Pop Corner

ಚಿತ್ರೀಕರಣ ಪೂರೈಸಿದ ‘ಗಣಿ ಬಿ. ಕಾಂ ಪಾಸ್-2’ ಚಿತ್ರ

ಸದ್ದಿಲ್ಲದೆ ಶೂಟಿಂಗ್ ಮುಗಿಸಿದ ಚಿತ್ರತಂಡ

‘ನಮ್ ಗಣಿ ಬಿ. ಕಾಂ ಪಾಸ್’ ಚಿತ್ರದ ಸೀಕ್ವೆಲ್‌ ತೆರೆಗೆ ಬರಲು ಸಿದ್ಧತೆ

ಸದ್ದು-ಗದ್ದಲವಿಲ್ಲದೆ ಶುರುವಾದ ‘ನಮ್ ಗಣಿ ಬಿ. ಕಾಂ ಪಾಸ್’ ಮುಂದುವರೆದ ಕಥೆ

2019ರಲ್ಲಿ ‘ನಮ್ ಗಣಿ ಬಿ. ಕಾಂ ಪಾಸ್’ ಎಂಬ ಬಹುತೇಕ ಹೊಸ ಪ್ರತಿಭೆಗಳ ಚಿತ್ರ ತೆರೆಗೆ ಬಂದಿದ್ದು ನಿಮಗೆ ನೆನಪಿರಬಹುದು. ನವಿರಾದ ಕಾಮಿಡಿ ಜೊತೆಗೆ ಒಂದಷ್ಟು ಸೆಂಟಿಮೆಂಟ್‌ ಅಂಶಗಳನ್ನು ಇಟ್ಟುಕೊಂಡು ತೆರೆಗೆ ಬಂದಿದ್ದ ಈ ಚಿತ್ರ ಫ್ಯಾಮಿಲಿ ಆಡಿಯನ್ಸ್‌ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಸಿನೆಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಸಕ್ಸಸ್‌ ಕಾಣದಿದ್ದರೂ, ಸಿನೆಮಾವನ್ನು ವೀಕ್ಷಿಸಿದ ಪ್ರೇಕ್ಷಕರು ಮತ್ತು ವಿಮರ್ಶಕರಿಂದ ‘ನಮ್ ಗಣಿ ಬಿ. ಕಾಂ ಪಾಸ್’ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

ಇದೀಗ ಅದೇ ‘ನಮ್ ಗಣಿ ಬಿ. ಕಾಂ ಪಾಸ್’ ಸಿನೆಮಾದ ಮುಂದುವರೆದ ಭಾಗ (ಸೀಕ್ವೆಲ್‌) ಆಗಿ ‘ಗಣಿ ಬಿ. ಕಾಂ ಪಾಸ್-2’ ಸಿನೆಮಾ ತೆರೆಗೆ ಬರಲು ತಯಾರಾಗುತ್ತಿದೆ. ಕಳೆದ ವರ್ಷ ಅಂದರೆ, 2024ರಲ್ಲಿ ಸದ್ದಿಲ್ಲದೆ ಈ ಸಿನೆಮಾದ ಕೆಲಸಗಳನ್ನು ಶುರು ಮಾಡಿದ್ದ ಚಿತ್ರತಂಡ, ಇದೀಗ ಯಾವುದೇ ಸದ್ದು-ಗದ್ದಲವಿಲ್ಲದೆ ‘ಗಣಿ ಬಿ. ಕಾಂ ಪಾಸ್-2′ ಸಿನೆಮಾದ ಚಿತ್ರೀಕರಣವನ್ನೂ ಪೂರ್ಣಗೊಳಿಸಿದೆ.

ಇನ್ನು’ನಮ್ ಗಣಿ ಬಿ. ಕಾಂ ಪಾಸ್’ ಸಿನೆಮಾದ ಮುಂದುವರೆದ ಭಾಗವಾಗಿ ‘ಗಣಿ ಬಿ. ಕಾಂ ಪಾಸ್-2’ ಸಿನೆಮಾ ತೆರೆಗೆ ಬರುತ್ತಿದ್ದು, ಹಿಂದಿನ ಸಿನೆಮಾದ ಕಥೆ ಈ ಸಿನೆಮಾದಲ್ಲಿ ಮುಂದುವರೆಯುತ್ತಿದೆ. ಹೀಗಾಗಿ ‘ನಮ್ ಗಣಿ ಬಿ. ಕಾಂ ಪಾಸ್’ ಸಿನೆಮಾದಲ್ಲಿದ್ದ ಬಹುತೇಕ ಪಾತ್ರಗಳು, ಅದನ್ನು ನಿರ್ವಹಿಸಿದ್ದ ಕಲಾವಿದರು ‘ಗಣಿ ಬಿ. ಕಾಂ ಪಾಸ್-2’ ಸಿನೆಮಾದಲ್ಲೂ ಮುಂದುವರೆಯಲಿದ್ದಾರೆ.

ಫ್ಯಾಮಿಲಿ ಎಂಟರ್‌ಟೈನ್ಮೆಂಟ್‌ಗೆ ಅಭಿಷೇಕ್‌ ಶೆಟ್ಟಿ ಆ್ಯಕ್ಷನ್‌-ಕಟ್‌

ಇನ್ನು ‘ಗಣಿ ಬಿ. ಕಾಂ ಪಾಸ್-2’ ಒಂದು ಫ್ಯಾಮಿಲಿ ಡ್ರಾಮಾ ಚಿತ್ರವಾಗಿದ್ದು, ಹಲವಾರು ಭಾವನೆಗಳನ್ನು,‌ ಕೌಟುಂಬಿಕ ಮೌಲ್ಯಗಳನ್ನು ಕಥೆಯ ಮೂಲಕ ತೆರೆಗೆ ತರುತ್ತಿದ್ದೇವೆ ಎಂಬುದು ಚಿತ್ರತಂಡದ ಮಾತು. ‘ನಮ್ ಗಣಿ ಬಿ. ಕಾಂ ಪಾಸ್’ ಸಿನೆಮಾದಲ್ಲಿ ತೆರೆಮೇಲೆ ನಾಯಕನಾಗಿ ಕಾಣಿಸಿಕೊಂಡಿದ್ದ, ಜೊತೆಗೆ ಈ ಸಿನೆಮಾವನ್ನು ನಿರ್ದೇಶಿಸಿದ್ದ ಅಭಿಷೇಕ್‌ ಶೆಟ್ಟಿ ‘ಗಣಿ ಬಿ. ಕಾಂ ಪಾಸ್-2’ ಸಿನೆಮಾದಲ್ಲೂ ನಾಯಕ ನಟನಾಗಿ ಕಾಣಿಸಿಕೊಂಡಿದ್ದು, ಈ ಸಿನೆಮಾಕ್ಕೆ ಆ್ಯಕ್ಷನ್‌-ಕಟ್‌ ಮಾಡುತ್ತಿದ್ದಾರೆ.

ಇದೇ ವರ್ಷಾಂತ್ಯಕ್ಕೆ ‘ಗಣಿ ಬಿ. ಕಾಂ ಪಾಸ್-2’ ಕಥೆ ತೆರೆಗೆ

‘ಗಣಿ ಬಿ. ಕಾಂ ಪಾಸ್-2’ ಸಿನೆಮಾದಲ್ಲಿ ನಾಯಕ ನಟ ಅಭಿಷೇಕ್ ಶೆಟ್ಟಿ ಅವರೊಂದಿಗೆ ಹೃತಿಕಾ ಶ್ರೀನಿವಾಸ್, ದಿವ್ಯಾ ಸುರೇಶ್, ಸುಧಾ‌ ಬೆಳವಾಡಿ,‌ ಜಹಾಂಗೀರ್, ರಘು ಪಾಂಡೇಶ್ವರ, ಬೆನಕ ನಂಜಪ್ಪ, ದಿನೇಶ್‌ ಮಂಗಳೂರು, ಮಂಜುನಾಥ ಹೆಗ್ಡೆ ಮುಂತಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ‘ಗಣಿ ಬಿ. ಕಾಂ ಪಾಸ್-2’ ಸಿನೆಮಾದ ಹಾಡುಗಳಿಗೆ ಆನಂದ್ ರಾಜವಿಕ್ರಮ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಚಿತ್ರವನ್ನು ಬಿ. ಎಸ್‌ ಪ್ರಶಾಂತ್ ಶೆಟ್ಟಿ ಮತ್ತು ಪ್ರಶಾಂತ್ ರೆಡ್ಡಿ ‘ಅದ್ವಿ ಕ್ರಿಯೇಷನ್ಸ್’ ಹಾಗೂ ‘786 ಫಿಲಂಸ್’ ಲಾಂಛನದಲ್ಲಿ ನಿರ್ಮಿಸುತ್ತಿದ್ದಾರೆ‌. ಎಲ್ಲಾ ಅಂದುಕೊಂಡಂತೆ ನಡೆದರೆ, ಇದೇ ವರ್ಷದ ಕೊನೆಗೆ ‘ಗಣಿ ಬಿ. ಕಾಂ ಪಾಸ್-2’ ಸಿನೆಮಾವನ್ನು ಪ್ರೇಕ್ಷಕರ ಮುಂದೆ ತರುವ ಯೋಜನೆಯಲ್ಲಿದೆ ಚಿತ್ರತಂಡ.

Related Posts

error: Content is protected !!