ಹನುಮಂತ ‘ಬಿಗ್ ಬಾಸ್’ ಕನ್ನಡ ಸೀಸನ್ 11ರ ವಿಜೇತ

ಉತ್ತರ ಕರ್ನಾಟಕದ ಹುಡುಗನ ಕೈಗೆ ‘ಬಿಗ್ ಬಾಸ್’ ಟ್ರೋಪಿ
ಜವಾರಿ ಹುಡುಗನಿಗೆ ಒಲಿದಳು ಲಕ್ಷ್ಮೀ
‘ಬಿಗ್ ಬಾಸ್’ ಕನ್ನಡ ಸೀಸನ್ 11ಕ್ಕೆ ಅಧಿಕೃತ ತೆರೆ
‘ಬಿಗ್ ಬಾಸ್’ ಕನ್ನಡ ಸೀಸನ್ 11ರಲ್ಲಿ ಯಾರು ಕಪ್ ಗೆಲ್ಲುತ್ತಾರೆ ಎನ್ನುವ ಪ್ರಶ್ನೆಗೆ ಕೊನೆಗೂ ಉತ್ತರ ಸಿಕ್ಕಿದೆ. ‘ಬಿಗ್ ಬಾಸ್’ ಕನ್ನಡ ಸೀಸನ್ 11 ರಲ್ಲಿ ಹನುಮಂತ ಅವರು 5 ಕೋಟಿ ಮತಗಳನ್ನು ಪಡೆದು ವಿಜೇತರಾಗಿದ್ದಾರೆ. ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಗೆದ್ದ ಮೊದಲ ಸ್ಪರ್ಧಿ ಎಂಬ ದಾಖಲೆಯನ್ನು ಸೃಷ್ಟಿಸಿದ್ದ ಹನುಮಂತ, ತಮ್ಮ ಸರಳತೆ ಮತ್ತು ಬುದ್ಧಿವಂತಿಕೆಯಿಂದ ಜನರ ಮನಗೆಲ್ಲುವಲ್ಲೂ ಯಶಸ್ವಿಯಾಗಿದ್ದಾರೆ.
‘ಬಿಗ್ ಬಾಸ್’ ಕನ್ನಡ ಸೀಸನ್ 11ರಲ್ಲಿ ಬರೋಬ್ಬರಿ 5 ಕೋಟಿ ವೋಟ್ ಪಡೆದ ಹನುಮಂತ ಅವರ ಗೆಲುವು ಉತ್ತರ ಕರ್ನಾಟಕದ ಜನರ ಹರ್ಷಕ್ಕೆ ಕಾರಣವಾಗಿದೆ. ಈ ಮೂಲಕ ಹನುಮಂತ ಕರ್ನಾಟಕ ಜನರ ಫೇವರಿಟ್ ಎನಿಸಿಕೊಂಡಿದ್ದಾರೆ. ‘ಬಿಗ್ ಬಾಸ್ ಕನ್ನಡ’ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಪಡೆದು ಗೆದ್ದ ಮೊದಲ ಸ್ಪರ್ಧಿ ಹನುಮಂತ ಆಗಿದ್ದಾರೆ. ಈ ಮೂಲಕ ಅವರು ದಾಖಲೆ ಬರೆದಿದ್ದಾರೆ.
20 ಸ್ಪರ್ಧಿಗಳ ನಡುವೆ ಪೈಪೋಟಿ!
ಬಾರಿಯ ಬಿಗ್ ಬಾಸ್ನಲ್ಲಿ ಒಟ್ಟೂ 20 ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದರು. ಅವರಲ್ಲಿ 19 ಜನರನ್ನು ಹಿಂದಿಕ್ಕಿ ಹನುಮಂತ ಅವರು ಕಪ್ನ ಒಲಿಸಿಕೊಂಡಿದ್ದಾರೆ. ಜವಾರಿ ಹುಡುಗನಾಗಿ, ಜವಾರಿ ಹಾಡುಗಳನ್ನು ಹಾಡುತ್ತಾ ಗಮನ ಸೆಳೆದರು. ಯಾರೇ ನಾಮಿನೇಟ್ ಮಾಡಲಿ, ಯಾರು ಏನೇ ಕಾರಣ ಕೊಡಲಿ, ಅವರನ್ನು ಕಳಪೆಗೆ ಹಾಕಲಿ ಇದಕ್ಕೆಲ್ಲ ಅವರು ತಲೆಕೆಡಿಸಿಕೊಳ್ಳದೆ ಆಡಿದರು. ಅದಕ್ಕೆ ಕೊನೆಗೂ ಜಯ ಸಿಕ್ಕಂತೆ ಆಗಿದೆ. ‘ಒಳ್ಳೆಯತನಕ್ಕೆ ಜಯ ಇದೆ’ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹೇಳುತ್ತಿದ್ದಾರೆ. ಹನುಮಂತನ ಪರವಾಗಿ ಅನೇಕರು ವೋಟ್ ಮಾಡುವಂತೆ ಕೋರಿದ್ದರು. ಅದರಂತೆ ಉತ್ತರ ಕರ್ನಾಟಕ ಮಂದಿ ಹನುಮಂತಗೆ ಭರ್ಜರಿ ವೋಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಕರ್ನಾಟಕ ಮಂದಿ ಮಾತ್ರ ಅಲ್ಲದೆ, ಎಲ್ಲಾ ಭಾಗದ ಜನರಿಗೂ ಅವರು ಇಷ್ಟ ಆಗಿದ್ದರು. ಈ ಕಾರಣಕ್ಕೆ ಅವರಿಗೆ 5 ಕೋಟಿ ವೋಟ್ ಬಿದ್ದಿದೆ ಎನ್ನಲಾಗುತ್ತಿದೆ.