತೆಯೇ, ತಮ್ಮ ಸಮಾಜಮುಖಿ ಕೆಲಸಕ್ಕೆ ಹೊಸ ಆಯಾಮ ನೀಡಲು ಮುಂದಾಗಿರುವ ಕಿಚ್ಚನ ನಡೆ ಕಂಡು ಅಭಿಮಾನಿಗಳು ಸಂತಸಪಡುತ್ತಿದ್ದಾರೆ.