Quick ಸುದ್ದಿಗೆ ಒಂದು click

ಕೊನೆಗೂ ‘ಎಮರ್ಜೆನ್ಸಿ’ಗೆ ಬಿಡುಗಡೆ ಭಾಗ್ಯ

ಕಂಗನಾ ಸಿನೆಮಾ ಅಂತೂ ಥಿಯೇಟರಿಗೆ ಬಂತು…

ಸೆನ್ಸಾರ್‌ ಮಂಡಳಿಯಿಂದ ‘ಎಮರ್ಜೆನ್ಸಿ’ಗೆ ಗ್ರೀನ್‌ ಸಿಗ್ನಲ್‌

ಇಂದಿರಾ ಗಾಂಧಿ ರಾಜಕೀಯ ಚರಿತ್ರೆಗೆ ಚಿತ್ರರೂಪ

ಬಿಡುಗಡೆಗೂ ಮೊದಲೇ ಸಾಕಷ್ಟು ವಾದ-ವಿವಾದಗಳಿಗೆ ಕಾರಣವಾಗಿದ್ದ ಹಿಂದಿ ಚಿತ್ರ ‘ಎಮರ್ಜೆನ್ಸಿ’ ಕೊನೆಗೂ ಬಿಡುಗಡೆಯಾಗಿ ತೆರೆಗೆ ಬರುತ್ತಿದೆ. 1975 ರಲ್ಲಿ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಭಾರತದಲ್ಲಿ ಹೇರಿದ್ದ ತುರ್ತು ಪರಿಸ್ಥಿತಿ ಘಟನೆಯನ್ನು ಆಧರಿಸಿದ ಈ ಚಿತ್ರಕ್ಕೆ, ಸಹಜವಾಗಿಯೇ ಒಂದಷ್ಟು ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುವುದರ ಜೊತೆಗೆ, ‘ಎಮರ್ಜೆನ್ಸಿ’ ಚಿತ್ರ ಸಹಜವಾಗಿಯೇ ರಾಜಕೀಯ ಬಣ್ಣ ಕೂಡ ಪಡೆದುಕೊಂಡಿತ್ತು. ಆಡಳಿತಾರೂಢ ಬಿಜೆಪಿ ‘ಎಮರ್ಜೆನ್ಸಿ’ ಸಿನೆಮಾ ತೆರೆಗೆ ಬರುತ್ತಿರುವುದನ್ನು ಸ್ವಾಗತಿಸಿದ್ದರೆ, ವಿರೋಧ ಪಕ್ಷ ಕಾಂಗ್ರೆಸ್‌ ‘ಎಮರ್ಜೆನ್ಸಿ’ ಸಿನೆಮಾ ಕೇಂದ್ರದ ಬಿಜೆಪಿ ಸರ್ಕಾರದ ಹಿಡನ್‌ ಅಜೆಂಡಾದ ಒಂದು ಭಾಗ ಎಂದು ಜರಿದಿತ್ತು.

ಆರು ತಿಂಗಳ ಬಳಿಕ ‘ಎಮರ್ಜೆನ್ಸಿ’ ತೆರೆಗೆ

ಎಲ್ಲಾ ಅಂದುಕೊಂಡಂತೆ, ನಡೆದಿದ್ದರೆ ಕಳೆದ ವರ್ಷ (2024) ಜೂನ್‌ ತಿಂಗಳಿನಲ್ಲಿ ತೆರೆಗೆ ಬರಬೇಕಿತ್ತು. ಆ ನಂತರ ಚಿತ್ರದ ಬಿಡುಗಡೆಯನ್ನು ಮುಂದೂಡಿದ್ದ ಚಿತ್ರತಂಡ ಸೆಪ್ಟೆಂಬರ್ ತಿಂಗಳಲ್ಲೇ ‘ಎಮರ್ಜೆನ್ಸಿ’ ಚಿತ್ರವನ್ನು ರಿಲೀಸ್ ಮಾಡುವುದಾಗಿ ಹೇಳಿಕೊಂಡಿತ್ತು. ಆದರೆ, ಸೆನ್ಸಾರ್ ಮಂಡಳಿ ‘ಎಮರ್ಜೆನ್ಸಿ’ ಚಿತ್ರದ ಕೆಲ ದೃಶ್ಯಗಳಿಗೆ ತಕರಾರು ತೆಗೆದಿತ್ತಲ್ಲದೆ, ಚಿತ್ರದ ದೃಶ್ಯಗಳಲ್ಲಿ ಕೆಲ ಬದಲಾವಣೆಗಳಿಗೂ ಸೂಚಿಸಿತ್ತು. ಇನ್ನು ಸೆನ್ಸಾರ್‌ ಮಂಡಳಿ ನೀಡಿದ ಸೂಚನೆ ಮತ್ತು ಬದಲಾವಣೆಗಳಿಗೆ ಆರಂಭದಲ್ಲಿ ಚಿತ್ರತಂಡ ಒಪ್ಪಿರದ ಕಾರಣ, ‘ಎಮರ್ಜೆನ್ಸಿ’ ಚಿತ್ರ ಸೆನ್ಸಾರ್‌ ಮತ್ತು ಚಿತ್ರತಂಡ ನಡುವೆ ಮುಸುಕಿನ ಗುದ್ದಾಟಕ್ಕೂ ಕಾರಣವಾಗಿತ್ತು. ಹೀಗಾಗಿ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆ ಸುಮಾರು ನಾಲ್ಕು ತಿಂಗಳು ಮುಂದೂಡಬೇಕಾಯಿತು. ಕೊನೆಗೆ ಅನಿವಾರ್ಯವಾಗಿ ‘ಎಮರ್ಜೆನ್ಸಿ’ ಚಿತ್ರದಲ್ಲಿ ಸುಮಾರು 13 ಸನ್ನಿವೇಶಗಳನ್ನು ಬದಲಾವಣೆ ಮಾಡಲು ಚಿತ್ರತಂಡ ಒಪ್ಪಿಕೊಂಡಿದ್ದರಿಂದ ‘ಎಮರ್ಜೆನ್ಸಿ’ ಚಿತ್ರದ ಬಿಡುಗಡೆಗೆ ಸೆನ್ಸಾರ್‌ ಮಂಡಳಿ ಗ್ರೀನ್‌ ಸಿಗ್ನಲ್‌ ನೀಡಿತು.

ತೆರೆಮುಂದೆ, ತೆರೆಹಿಂದೆ ‘ಎಮರ್ಜೆನ್ಸಿ’ಗೆ ಕಂಗನಾ ಹೀರೋಯಿನ್‌!

ಕೊನೆಗೂ ಒಂದಷ್ಟು ಅಡೆತಡೆಗಳನ್ನು ದಾಟಿ ‘ಎಮರ್ಜೆನ್ಸಿ’ ಸಿನೆಮಾ 2025ರ ಜನವರಿ 17ರಂದು ದೇಶದಾದ್ಯಂತ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ‘ಎಮರ್ಜೆನ್ಸಿ’ ಸಿನೆಮಾಕ್ಕೆ ನಟಿ ಕಂಗನಾ ಅವರೇ ಆಕ್ಷನ್‌-ಕಟ್‌ ಹೇಳಿರುವುದಲ್ಲದೆ, ಸಿನಿಮಾದಲ್ಲಿ ಕಂಗನಾ ರಣಾವತ್‌ ಭಾರತದ ಅಂದಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅನುಪಮ್ ಖೇರ್, ಶ್ರೇಯಸ್ ತಲ್ಪಡೆ, ವಿಶಾಕ್ ನಾಯರ್, ಮಹಿಮಾ ಚೌಧರಿ, ಮಿಲಿಂದ್ ಸೋಮನ್, ಸತಿಶ್ ಕೌಶಿಕ್ ಮತ್ತಿತರರು ‘ಎಮರ್ಜೆನ್ಸಿ’ ಸಿನೆಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ‘ಜಿ ಸ್ಟುಡಿಯೋಸ್‌’ ನಿರ್ಮಾಣದಲ್ಲಿ’ಎಮರ್ಜೆನ್ಸಿ’ ಸಿನೆಮಾ ಮೂಡಿಬಂದಿದೆ.

Related Posts

error: Content is protected !!