‘ಸೆಲೆಬ್ರಿಟಿ ಕ್ರಿಕೆಟ್ ಲೀಗ್-2025’ (CCL-2025) ಅಖಾಡ ರೆಡಿ

ಇದೇ ಫೆಬ್ರವರಿ 8ರಿಂದ ‘ಸೆಲೆಬ್ರಿಟಿ ಕ್ರಿಕೆಟ್ ಲೀಗ್’ ಆರಂಭ
ಸೆಣೆಸಾಡಲು ‘ಕರ್ನಾಟಕ ಬುಲ್ಡೋಜರ್ಸ್’ ರೆಡಿ…
ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯಲಿರುವ ಸ್ಯಾಂಡಲ್‌ವುಡ್ ಸ್ಟಾರ್ಸ್
ಸ್ಯಾಂಡಲ್‌ವುಡ್ ಸ್ಟಾರ್ಸ್ ಶೂಟಿಂಗ್ ಗೆ ಬ್ರೇಕ್ ಹಾಕಿ ಕೈಯಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಮೈದಾನಕ್ಕೆ ಇಳಿಯೋ ಸಮಯ ಮತ್ತೆ ಬಂದಿದೆ. ‘ಸಿಸಿಎಲ್ 11ನೇ ಸೀಸನ್’ಗೆ ದಿನಗಣನೆ ಶುರುವಾಗಿದ್ದು, ಇದೇ ಫೆಬ್ರವರಿ 8ರಿಂದ ‘ಸಿಸಿಎಲ್ 11ನೇ ಸೀಸನ್’ ರಂಗೇರುತ್ತಿದೆ. ಬೆಂಗಳೂರಿನಲ್ಲಿ ಉದ್ಘಾಟನಾ ಪಂದ್ಯ ನಡೆಯಲಿದೆ. ‘ಕರ್ನಾಟಕ ಬುಲ್ಡೋಜರ್ಸ್’ ತಂಡವನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮುನ್ನಡೆಸಲಿದ್ದು, ತಂಡದ ಮಾಲೀಕರಾಗಿ ಅಶೋಕ್ ಖೇಣಿ ಸಾಥ್ ಕೊಡುತ್ತಿದ್ದಾರೆ. ಕಳೆದ ಬಾರಿ ರನ್ನರ್ ಅಪ್ ಆಗಿ ಹೊರಗಹೊಮ್ಮಿದ್ದ ‘ಕರ್ನಾಟಕ ಬುಲ್ಡೋಜರ್ಸ್’ ತಂಡ ಈ ಬಾರಿ ಕಪ್ ಗೆಲ್ಲುವ ತವಕದಲ್ಲಿದ್ದಾರೆ. ಈ ಬಾರಿಯ ವಿಶೇಷ ಅಂದ್ರೆ ಕಳೆದ ಬಾರಿ ಮಿಸ್ ಆಗಿದ್ದ ಗೋಲ್ಡನ್ ಸ್ಟಾರ್ ಗಣೇಶ್ ತಂಡ ಸೇರ್ಪಡೆಯಾಗಿದ್ದಾರೆ. ‘ಸಿಸಿಎಲ್ ಸೀಸನ್ 11’ಕ್ಕೆ ದಿನಗಣನೆ ಶುರುವಾಗಿದ್ದು, ಈ ಹಿನ್ನೆಲೆ ಬೆಂಗಳೂರಿನಲ್ಲಿ ನಿನ್ನೆ ಸುದ್ದಿ ಗೋಷ್ಟಿ ಆಯೋಜಿಸಲಾಗಿತ್ತು. ಈ ವೇಳೆ ಕಿಚ್ಚ ಸುದೀಪ್, ‘ಸಿಸಿಎಲ್’ ಆಯೋಜಕರಾದ ವಿಷ್ಣು ಇಂದೋರಿ ಹಾಗೂ ‘ಕರ್ನಾಟಕ ಬುಲ್ಡೋಜರ್ಸ್’ ತಂಡದ ನಾಯಕ ಅಶೋಕ್ ಖೇಣಿ ಉಪಸ್ಥಿತರಿದ್ದರು.
‘ಕರ್ನಾಟಕ ಬುಲ್ಡೋಜರ್ಸ್’ ತಂಡಕ್ಕೆ ಸುದೀಪ್ ನಾಯಕ
‘ಕರ್ನಾಟಕ ಬುಲ್ಡೋಜರ್ಸ್’ ತಂಡದ ನಾಯಕ ಸುದೀಪ್ ಮಾತನಾಡಿ, ”ಸಿಸಿಎಲ್’ ನಡೆಸುವುದೇ ಬಹಳ ಕಷ್ಟ. ನಾಲ್ಕು ಟೀಂ ಒಟ್ಟಿಗೆ ಶುರುವಾದ ಜರ್ನಿ ಇದು. ಇದೇ ಮೈದಾನದಲ್ಲಿ ಮುಂಬೈ ಮೇಲೆ ಮೊದಲ ಮ್ಯಾಚ್ ಆಡಿದ್ದೇವು. ಅದ್ಭುತ ವಾತಾವರಣ ಆ ದಿನ ಇತ್ತು. ನಾವೆಲ್ಲಾ ಚಿಕ್ಕ ಚಿಕ್ಕ ಗ್ರೌಂಡ್ ನಲ್ಲಿ ಆಟವಾಡುತ್ತಿದ್ದರು. ಅವತ್ತಿಗೆ ಗ್ರೌಂಡ್ ಫುಲ್ ಆಗುತ್ತದೆ. ಇಷ್ಟು ಜನಗಳ ಮಧ್ಯೆ ಆಡುವುದು. ಭಯ ಎಂದರೇನು ಅನ್ನುವುದು ಅವತ್ತು ಗೊತ್ತಾಯ್ತು. ನಮಗೆ ಅದು ಕೊಟ್ಟ ಅದ್ಭುತ ಗಿಫ್ಟ್… ಚಿತ್ರರಂಗದ ಬೇರೆ ಬೇರೆ ಭಾಷೆಗಳ ಜೊತೆ ನಮಗೆ ಒಡನಾಟ ಇರಲಿಲ್ಲ. ಸೇತುವೆ ಇರಲಿಲ್ಲ. ಆದರೆ ‘ಸಿಸಿಎಲ್’ ನಿಂದ ಸಂಪರ್ಕವಾಯಿತು’ ಎಂದು ತಿಳಿಸಿದರು.
ಅಶೋಕ್ ಖೇಣಿ ಮಾತನಾಡಿ, ”ಕರ್ನಾಟಕ ಬುಲ್ಡೋಜರ್ಸ್’ ನಾಲ್ಕು ಬಾರಿ ಕಪ್ ಗೆದ್ದಿದೆ. ಈ ಬಾರಿ ಕಪ್ ಗೆಲ್ಲುತ್ತೇವೆ ಎಂಬ ಭರವಸೆ ಇದೆ’ ಎಂದರು.
‘ಸಿಸಿಎಲ್’ ಆಯೋಜಕರಾದ ವಿಷ್ಣು ಇಂದೂರಿ ಮಾತನಾಡಿ , ”ಸಿಸಿಎಲ್’ ಶುರುವಾಗಿ 11 ವರ್ಷವಾಯ್ತು. ಇದು 11ನೇ ಸೀಸನ್. ಮೊದಲ ಟೂರ್ನಮೆಂಟ್ ಬೆಂಗಳೂರಲ್ಲಿ ಆಯೋಜಿಸಿದಾಗ ಅತಿ ಹೆಚ್ಚು ಜನ ನೋಡಿರುವುದು ದಾಖಲೆ. ‘ಕರ್ನಾಟಕ ಬುಲ್ಡೋಜರ್ಸ್’ ತಂಡ ನನ್ನ ಹೃದಯಕ್ಕೆ ಹತ್ತಿರಕ್ಕೆ ಇದೆ. ಸುದೀಪ್ ನೀವು ಸ್ಟಾರ್ ಅನ್ನುವುದಕ್ಕಿಂತ ನಮ್ಮೆಲ್ಲರಿಗೆ ಸಹೋದರ ಇದ್ದಂತೆ. ನಿಮ್ಮ ಬೆಂಬಲಕ್ಕೆ ಧನ್ಯವಾದ ಸಣ್ಣ ಪದ. ನೈಸ್ ಮುಖ್ಯಸ್ಥರಾದ ಖೇಣಿ ‘ಸಿಸಿಎಲ್’ ಬಲ’ ಎಂದರು.
ಈ ಬಾರಿ ‘ಸಿಸಿಎಲ್ ಸೀಸನ್ 11’ಕ್ಕೆ ಒಟ್ಟು 7 ತಂಡಗಳು ಕ್ರಿಕೆಟ್ ಆಡಲಿದ್ದು, ಆ ಟೀಮ್‌ಗಳ ಬಗ್ಗೆ ಇಲ್ಲಿದೆ ಮಾಹಿತಿ
‘ಕರ್ನಾಟಕ ಬುಲ್ಡೋಜರ್ಸ್’, ‘ಚೆನ್ನೈ ರೈನೋಸ್’, ‘ಬೆಂಗಾಲ್ ಟೈಗರ್ಸ್’, ‘ಪಂಜಾಬ್ ಡಿ ಶೇರ್’, ‘ಮುಂಬೈ ಹೀರೋಸ್’, ‘ಭೋಜ್‌ಪುರಿ ದಬಾಂಗ್ಸ್’, ‘ತೆಲುಗು ವಾರಿಯರ್ಸ್’ ಸೇರಿದಂತೆ 7 ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
‘ಕರ್ನಾಟಕ ಬುಲ್ಡೋಜರ್ಸ್’ ತಂಡ
ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್, ಕಾರ್ತಿಕ್ ಜಯರಾಮ್, ಡಾರ್ಲಿಂಗ್ ಕೃಷ್ಣ, ಸುನಿಲ್ ರಾವ್, ರಾಜೀವ್ ಹನು, ಚಂದನ್ ಕುಮಾರ್, ಪ್ರತಾಪ್ ನಾರಾಯಣ್, ನಿರೂಪ್ ಭಂಡಾರಿ, ಅನೂಪ್ ಭಂಡಾರಿ, ಕರಣ್ ಆರ್ಯನ್, ಮಂಜುನಾಥ್ ಗೌಡ, ಸಾಗರ್ ಗೌಡ, ಅಲಕಾನಂದ, ತ್ರಿವಿಕ್ರಮ್,
‘CCL-2025’ ಹೊಸ ವೇಳಾಪಟ್ಟಿ
ಬೆಂಗಳೂರಿನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ‘ಚೆನ್ನೈ ರಿನ್ಹೋಸ್’ ಮತ್ತು ‘ಬೆಂಗಾಲ್ ಟೈಗರ್ಸ್’ ಮುಖಾಮುಖಿಯಾಗಲಿದ್ದು, ಅದೇ ದಿನ ನಡೆಯುವ ಎರಡನೇ ಪಂದ್ಯದಲ್ಲಿ ‘ಕರ್ನಾಟಕ ಬುಲ್ಡೋಜರ್ಸ್’ ಮತ್ತು ‘ತೆಲುಗು ವಾರಿಯರ್ಸ್’ ಸೆಣೆಸಲಿವೆ. ನಾಲ್ಕು ತಂಡಗಳಾದ ‘ಭೋಜ್‌ಪುರಿ ದಬಾಂಗ್ಸ್’, ‘ಬೆಂಗಾಲ್ ಟೈಗರ್ಸ್’, ‘ಮುಂಬೈ ಹೀರೋಸ್’ ಮತ್ತು ‘ಪಂಜಾಬ್ ಡಿ ಶೇರ್’ ಫೆಬ್ರವರಿ 9 ರಂದು ದೆಹಲಿಯಲ್ಲಿ ಆಡಲಿವೆ. ಆನಂತರದ ಪಂದ್ಯಗಳು ಕ್ರಮವಾಗಿ ಹೈದರಾಬಾದ್, ಕಟಕ್, ಸೂರತ್‌ನಲ್ಲಿ ನಡೆಯಲಿವೆ. ಮಾರ್ಚ್ 1ರಂದು ಸೆಮಿಫೈನಲ್ ಪಂದ್ಯ ನಡೆಯಲಿದ್ದು ಮತ್ತು ಮಾರ್ಚ್ 2ರಂದು ಫೈನಲ್ ಪಂದ್ ನಡೆಯಲಿದೆ. ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳಿಗೆ ಸ್ಥಳವನ್ನು ಇನ್ನೂ ಅಂತಿಮಗೊಳಿಸಿಲ್ಲ.
‘ಕರ್ನಾಟಕ ಬುಲ್ಡೋಜರ್ಸ್’ ಪಂದ್ಯಗಳ ವಿವರ :
8 ಫೆಬ್ರವರಿ – ‘ತೆಲುಗು ವಾರಿಯರ್ಸ್’ – ಬೆಂಗಳೂರು
14 ಫೆಬ್ರವರಿ – ‘ಚೆನ್ನೈ ರೈನೋಸ್’ – ಹೈದರಾಬಾದ್
15 ಫೆಬ್ರವರಿ – ‘ಮುಂಬೈ ಹೀರೋಸ್’ – ಹೈದರಾಬಾದ್
22 ಫೆಬ್ರವರಿ – ‘ಪಂಜಾಬ್ ಶೇರ್’ – ಸೂರತ್