Quick ಸುದ್ದಿಗೆ ಒಂದು click

‘ಜಯಂ ರವಿ’ ಅಲ್ಲ.., ಇನ್ಮುಂದೆ ‘ರವಿ ಮೋಹನ್’ ಅಂತೆ!

ಹೆಸರು ಬದಲಿಸಿಕೊಂಡು ಹೊಸ ಜರ್ನಿ ಶುರು ಮಾಡಿದ ನಟ

ಹೊಸ ವರ್ಷದಲ್ಲಿ ಅಭಿಮಾನಿಗಳಿಗೆ ಹೊಸ ಸರ್‌ಪ್ರೈಸ್‌ ನೀಡಿದ ರವಿ

ಹೊಸ ಹೆಸರಿನಲ್ಲಿ ಹೊಸ ಸಾಹಸಕ್ಕೆ ರೆಡಿ

ತಮಿಳು ಚಿತ್ರರಂಗದ ಖ್ಯಾತ ನಟ ಜಯಂ ರವಿ, ತಮಿಳು ಮಾತ್ರವಲ್ಲದೆ ತೆಲುಗು, ಮಲೆಯಾಳಂನಲ್ಲೂ ಕೂಡ ತನ್ನದೇ ಆದ ಛಾಪು ಮೂಡಿಸಿರುವ ನಟ. ದಕ್ಷಿಣ ಭಾರತದ ಹಲವು ಭಾಷೆಗಳಲ್ಲಿ ವಿಭಿನ್ನ ಪಾತ್ರಗಳ ಮೂಲಕ ಗಮನಸೆಳೆದ ಅವರೀಗ ಹೊಸ ವರ್ಷದ ಸಂದರ್ಭದಲ್ಲಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಹೌದು, ಸದ್ಯ ಜಯಂ ರವಿ ತಮ್ಮ ಹೆಸರನ್ನು ರವಿ ಮೋಹನ್ ಎಂದು ಬದಲಾಯಿಸಿಕೊಂಡಿದ್ದಾರೆ. ಹೊಸ ವರ್ಷಕ್ಕೆ ಅಭಿಮಾನಿಗಳಿಗೆ ಶುಭ ಕೋರುತ್ತಾ, ತಾವು ಇಲ್ಲಿವರೆಗೆ ಜಯಂ ರವಿಗೆ ನೀಡಿದ ಬೆಂಬಲವನ್ನು ರವಿ ಮೋಹನ್ ಹೆಸರಿಗೂ ನೀಡಬೇಕು ಎಂದು ಅಭಿಮಾನಿಗಳಿಗೆ ಕೋರಿಕೊಂಡಿದ್ದಾರೆ.

ಚಿತ್ರ ನಿರ್ಮಾಣದ ಜೊತೆ ಸಮಾಜಸೇವೆಗೆ ಯೋಜನೆ…

ಜಯಂ ರವಿ ಅವರು ರವಿ ಮೋಹನ್ ಆಗಿ ಹೆಸರು ಬದಲಾಯಿಸಿಕೊಳ್ಳುವುದರ ಜೊತೆಗೆ ಹೊಸ ಪಯಣ ಕೂಡ ಆರಂಭಿಸಿದ್ದಾರೆ. ‘ರವಿ ಮೋಹನ್ ಸ್ಟುಡಿಯೋಸ್’ ಎಂಬ ಹೆಸರಿನ ಪ್ರೊಡಕ್ಷನ್ ಹೌಸ್ ಪ್ರಾರಂಭಿಸಿದ್ದಾರೆ, ಈ ಸಂಸ್ಥೆಯಡಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿ ಒಳ್ಳೆಯ ಸಿನೆಮಾಗಳನ್ನು, ನಿರ್ದೇಶಕರು ಹಾಗೂ ಹೊಸ ನಾಯಕರನ್ನು ಚಿತ್ರರಂಗಕ್ಕೆ ಕೊಡುಗೆಯಾಗಿ ನೀಡುವುದಾಗಿ ರವಿ ಮೋಹನ್ ಘೋಷಣೆ ಮಾಡಿದ್ದಾರೆ.

ಎಲ್ಲವೂ ಅಭಿಮಾನಿಗಳಿಗಾಗಿ…

ರವಿ ಮೋಹನ್ ತಮ್ಮನ್ನು ಇಲ್ಲಿವರೆಗೆ ಬೆಳೆಸಿದ ಹಾಗೂ ಬೆಂಬಲಿಸಿ ಅಭಿಮಾನಿಗಳಿಗೆ ಏನಾದರೂ ಮರಳಿ ಕೊಡಬೇಕೆಂಬ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ರವಿ ಮೋಹನ್ ಫ್ಯಾನ್ಸ್ ಕ್ಲಬ್ ಗಳು ‘ರವಿ ಮೋಹನ್ ಫ್ಯಾನ್ಸ್ ಫೌಂಡೇಶನ್’ ಎಂಬ ರಚನಾತ್ಮಕ ಸಂಸ್ಥೆಯಾಗಿ ಪರಿವರ್ತನೆಯಾಗಿವೆ. ಈ ಫೌಂಡೇಷನ್ ಮೂಲಕ ಅಗತ್ಯವಿರುವ ಎಲ್ಲರಿಗೂ ಸಹಾಯ ಮಾಡುವುದಾಗಿ ರವಿ ಮೋಹನ್ ತಿಳಿಸಿದ್ದಾರೆ.

Related Posts

error: Content is protected !!