Pop Corner

ಶ್ರೀಮುರಳಿ ‘ಪರಾಕ್’ಗೆ ಚರಣ್ ರಾಜ್ ಸಂಗೀತ ಮೆರುಗು!

ರೋರಿಂಗ್ ಸ್ಟಾರ್ ‘ಪರಾಕ್’ ಸಿನೆಮಾ ಚರಣ್‌ ರಾಜ್‌ ಸಂಗೀತ

ಬಹುಬೇಡಿಕೆಯ ಸಂಗೀತ ನಿರ್ದೇಶಕ‌ನ ಕೈಯಲ್ಲಿ ಮತ್ತೊಂದು ಚಿತ್ರ

ಮೊದಲ ಬಾರಿಗೆ ಶ್ರೀಮುರಳಿ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್‌

ಹರಿಕೃಷ್ಣ, ಅರ್ಜುನ್ ಜನ್ಯ, ಅಜನೀಶ್‌ ಲೋಕನಾಥ್‌ ನಂತರ ಕನ್ನಡ ಚಿತ್ರರಂಗದಲ್ಲಿ, ಸಂಗೀತ ಲೋಕದಲ್ಲಿ ಹೊಸ ಅಲೆ ಎಬ್ಬಿಸುತ್ತಿರುವವರು ಸಂಗೀತ ಸಂಯೋಜಕ ಚರಣ್ ರಾಜ್. ಕಳೆದ ಯದಾರು ವರ್ಷಗಳಿಂದ ಈಚೆಗೆ ಚರಣ್‌ ಸಂಗೀತ ನಿರ್ದೇಶಕನ ಹಾಡುಗಳಿಗೆ ಪ್ರತ್ಯೇಕ ಕೇಳುಗ ವರ್ಗವೇ  ಹುಟ್ಟುಕೊಂಡಿದೆ. ಕನ್ನಡದಲ್ಲಿ ಈಗಾಗಲೇ ‘ಟಗರು’, ‘ಸಲಗ’, ‘ಸಪ್ತ ಸಾಗರದಾಚೆ ಎಲ್ಲೋ’, ‘ಭೀಮ’, ‘ಬ್ಯಾಡ್ ಮ್ಯಾನರ್ಸ್’, ‘ಹೆಡ್ ಬುಷ್’, ‘ಜೇಮ್ಸ್’ ಮುಂತಾದ ಸಿನೆಮಾಗಳಿಗೆ ಸಂಗೀತ ಸಂಯೋಜಿಸಿರುವ ಕನ್ನಡ ಚಿತ್ರರಂಗದ ಪ್ರತಿಭಾವಂತ ಗೀತ ಸಂಯೋಜಕ ಚರಣ್‌ ರಾಜ್‌ ಈಗ ‘ಪರಾಕ್’ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಕ್ಲಾಸ್‌ ಮತ್ತು ಮಾಸ್‌ ಎರಡಕ್ಕೂ ಸೈ… 

ಹೌದು, ಸದ್ಯಕ್ಕೆ ಕನ್ನಡ ಚಿತ್ರರಂಗದಲ್ಲಿ ಕ್ಲಾಸ್ ಹಾಗೂ ಮಾಸ್ ಎರಡು ಜಾನರ್ ಸಿನೆಮಾಗಳಿಗೆ ಅದ್ಭುತ ಸಂಗೀತ ಮೆರುಗು ನೀಡುವ ಈ ಮ್ಯೂಸಿಕ್ ಮಾಂತ್ರಿಕ ಚರಣ್‌ ರಾಜ್‌ ಇದೀಗ ರೋರಿಂಗ್ ಸ್ಟಾರ್ ಶ್ರೀಮುರಳಿ ಮುಂದಿನ ಸಿನೆಮಾ ‘ಪರಾಕ್’ ಗೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಯುವ ಪ್ರತಿಭೆ ಹಾಲೇಶ್ ಕೋಗುಂಡಿ ‘ಪರಾಕ್’ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಈ ಚಿತ್ರದ ಮೂಲಕ ನಿರ್ದೇಶಕರಾಗಿ‌‌ ಮೊದಲ ಹೆಜ್ಜೆ ಇಡುತ್ತಿದ್ದಾರೆ. ಶ್ರೀಮುರಳಿ ಈ ಹಿಂದೆನೂ ಹೊಸಬರ ಜೊತೆಗೆ ಕೆಲಸ ಮಾಡಿದ್ದಾರೆ. ಈಗಲೂ ಅದನ್ನ ಫಾಲೋ ಮಾಡುತ್ತಿದ್ದಾರೆ. ದೊಡ್ಡ ಬಜೆಟ್‌ನಲ್ಲಿ ‘ಪರಾಕ್’ ಚಿತ್ರ ತಯಾರಾಗುತ್ತದೆ. ‘ಬ್ರ್ಯಾಂಡ್ ಸ್ಟುಡಿಯೋಸ್’ ಬ್ಯಾನರ್ ಅಡಿ ಈ ‘ಪರಾಕ್’ ಸಿನೆಮಾ ನಿರ್ಮಾಣವಾಗುತ್ತಿದೆ. ತಾರಾಬಳಗವೂ ದೊಡ್ಡದೇ ಇರಲಿದೆ. ಸದ್ಯ ‘ಪರಾಕ್‌ʼ ಚಿತ್ರದ ಪ್ರೀ-ಪ್ರೊಡಕ್ಷನ್‌ ಕೆಲಸಗಳು ಭರದಿಂದ ನಡೆಯುತ್ತಿದ್ದು, ಮಾರ್ಚ್ ನಿಂದ ‘ಪರಾಕ್’ ಶೂಟಿಂಗ್ ಶುರುವಾಗಲಿದೆ. ಸದ್ಯ ವಿಭಿನ್ನ ಹಾಡುಗಳು ಹಾಗೂ ಹಿನ್ನೆಲೆ ಸಂಗೀತದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಲೆ ಎಬ್ಬಿಸಿರುವ ಮ್ಯೂಸಿಕ್ ಡೈರೆಕ್ಟರ್‌ ಚರಣ್ ರಾಜ್ ‘ಪರಾಕ್’ ಸಿನೆಮಾ ತಂಡ ಸೇರಿರುವುದು ನಿರೀಕ್ಷೆ ಹೆಚ್ಚಿಸಿದ್ದು, ಹಾಡುಗಳು ಹೇಗಿರಲಿವೆ ಎಂಬುದು ಮುಂದಿನ ವರ್ಷ ಗೊತ್ತಾಗಲಿದೆ.

Related Posts

error: Content is protected !!