Pop Corner

‘ಎಕ್ಕ’ಗೆ ಸಿಕ್ಕಳು ಮತ್ತೊಬ್ಬಳು ನಾಯಕಿ!

ಯುವ ರಾಜಕುಮಾರ್ ‘ಎಕ್ಕ’ ಅಂಗಳಕ್ಕೆ ಬಂದ ‘ಸಲಗ’ ಸುಂದರಿ

‘ಎಕ್ಕ’ ಚಿತ್ರಕ್ಕೆ ಮತ್ತೊಬ್ಬಳು ನಾಯಕಿಯಾಗಿ ಸಂಜನಾ ಆನಂದ್ ಆಯ್ಕೆ

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಚಿತ್ರತಂಡದಿಂದ ಅಪ್ಡೇಟ್‌.

‘ಯುವ’ ಸಿನೆಮಾದ ಬಳಿಕ ನಾಯಕ ನಟ ಯುವ ರಾಜಕುಮಾರ್‌ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಸಿನೆಮಾ ‘ಎಕ್ಕ’ ಸೆಟ್ಟೇರಿದ್ದು, ಸದ್ಯ ಈ ಸಿನೆಮಾದ ಶೂಟಿಂಗ್‌ ಭರದಿಂದ ನಡೆಯುತ್ತಿದೆ. ರೋಹಿತ್ ಪದಕಿ ನಿರ್ದೇಶನದಲ್ಲಿ ‘ಎಕ್ಕ’ ಸಿನೆಮಾದ ತೆರೆಗೆ ಬರುತ್ತಿದ್ದು, ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಜೂನ್ 6ಕ್ಕೆ ಸಿನೆಮಾವನ್ನು ತೆರೆಗೆ ತರುವ ಯೋಜನೆ ಹಾಕಿಕೊಂಡಿದೆ ಚಿತ್ರತಂಡ. ಇದೀಗ ‘ಸಂಕ್ರಾಂತಿ ಹಬ್ಬ’ದ ಸಂದರ್ಭದಲ್ಲಿ ಚಿತ್ರತಂಡದ ಕಡೆಯಿಂದ ‘ಎಕ್ಕ’ ಸಿನೆಮಾದ ಬಗ್ಗೆ ಹೊಸ ಅಪ್ ಡೇಟ್ ಸಿಕ್ಕಿದೆ.

‘ಎಕ್ಕ’ಗೆ ಸಂಜನಾ ಮತ್ತೊಬ್ಬ ನಾಯಕಿ

‘ಪಿಆರ್‌ಕೆ ಪ್ರೊಡಕ್ಷನ್ಸ್’, ‘ಕೆಆರ್‌ಜಿ ಸ್ಟುಡಿಯೋಸ್’ ಹಾಗೂ ‘ಜಯಣ್ಣ ಕಂಬೈನ್ಸ್’ ಬ್ಯಾನರ್‌ಗಳ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಎಕ್ಕ’ ಸಿನೆಮಾದಲ್ಲಿ ಯುವರಾಜ್ ಕುಮಾರ್ ನಾಯಕನಾಗಿ ನಟಿಸುತ್ತಿದ್ದು, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ಇದೀಗ ಚಿತ್ರತಂಡ ಮತ್ತೊಬ್ಬ ನಾಯಕಿಯನ್ನು ಪರಿಚಯಿಸಿದೆ. ‘ಸಲಗ’ ಸಿನೆಮಾದ ಸುಂದರಿ ಸಂಜನಾ ಆನಂದ್ ‘ಎಕ್ಕ’ ಚಿತ್ರದ ಮತ್ತೊಬ್ಬ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ‘ತೊದಲು ಪ್ರೀತಿಯ ಮೊದಲ ಪರಿಚಯವಾಗಿ’ ಚಿತ್ರತಂಡ ಸಂಜನಾ ಆನಂದ್ ಅವರ ಹೊಸ ಪೋಸ್ಟರ್‌ ಅನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಸಂಜನಾ ಆನಂದ್‌ ಅವರನ್ನು ತಮ್ಮ ಬಳಗಕ್ಕೆ ಸ್ವಾಗತಿಸಿದೆ.

ಬ್ಯಾಕ್‌ ಟು ಬ್ಯಾಕ್‌ ಚಿತ್ರಗಳಲ್ಲಿ ಸಂಜನಾ ಬಿಝಿ!

‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಮೊದಲ ಹೆಜ್ಜೆ ಇಟ್ಟಿದ್ದ ಸಂಜನಾ ನಂತರ ದುನಿಯಾ ವಿಜಯ್ ಕುಮಾರ್ ಅವರೊಂದಿಗೆ ‘ಸಲಗ’ ಚಿತ್ರದಲ್ಲಿ ನಟಿಸಿದರು. ಸದ್ಯ ದಿನಕರ್ ತೂಗುದೀಪ ನಿರ್ದೇಶನದ ‘ರಾಯಲ್’ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದು, ಈಗ ಸಂಜನಾ ಆನಂದ್ ಚಿತ್ರದ ಮತ್ತೊಬ್ಬ ನಾಯಕಿಯಾಗಿ ‘ಎಕ್ಕ’ ಚಿತ್ರದಲ್ಲಿ ನಟಿಸಲಿದ್ದಾರೆ.

ಇನ್ನು ಟೈಟಲ್‌ಗೆ ತಕ್ಕಂತೆ ‘ಎಕ್ಕ’ ಪಕ್ಕಾ ರಾ ಆಕ್ಷನ್-ಥ್ರಿಲ್ಲರ್ ಸಿನಿಮಾ. ಚಿತ್ರದಲ್ಲಿ ಅತುಲ್ ಕುಲಕರ್ಣಿ, ಶ್ರುತಿ ಕೃಷ್ಣ ಮತ್ತು ರಾಹುಲ್ ದೇವ್ ಶೆಟ್ಟಿ ಕೂಡ ಇದ್ದಾರೆ. ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಿದ್ದಾರೆ. ವಿಕ್ರಂ ಹತ್ವಾರ್‌ ಕಥೆ ಆಧರಿಸಿ ಚಿತ್ರಕ್ಕೆ ರೋಹಿತ್‌ ಪದಕಿ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಸತ್ಯ ಹೆಗಡೆ ಸಿನಿಮಾಟೋಗ್ರಫಿ, ದೀಪು ಎಸ್‌. ಕುಮಾರ್ ಸಂಕಲನಕಾರರಾಗಿರುತ್ತಾರೆ ಮತ್ತು ಅಮರ್ ಪ್ರೊಡಕ್ಷನ್ ವಿನ್ಯಾಸದ ಜವಬ್ದಾರಿ ವಹಿಸಿಕೊಂಡಿದ್ದಾರೆ.

Related Posts

error: Content is protected !!