Street Beat

‘ಸೀಟ್ ಎಡ್ಜ್’ನಲ್ಲಿ ಶೂಟಿಂಗ್ ಕಂಪ್ಲೀಟ್‌!

ಸಿದ್ದು ಮೂಲಿಮನಿ ‘ಸೀಟ್ ಎಡ್ಜ್’ ಚಿತ್ರದ ಶೂಟಿಂಗ್ ಮುಕ್ತಾಯ…

ಫೆ. 7ಕ್ಕೆ ಸಿನೆಮಾದ ಮೊದಲ ಹಾಡು ರಿಲೀಸ್

ಡಾರ್ಕ್ ಕಾಮಿಡಿಗೆ ಹಾರರ್ ಥ್ರಿಲ್ಲರ್ ಟಚ್

ಸಿನೆಮಾ ನೋಡುವಂಥ ಪ್ರೇಕ್ಷಕರನ್ನು ಸೀಟ್ ನ ಎಡ್ಜ್ ಗೆ ಕೂರಿಸುವಂತಹ ಸಿನೆಮಾ ಮಾಡಬೇಕು ಅನ್ನೋದು ಪ್ರತಿಯೊಬ್ಬ ನಿರ್ದೇಶಕರ ಕನಸು. ಸಾಮಾನ್ಯವಾಗಿ ಅನೇಕ ಬಾರಿ ಚಿತ್ರತಂಡದವರು, ಮಾಧ್ಯವದವರು, ನೋಡುಗರು ‘ಸೀಟ್ ಎಡ್ಜ್’ ನಲ್ಲಿ ಕೂರಿಸುವಂಥ ಸಿನೆಮಾ ಅಂಥ ಅಲ್ಲಲ್ಲಿ ಹೇಳುತ್ತಿರುವುದನ್ನು ಬಹುತೇಕ ಎಲ್ಲರೂ ಕೇಳಿರುತ್ತೀರಿ. ಈಗ ಇದೇ ‘ಸೀಟ್ ಎಡ್ಜ್’ ಎಂಬ ಟೈಟಲ್ ಇಟ್ಕೊಂಡು ಕನ್ನಡದಲ್ಲೊಂದು ಸಿನೆಮಾ ತೆರೆಗೆ ಬರ್ತಿದೆ. ಈಗಾಗಲೇ ಸದ್ದಿಲ್ಲದೇ ಈ ‘ಸೀಟ್ ಎಡ್ಜ್’ ಚಿತ್ರದ ಶೂಟಿಂಗ್ ಕೂಡ ಮುಕ್ತಾಯಗೊಂಡಿದ್ದು, ಸದ್ಯ ‘ಸೀಟ್ ಎಡ್ಜ್’ ಸಿನೆಮಾದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳು ಈಗ ಅಂತಿಮ ಹಂತಕ್ಕೆ ಬಂದಿದೆ.

‘ಸೀಟ್ ಎಡ್ಜ್’ ನಲ್ಲಿ ಕೂತ ಸಿದ್ದು ಮೂಲಿಮನಿ… 

ಕನ್ನಡ ಕಿರುತೆರೆ ಲೋಕದಲ್ಲಿ ಒಂದಷ್ಟು ಹೆಸರು ಮಾಡಿರುವ, ಈಗಾಗಲೇ ಕನ್ನಡ ಹಿರಿತೆರೆಯಲ್ಲೂ ಕೂಡ ಒಂದಷ್ಟು ಸಿನೆಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿರುವ ಉತ್ತರ ಕರ್ನಾಟಕದ ಪ್ರತಿಭೆ ಸಿದ್ದು ಮೂಲಿಮನಿ ‘ಸೀಟ್ ಎಡ್ಜ್’ ಸಿನೆಮಾದ ನಾಯಕ ನಟನಾಗಿ ಅಭಿನಯಿಸುತ್ತಿದ್ದಾರೆ. ನವ ಪ್ರತಿಭೆ ರವೀಕ್ಷಾ ಶೆಟ್ಟಿ ಚಿತ್ರದ ನಾಯಕಿ. ಕನ್ನಡದಲ್ಲಿ ‘ಕೆಮಿಸ್ಟ್ರೀ ಆಫ್ ಕರಿಯಪ್ಪ’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು ಸಿನೆಮಾದಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಚೇತನ್‌ ಶೆಟ್ಟಿ, ‘ಸೀಟ್ ಎಡ್ಜ್’ ಸಿನೆಮಾ ಮೂಲಕ ಸ್ವತಂತ್ರ ನಿರ್ದೇಶಕನಾಗಿ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

‘ಸೀಟ್ ಎಡ್ಜ್’ಗೆ ನೈಜ ಘಟನೆ ಸ್ಫೂರ್ತಿಯಂತೆ!

ಇನ್ನು ‘ಸೀಟ್ ಎಡ್ಜ್’ ನೈಜ ಘಟನೆ ಆಧರಿಸಿದ ಚಿತ್ರವಂತೆ. ಡಾರ್ಕ್ ಕಾಮಿಡಿಗೆ ಹಾರರ್ ಥ್ರಿಲ್ಲರ್ ಟಚ್ ಕೊಟ್ಟು ಅದನ್ನು ‘ಸೀಟ್ ಎಡ್ಜ್’ ಚಿತ್ರದ ಮೂಲಕ ತೆರೆಮೇಲೆ ತರುವ ಪ್ರಯತ್ನ ಮಾಡುತ್ತಿದ್ದಾರೆ ಯುವ ನಿರ್ದೇಶಕ ಚೇತನ್ ಶೆಟ್ಟಿ. ನೈಜ ಘಟನೆಯಿಂದ ಸ್ಪೂರ್ತಿ ಪಡೆದಿರುವ ‘ಸೀಟ್ ಎಡ್ಜ್’ ಸಿನೆಮಾದಲ್ಲಿ ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಕಿರಣ್ ನಾಯಕರೇ, ಪುನೀತ್ ಬಾಬು, ತೇಜು ಪೊನ್ನಪ್ಪ, ಮನಮೋಹನ್ ರೈ ಬಣ್ಣ ಹಚ್ಚಿದ್ದಾರೆ. ‘ಸೀಟ್ ಎಡ್ಜ್’ ಚಿತ್ರಕ್ಕೆ ಚೇತನ್ ಶೆಟ್ಟಿ ಕಥೆ, ಚಿತ್ರಕಥೆ ಬರೆದು ಆಕ್ಷನ್-ಕಟ್ ಹೇಳಿದ್ದು, ಚಿತ್ರದ ಹಾಡುಗಳಿಗೆ ಆಕಾಶ್ ಪರ್ವ ಸಂಗೀತ ಸಂಯೋಜಿಸುತ್ತಿದ್ದಾರೆ. ಉಳಿದಂತೆ ದೀಪಕ್ ಕುಮಾರ್ ಜೆ. ಕೆ ಛಾಯಾಗ್ರಹಣ ಹಾಗೂ ನಾಗೇಂದ್ರ ಉಜ್ಜನಿ ಸಂಕಲನ ‘ಸೀಟ್ ಎಡ್ಜ್’ ಚಿತ್ರಕ್ಕಿದೆ.

ಈ ವರ್ಷದ ಮಧ್ಯ ಭಾಗದಲ್ಲಿ ‘ಸೀಟ್ ಎಡ್ಜ್’ ತೆರೆಗೆ

‘ಎನ್‌. ಆರ್. ಸಿನೆಮಾ ಪ್ರೊಡಕ್ಷನ್ಸ್’ ಬ್ಯಾನರ್ ಅಡಿಯಲ್ಲಿ ಗಿರಿಧರ ಟಿ. ವಸಂತಪುರ ‘ಸೀಟ್ ಎಡ್ಜ್’ ಚಿತ್ರವನ್ನು ನಿರ್ಮಾಣ ಮಾಡಿದ್ದು, ಸುಜಾತ ಗಿರಿಧರ್ ಸಹ ನಿರ್ಮಾಪಕರಾಗಿ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು ಸುತ್ತಮುತ್ತ ‘ಸೀಟ್ ಎಡ್ಜ್’ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ 7ಕ್ಕೆ ‘ಸೀಟ್ ಎಡ್ಜ್’ ಸಿನೆಮಾದ ಮೊದಲ ಹಾಡನ್ನು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಇದೇ ವರ್ಷದ ಮಧ್ಯ ಬಾಗಕ್ಕೆ ‘ಸೀಟ್ ಎಡ್ಜ್’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!