ಹೊರಬಂತು ‘ಭುವನಂ ಗಗನಂ’ ಟ್ರೇಲರ್

ಎಮೋಶನ್ಸ್ ಜೊತೆಗೆ ಎಂಟರ್‌ಟೈನ್ಮೆಂಟ್ ಕಂಟೆಂಟ್
ಪ್ರೇಮಿಗಳ ದಿನದಂದು ‘ಭುವನಂ ಗಗನಂ’ ಚಿತ್ರ ತೆರೆಗೆ
ಕ್ಲಾಸ್ ಕಂಟೆಂಟ್‌ಗೆ ಮಾಸ್ ಟಚ್
ನಟರಾದ ಪ್ರಮೋದ್ ಮತ್ತು ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿರುವ ‘ಭುವನಂ ಗಗನಂ’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯಗಳಲ್ಲಿ ನಿರತವಾಗಿರುವ ಚಿತ್ರತಂಡ, ಇದೀಗ ‘ಭುವನಂ ಗಗನಂ’ ಚಿತ್ರದ ಟ್ರೇಲರ್ ಅನ್ನು ಬಿಡುಗಡೆ ಮಾಡಿದೆ. ‘ಆನಂದ ಆಡಿಯೋ’ ಯು-ಟ್ಯೂಬ್ ಚಾನೆಲ್‌ನಲ್ಲಿ ‘ಭುವನಂ ಗಗನಂ’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಲವ್, ಸೆಂಟಿಮೆಂಟ್, ಎಮೋಶನ್ಸ್, ಆಕ್ಷನ್ ಜೊತೆಗೆ ಒಂದಷ್ಟು ಮಾಸ್ ಕಮರ್ಷಿಯಲ್ ಎಂಟರ್‌ಟೈನ್ಮೆಂಟ್ ಅಂಶಗಳನ್ನು ಒಳಗೊಂಡ ‘ಭುವನಂ ಗಗನಂ’ ಟ್ರೇಲರ್ ಸೋಶಿಯಲ್ ಮೀಡಿಯಾಗಳಲ್ಲಿ ಸಿನಿಪ್ರಿಯರ ಗಮನ ಸೆಳೆಯುತ್ತಿದೆ.
‘ಭುವನಂ ಗಗನಂ’ ಚಿತ್ರದ ಟ್ರೇಲರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
ಬೃಹತ್ ಕಲಾವಿದರ ತಾರಾಗಣ
‘ಭುವನಂ ಗಗನಂ’ ಚಿತ್ರದಲ್ಲಿ ಪ್ರಮೋದ್, ಪೃಥ್ವಿ ಅಂಬಾರ್ ಜೊತೆಗೆ ಶರತ್ ಲೋಹಿತಾಶ್ವ, ಕೆ. ಎಸ್. ಶ್ರೀಧರ್, ಅಚ್ಯುತ ಕುಮಾರ್, ಪ್ರಕಾಶ್ ತುಮ್ಮಿನಾಡು ಹೀಗೆ ದೊಡ್ಡ ಕಲಾವಿದರ ದಂಡೇ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದೆ. ಗಿರೀಶ್ ಮೂಲಿಮನಿ ನಿರ್ದೇಶನದಲ್ಲಿ, ಎಂ. ಮುನೇಗೌಡ ನಿರ್ಮಾಣದಲ್ಲಿ ಈ ಚಿತ್ರ ಮೂಡಿಬಂದಿದೆ. ಸದ್ಯ ಟ್ರೇಲರ್ ಬಿಡುಗಡೆಯಾಗಿ ಹೊರಬಂದಿರುವ ‘ಭುವನಂ ಗಗನಂ’ ಚಿತ್ರ ಇದೇ ಫೆಬ್ರವರಿ 14ರಂದು ರಾಜ್ಯಾದ್ಯಂತ ತೆರೆಗೆ ಬರುತ್ತಿದೆ.