Pop Corner

‘ರಾಕ್ಷಸ’ನಿಗೆ ಅಜನೀಶ್ ಲೋಕನಾಥ್ ಸಂಗೀತ

‘ಮ್ಯಾಕ್ಸ್’ ಬಳಿಕ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಮ್ಯೂಸಿಕ್ 

‘ರಾಕ್ಷಸ’ ಸಿನಿಮಾಗೆ ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ

ಕನ್ನಡ ಚಿತ್ರರಂಗದ ಬಹುಬೇಡಿಕೆಯ ಸಂಗೀತ ನಿರ್ದೇಶಕರಲ್ಲೊಬ್ಬರು ಅಜನೀಶ್ ಲೋಕನಾಥ್. ಸ್ಯಾಂಡಲ್ ವುಡ್ ಮಾತ್ರವಲ್ಲ ಪರಭಾಷಾ ಚಿತ್ರರಂಗದಲ್ಲಿಯೂ ಅಜನೀಶ್ ಸಂಗೀತದ ಕಂಪು ಚೆಲ್ಲುತ್ತಿದ್ದಾರೆ. ‘ಕಾಂತಾರ’, ‘ಕಿರಿಕ್ ಪಾರ್ಟಿ’, ‘ವಿಕ್ರಾಂತ್ ರೋಣ’, ‘ರಂಗಿತರಂಗ’, ‘ಬೆಲ್ ಬಾಟಂ’ ಇತ್ತೀಚೆಗೆ ಬಂದ ‘ಯುಐ’, ‘ಮ್ಯಾಕ್ಸ್’ ಸಿನಿಮಾಗಳ ಮ್ಯೂಸಿಕ್ ಮಾಂತ್ರಿಕ ಅಜನೀಶ್ ಲೋಕನಾಥ್ ಈಗ ‘ರಾಕ್ಷಸ’ ಸಿನಿಮಾ ಅಂಗಳಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ಪರಭಾಷಾ ಚಿತ್ರರಂಗದಲ್ಲಿಯೂ ಬ್ಯುಸಿಯಾಗಿರುವ ಅಜನೀಶ್ ಇತ್ತೀಚೆಗೆ ಸಂಗೀತ‌ ಸಂಯೋಜಿಸಿರುವ ‘ಮಹಾರಾಜ’ ಸಿನಿಮಾ ಸೂಪರ್ ಹಿಟ್ ಕಂಡಿದೆ. ಮಾಸ್ ಜೊತೆಗೆ ಕ್ಲಾಸ್ ಸಿನಿಮಾಗಳಿಗೂ ಸೊಗಸಾದ ಸಂಗೀತ ಕೊಡುವ ಅಜನೀಶ್ ಲೋಕನಾಥ್ ಪ್ರಜ್ವಲ್ ದೇವರಾಜ್ ಗೂ ಸಂಗೀತ ಬಲ ನೀಡುತ್ತಿದ್ದಾರೆ. ಹೆಚ್. ಲೋಹಿತ್ ಸಾರಥ್ಯದಲ್ಲಿ ಮೂಡಿ ಬರ್ತಿರುವ ‘ರಾಕ್ಷಸ’ ಸಿನಿಮಾಗೆ ಅಜನೀಶ್ ಲೋಕನಾಥ್ ಟ್ಯೂನ್ ಹಾಕ್ತಿದ್ದು, ಬಹಳ ಇಷ್ಟಪಟ್ಟು ಕಥೆ ಅಜನೀಶ್ ಒಪ್ಪಿಕೊಂಡಿದ್ದಾರೆ.

ಫೆಬ್ರವರಿ 26ರಂದು ಶಿವರಾತ್ರಿ ಹಬ್ಬದ ವಿಶೇಷವಾಗಿ ‘ರಾಕ್ಷಸ’ ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ತೆರೆಗೆ ಬರ್ತಿದೆ. ಸಿನಿಮಾದಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಸೋನಲ್ ಮೊಂಥೆರೋ ಜೋಡಿಯಾಗಿ ನಟಿಸಿದ್ದಾರೆ. ಶೋಭಾರಾಜ್, ವತ್ಸಲಾಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಹೀಗೆ ಇನ್ನು ಹಲವು ಕಲಾವಿದರು ಈ ಚಿತ್ರದಲ್ಲಿದ್ದಾರೆ. ಸಿನಿಮಾಗೆ ಜೇಬಿನ್ ಪಿ. ಜೋಕಬ್ ಕ್ಯಾಮರಾವರ್ಕ್ ಮಾಡಿದ್ದಾರೆ. ವಿನೋದ್ ಸಾಹಸ ನಿರ್ದೇಶನ ಇದೆ. ರವಿಚಂದ್ರನ್ ಸಿ. ಸಂಕಲನ ಮಾಡಿದ್ದಾರೆ. ‘ಶಾನ್ವಿ ಎಂಟರ್‌ಟೇನ್ಮೆಂಟ್’ ಮೂಲಕ ದೀಪು ಬಿ. ಎಸ್. ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ನವೀನ್ ಮತ್ತು ಮಾನಸಾ ಕೆ. ಕೂಡ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ.

Related Posts

error: Content is protected !!