‘ಫಾರೆಸ್ಟ್’ನಲ್ಲಿ ಸಸ್ಪೆನ್ಸ್-ಥ್ರಿಲ್ಲರ್ ಜರ್ನಿಯ ಟ್ರೇಲರ್!

ಬಿಡುಗಡೆಯಾಯಿತು ‘ಫಾರೆಸ್ಟ್’ ಸಿನೆಮಾ ಟ್ರೇಲರ್
ಭರದಿಂದ ಪ್ರಚಾರ ಕಾರ್ಯಕ್ಕೆ ಇಳಿದ ಚಿತ್ರತಂಡ
ಜನವರಿ 24ಕ್ಕೆ ‘ಫಾರೆಸ್ಟ್’ ಸಿನೆಮಾ ತೆರೆಗೆ
ನಟರಾದ ಅನೀಶ್ ತೇಜೇಶ್ವರ್, ಗುರುನಂದನ್, ಚಿಕ್ಕಣ್ಣ, ರಂಗಾಯಣ ರಘು, ಅರ್ಚನಾ ಕೊಟ್ಟಿಗೆ ಮೊದಲಾದ ಬೃಹತ್ ತಾರಾಗಣವಿರುವ ‘ಫಾರೆಸ್ಟ್’ ಸಿನೆಮಾ ತೆರೆಗೆ ಬರಲು ಮುಹೂರ್ತ ಫಿಕ್ಸ್ ಆಗಿದೆ. ಇದೇ 2025ರ ಜನವರಿ 24ರಂದು ‘ಫಾರೆಸ್ಟ್’ ಸಿನೆಮಾ ಅದ್ಧೂರಿಯಾಗಿ ತೆರೆಗೆ ಬರುತ್ತಿದ್ದು, ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಫಾರೆಸ್ಟ್’ ಸಿನೆಮಾದ ಮೊದಲ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ.
‘ಫಾರೆಸ್ಟ್’ ಸಿನೆಮಾದ ವಿಡಿಯೋ ಟ್ರೇಲರ್ ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಹೇಗಿದೆ ‘ಫಾರೆಸ್ಟ್’ ಸಿನೆಮಾ ಟ್ರೇಲರ್..?
ಇನ್ನು ಬಿಡುಗಡೆಯಾಗಿರುವ ‘ಫಾರೆಸ್ಟ್’ ಸಿನೆಮಾದ ಟ್ರೇಲರಿನಲ್ಲಿ ಸಸ್ಪೆನ್ಸ್-ಥ್ರಿಲ್ಲರ್, ಕಾಮಿಡಿ, ಆಕ್ಷನ್ ಸೇರಿದಂತೆ ಎಲ್ಲಾ ಥರದ ಎಂಟರ್‌ಟೈನ್ಮೆಂಟ್ ಅಂಶಗಳು ಎದ್ದು ಕಾಣುತ್ತಿವೆ. ಔಟ್ ಆಂಟ್ ಔಟ್ ಮಾಸ್ ಎಂಟರ್‌ಟೈನ್ಮೆಂಟ್ ಕಥಾಹಂದರವನ್ನು ಮಾಸ್ ಆಡಿಯನ್ಸ್‌ಗೆ ಇಷ್ವಾಗುವಂತೆ ತೆರೆಗೆ ತರುವ ಪ್ರಯತ್ನ ಮಾಡಲಾಗಿರುವುದು ‘ಫಾರೆಸ್ಟ್’ ಸಿನೆಮಾದ ಟ್ರೇಲರ್‌ನಲ್ಲಿ ಕಾಣುತ್ತದೆ. ಚಂದ್ರಮೋಹನ್ ನಿರ್ದೇಶನದಲ್ಲಿ ಮೂಡಿಬಂದಿರುವ ‘ಫಾರೆಸ್ಟ್’ ಸಿನೆಮಾವನ್ನು ‘ಎನ್.ಎಂ.ಕೆ ಸಿನೆಮಾನ್’ ಬ್ಯಾನರಿನಲ್ಲಿ ಎನ್. ಎಂ. ಕಾಂತರಾಜ್ ನಿರ್ಮಾಣ ಮಾಡಿದ್ದಾರೆ.
ಸದ್ಯ ಯು-ಟ್ಯೂಬ್‌ನಲ್ಲಿ ಬಿಡುಗಡೆಯಾಗಿರುವ ‘ಫಾರೆಸ್ಟ್’ ಸಿನೆಮಾದ ಟ್ರೇಲರ್ ಸಿನಿಪ್ರಿಯರ ಗಮನ ಸೆಳೆಯಲು ಯಶಸ್ವಿಯಾಗುತ್ತಿದ್ದು, ಸೋಶಿಯಲ್ ಮೀಡಿಯಾಗಳಲ್ಲೂ ‘ಫಾರೆಸ್ಟ್’ ಸಿನೆಮಾ ಟ್ರೇಲರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇನ್ನು ‘ಫಾರೆಸ್ಟ್’ ಸಿನೆಮಾ ಹೇಗಿದೆ? ಥಿಯೇಟರಿನಲ್ಲಿ ಎಷ್ಟರ ಮಟ್ಟಿಗೆ ಸಿನಿಪ್ರಿಯರ ಮನ-ಗಮನ ಸೆಳೆಯಲಿದೆ ಎಂಬುದು ಇದೇ ಜನವರಿ ತಿಂಗಳ ಕೊನೆಗೆ ಗೊತ್ತಾಗಲಿದೆ.