Video

ಟ್ರೇಲರ್ ‘ನೋಡಿದವರು ಏನಂತಾರೆ’ ಕೇಳಿ ನೋಡಿ!

ಹೊರಬಂತು ‘ನೋಡಿದವರು ಏನಂತಾರೆ’ ಚಿತ್ರದ ಟ್ರೇಲರ್‌

ಕಾಡುವ ಕಥೆಯೊಂದಿಗೆ ಬಂದ ನವೀನ್ ಶಂಕರ್…

ವಿಭಿನ್ನಕಥೆಯ ‘ನೋಡಿದವರು ಏನಂತಾರೆ’ ಸಿನೆಮಾ

ಉತ್ತರ ಕರ್ನಾಟಕದ ಅಪ್ಪಟ ಪ್ರತಿಭೆ ನವೀಶ್ ಶಂಕರ್ ಕಥೆಗಳ ಆಯ್ಕೆಗಳೇ ವಿಭಿನ್ನ. ಪ್ರತಿ ಸಿನೆಮಾದಲ್ಲಿಯೂ ತಾವು ಎಂಥ ನಟ ಅನ್ನೋದನ್ನು ಸಾಬೀತುಪಡಿಸಿಕೊಂಡು ಬರುತ್ತಿರುವ ನವೀನ್ ಈಗ ಕಾಡುವ ಕಥೆಯೊಂದಿಗೆ ಚಿತ್ರಮಂದಿರಕ್ಕೆ ಬರುತ್ತಿದ್ದಾರೆ. ಕುಲದೀಪ್ ಕಾರಿಯಪ್ಪ ಸಾರಥ್ಯದ ‘ನೋಡಿದವರು ಏನಂತಾರೆ’ ಸಿನೆಮಾದಲ್ಲಿ ನವೀನ್ ಅಕ್ಷರಶಃ ಜೀವಿಸಿದ್ದಾರೆ. ಅದಕ್ಕೆ ಬಿಡುಗಡೆಯಾಗಿರುವ ಟ್ರೇಲರ್ ಉದಾಹರಣೆ. ಬಹುಮುಖ ಪ್ರತಿಭೆ ಸಾಧುಕೋಕಿಲಾ, ಹಿರಿಯ ಪತ್ರಕರ್ತರಾದ ಜೋಗಿ ‘ನೋಡಿದವರು ಏನಂತಾರೆ’ ಟ್ರೇಲರ್ ಬಿಡುಗಡೆ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಟ್ರೇಲರ್ ಅನಾವರಣ ಕಾರ್ಯಕ್ರಮದಲ್ಲಿ ಇಡೀ ಚಿತ್ರತಂಡ ಭಾಗಿಯಾಗಿತ್ತು.

‘ನೋಡಿದವರು ಏನಂತಾರೆ’ ಸಿನೆಮಾದ ಟ್ರೇಲರ್‌ ವಿಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಬಹುದು…

ಭಾವನಾತ್ಮಕ ಚೌಕಟ್ಟಿನಲ್ಲಿ ‘ನೋಡಿದವರು ಏನಂತಾರೆ’ ಟ್ರೇಲರ್‌…

ಇನ್ನು ಬಿಡುಗಡೆಯಾಗಿರುವ ‘ನೋಡಿದವರು ಏನಂತಾರೆ’ ಸಿನೆಮಾದ ಟ್ರೇಲರಿನಲ್ಲಿ ಭಾವನಾತ್ಮಕ ಚೌಕಟ್ಟಿನಲ್ಲಿ ಸಿನೆಮಾದ ಕಥೆ ಸಾಗುವ ಸಣ್ಣ ಝಲಕ್‌ ಅನ್ನು ಕಟ್ಟಿಕೊಡಲಾಗಿದೆ. ‘ನೋಡಿದವರು ಏನಂತಾರೆ’ ಸಿನೆಮಾದಲ್ಲಿ ನವೀಶ್ ಶಂಕರ್ ಸಿದ್ದಾರ್ಥ್ ದೇವಯ್ಯನಾಗಿ ನಟಿಸಿದ್ದು, ಅಪೂರ್ವ ಭಾರದ್ವಾಜ್ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಪ್ರೀತಿ, ಸ್ನೇಹ, ತ್ಯಾಗ, ಸೆಂಟಿಮೆಂಟ್, ಎಮೋಷನ್ ಅಂಶಗಳನ್ನು ‘ನೋಡಿದವರು ಏನಂತಾರೆ’ ಸಿನೆಮಾದ ಟ್ರೇಲರಿನಲ್ಲಿ ಕಾಣಬಹುದು.

ನಾಗೇಶ್ ಗೋಪಾಲ್ ನಿರ್ಮಾಣದ ಈ ಚಿತ್ರಕ್ಕೆ ಮಯೂರೇಶ್ ಸಂಗೀತ ಸಂಯೋಜಿಸಿದ್ದು, ಅಶ್ವಿನ್ ಕ್ಯಾಮೆರಾ ಹಿಡಿದ್ದಾರೆ. ಕುಲದೀಪ್ ಕಾರಿಯಪ್ಪ ಕಥೆ, ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿದ್ದು, ಕುಲದೀಪ್ ಕಾರಿಯಪ್ಪ ಅವರ ಜೊತೆ ಸಾಯಿ ಶ್ರೀನಿಧಿ, ಪ್ರಜ್ವಲ್ ರಾಜ್ ಮತ್ತು ಸುನಿಲ್ ವೆಂಕಟೇಶ್ ಸಂಭಾಷಣೆ ಬರೆದಿದ್ದಾರೆ. ಜಯಂತ್ ಕಾಯ್ಕಿಣಿ ‘ನೋಡಿದವರು ಏನಂತಾರೆ’ ಸಿನೆಮಾದ ಎರಡು ಹಾಡುಗಳಿಗೆ ಸಾಹಿತ್ಯ ಬರೆದಿದ್ದು, ಒಂದು ಹಾಡಿಗೆ ಲೈಲಾ ಪದ ಪೊಣಿಸಿದ್ದಾರೆ. ಸಾಧು ಕೋಕಿಲ, ಅನನ್ಯಾ ಭಟ್ ಮತ್ತು ಕೀರ್ತನ್ ಹೊಳ್ಳಾ ಹಾಗೂ ಅಮೇರಿಕಾದ ಗಾಯಕ ಜೋರ್ಡನ್ ರಾಬರ್ಟ್ ಕಿರ್ಕ್ ‘ನೋಡಿದವರು ಏನಂತಾರೆ’  ಸಿನೆಮಾದ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಸದ್ಯ ಟ್ರೇಲರ್‌ ಮೂಲಕ ಹೊರಬಂದಿರುವ ‘ನೋಡಿದವರು ಏನಂತಾರೆ’ ಸಿನೆಮಾ ಇದೇ ಜನವರಿ ತಿಂಗಳ 31ರಂದು ಬಿಡುಗಡೆಯಾಗಲಿದೆ.

Related Posts

error: Content is protected !!