Pop Corner

ಹೈ ಆಕ್ಷನ್ ಪ್ಯಾಕ್ಡ್ ‘ಎಲ್-2:ಎಂಪುರಾನ್’ ಟೀಸರ್ ಔಟ್‌

ಮಲಯಾಳಂ ಸಿನಿ ಇಂಡಸ್ಟ್ರೀಯತ್ತ ಲೈಕಾ ಪ್ರೊಡಕ್ಷನ್…

ಮೋಹನ್ ಲಾಲ್ – ಪೃಥ್ವಿರಾಜ್ ಸುಕುಮಾರನ್ ಕ್ರೇಜಿ ಕಾಂಬಿನೇಷನ್ 

‘ಲೂಸಿಫರ್‌’ ಚಿತ್ರದ ಮುಂದುವರೆದ ಭಾಗ…

ಮಾಲಿವುಡ್ ಸೂಪರ್ ಸ್ಟಾರ್ ಮೋಹನ್ ಲಾಲ್ ಹಾಗೂ ಪೃಥ್ವಿರಾಜ್ ಸುಕುಮಾರನ್ ಈ ಕ್ರೇಜಿ ಕಾಂಬಿನೇಷನ್ ಬಹುನಿರೀಕ್ಷಿತ ಸಿನಿಮಾ ‘ಎಲ್-2:ಎಂಪುರಾನ್’. ‘ಲೂಸಿಫರ್’ ಮೊದಲ ಭಾಗದ ಮುಂದುವರೆದ ಅಧ್ಯಾಯವಾಗಿರುವ ‘ಎಲ್-2:ಎಂಪುರಾನ್’ ಚಿತ್ರದ ಆಕ್ಷನ್ ಪ್ಯಾಕ್ಡ್ ಟೀಸರ್ ಅನಾವರಣಗೊಂಡಿದೆ.

ಇದೇ ಜನವರಿ 27ರಂದು ಕೇರಳದ ಕೊಚ್ಚಿಯಲ್ಲಿ ‘ಎಲ್-2:ಎಂಪುರಾನ್’ ಟೀಸರ್ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಿತು. ಮಾಲಿವುಡ್ ಮತ್ತೊಬ್ಬ ಸೂಪರ್ ಸ್ಟಾರ್ ಮಮ್ಮುಟ್ಟಿ ಟೀಸರ್ ಲಾಂಚ್ ಇವೆಂಟ್ ಗೆ ವಿಶೇಷ ಅತಿಥಿಯಾಗಿ ಆಗಮಿಸಿ ‘ಎಲ್-2:ಎಂಪುರಾನ್’  ಟೀಸರ್ ಅನಾವರಣ ಮಾಡಿದರು. ಕಾಲಿವುಡ್ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್’ ಈ ಚಿತ್ರದ ಮೂಲಕ ಮಾಲಿವುಡ್ ಗೆ ಎಂಟ್ರಿಯಾಗಿದೆ. ಬಹಳ ಅದ್ಧೂರಿಯಾಗಿ ‘ಲೂಸಿಫರ್’ ಪಾರ್ಟ್ 2 ಸಿನೆಮಾವನ್ನು ನಿರ್ಮಾಪಕ ಸುಭಾಸ್ಕರನ್ ಹಾಗೂ ಆಂಟೋನಿ ಪೆರುಂಬವೂರ್ ನಿರ್ಮಾಣ ಮಾಡಿದ್ದಾರೆ. ಇನ್ನು’ಎಲ್-2:ಎಂಪುರಾನ್’ ಚಿತ್ರದಲ್ಲಿಸ್ಟೀಫನ್ ನೆಡುಂಪಲ್ಲಿ ಪಾತ್ರದಲ್ಲಿ ಮೋಹನ್ ಲಾಲ್ ಅಬ್ಬರಿಸಿದ್ದು, ನಿರ್ದೇಶನದ ಜೊತೆಗೆ ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇಂದ್ರಜಿತ್ ಸುಕುಮಾರನ್, ಟೊವಿನೋ ಥಾಮಸ್, ಮಂಜು ವಾರಿಯರ್, ಸಾನಿಯಾ ಅಯ್ಯಪ್ಪನ್, ಸಾಯಿ ಕುಮಾರ್, ಬೈಜು ಸಂತೋಷ್ ಹೀಗೆ ಬಹುದೊಡ್ಡ ಕಲಾವಿದರ ಬೃಹತ್‌ ತಾರಾಬಳಗವೇ ‘L2E: ಎಂಪುರಾನ್’ ಚಿತ್ರದಲ್ಲಿದೆ.

2025ರ ಮಾರ್ಚ್‌ 27ಕ್ಕೆ ‘L2E: ಎಂಪುರಾನ್’ ಚಿತ್ರತೆರೆಗೆ

‘L2E: ಎಂಪುರಾನ್’ ಚಿತ್ರಕ್ಕೆ ಕಥೆ ಮುರಳಿ ಗೋಪಿ ಬರೆದಿದ್ದಾರೆ. ಸಿನೆಮಾದ ಹಾಡುಗಳಿಗೆ ದೀಪಕ್ ದೇವ್ ಸಂಗೀತ ಸಂಯೋಜಿಸಿದ್ದಾರೆ. ಸುಜಿತ್ ವಾಸುದೇವ್ ಛಾಯಾಗ್ರಹಣ ‘L2E: ಎಂಪುರಾನ್’ ಚಿತ್ರಕ್ಕಿದೆ. ಸುರೇಶ್ ಬಾಲಾಜೆ ಮತ್ತು ಜಾರ್ಜ್ ಪಯಸ್ ಕಾರ್ಯಕಾರಿ ನಿರ್ಮಾಪಕರಾಗಿ ‘L2E: ಎಂಪುರಾನ್’ ಚಿತ್ರಕ್ಕೆ ಸಾಥ್ ಕೊಟ್ಟಿದ್ದಾರೆ. ಮೋಹನ್‌ದಾಸ್ ಕಲಾ ನಿರ್ದೇಶಕರಾಗಿ ದುಡಿದ್ದಾರೆ. ‘L2E: ಎಂಪುರಾನ್’ ಮಾರ್ಚ್ 27, 2025 ರಂದು ಮಲಯಾಳಂ, ತೆಲುಗು, ತಮಿಳು, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. 2019ರಲ್ಲಿ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದ ‘ಲೂಸಿಫರ್’ ಚಿತ್ರಕ್ಕೆ ಪೃಥ್ವಿರಾಜ್ ಸುಕುಮಾರ್ ಆಕ್ಷನ್-ಕಟ್ ಹೇಳಿದ್ದರು.

Related Posts

error: Content is protected !!