ನಾನಿ ‘ಹಿಟ್-3’ ಟೀಸರ್ ರಿಲೀಸ್

‘ಹಿಟ್-3’ ಟೀಸರ್ ನಲ್ಲಿ ಮಾಸ್ ರೂಪ ತಾಳಿದ ನಾನಿ
ನ್ಯಾಚುರಲ್ ಸ್ಟಾರ್ ಬರ್ತಡೇ ದಿನವೇ ‘ಹಿಟ್-3’ ಟೀಸರ್ ಬಿಡುಗಡೆ
ಸೀರಿಯಲ್ ಕಿಲ್ಲರ್ ಇನ್ವೆಸ್ಟಿಗೇಶನ್ ಟೀಸರ್
ತೆಲುಗಿನಲ್ಲಿ ರೊಮ್ಯಾಂಟಿಕ್ ಸಿನೆಮಾಗಳ ಜೊತೆಗೆ ಮಾಸ್ ಅವತಾರಕ್ಕೂ ಸೈ ಎನಿಸಿಕೊಳ್ಳುವಂಥ ನಟ ನ್ಯಾಚುರಲ್ ಸ್ಟಾರ್ ನಾನಿ. ಇದೇ ಫೆ. 24 ರಂದು ನಾನಿ ತಮ್ಮ ಅಭಿಮಾನಿಗಳ ಜೊತೆ ಅದ್ಧೂರಿಯಾಗಿ ಜನ್ಮ ದಿನವನ್ನು ಆಚರಿಸಿಕೊಂಡರು. ಇದೇ ವೇಳೆ ನಾನಿ ಅವರ ಹುಟ್ಟುಹಬ್ಬದ ವಿಶೇಷವಾಗಿ ಅವರ ಮುಂಬರುವ ‘ಹಿಟ್-3’ ಸಿನೆಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ತೆಲುಗಿನ ಜೊತೆಯಲ್ಲಿ ಕನ್ನಡ, ತಮಿಳು, ಹಿಂದಿ ಹಾಗೂ ತಮಿಳು ಭಾಷೆಯಲ್ಲೂ ‘ಹಿಟ್-3’ ಸಿನೆಮಾದ ಟೀಸರ್ ಬಿಡುಗಡೆ ಮಾಡಲಾಗಿದೆ. ಇನ್ನು ‘ಹಿಟ್-3’ ಟೀಸರಿನಲ್ಲಿ ಅನಾಮಿಕ ಸೀರಿಯಲ್ ಕಿಲ್ಲರ್ ಒಬ್ಬನನ್ನು ಹಿಡಿಯೋದಕ್ಕೆ ನಡೆಯುವ ಇನ್ವೆಸ್ಟಿಗೇಶನ್ ಸುತ್ತ ‘ಹಿಟ್-3’ ಸಿನೆಮಾದ ಕಥೆ ಸಾಗಲಿದ್ದು, ಅರ್ಜುನ್ ಸರ್ಕಾರ್ ಎಂಬ ಪಾತ್ರದಲ್ಲಿ ನಾನಿ ಮಾಸ್ ಅವತಾರದಲ್ಲಿ ಅಬ್ಬರಿಸಿದ್ದಾರೆ.
‘ಹಿಟ್-3’ ಸಿನೆಮಾದ ಟೀಸರ್ ವಿಡಿಯೋವನ್ನು ವೀಕ್ಷಿಸಲು ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಬಹುದು…
‘ಹಿಟ್’ ಫ್ರಾಂಚೈಸಿಯಿಂದ ಬಂದ ಮತ್ತೊಂದು ಚಿತ್ರ
ಅಂದಹಾಗೆ, ‘ಹಿಟ್-3’ ಇದು ‘ಹಿಟ್’ ಫ್ರಾಂಚೈಸಿ ಇಂದ ಬರುತ್ತಿರುವ ಸಿನೆಮಾ. ಈ ಚಿತ್ರಕ್ಕೆ ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ‘ಹಿಟ್’ ಮೊದಲನೇ ಸಿನೆಮಾದಲ್ಲಿ ವಿಶ್ವಕ್ ಸೇನ್ ಹೀರೋ ಆಗಿ ನಟಿಸಿದ್ದಾರೆ. ‘ಹಿಟ್-2’ ರಲ್ಲಿ ಅಡವಿಶೇಷು ನಟಿಸಿದ್ದಾರೆ. ‘ಹಿಟ್’ ಮೂರನೇ ಫ್ರಾಂಚೈಸಿಯಲ್ಲಿ ನಾನಿ ಹೀರೋ ಆಗಿ ಕಾಣಿಸಿಕೊಂಡಿದ್ದು, ಈ ಸಿನೆಮಾದಲ್ಲಿ ನಾನಿ ಸಖತ್ ರಡಗ್ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ‘ಹಿಟ್-3’ ಸಿನೆಮಾದಲ್ಲಿ ನಾಯಕ ನಟ ನಾನಿಗೆ ಜೋಡಿಯಾಗಿ ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಅನೇಕ ಕಲಾವಿದರ ಬೃಹತ್ ತಾರಾಗಣ ಈ ಸಿನೆಮಾದಲ್ಲಿದೆ. ಪ್ರಶಾಂತಿ ತಿಪಿರ್ನೇನಿ ನಿರ್ಮಾಣದಲ್ಲಿ ‘ಹಿಟ್-3’ ಚಿತ್ರ ಮೂಡಿ ಬಂದಿದ್ದು, ಮಿಕ್ಕಿ ಜೆ. ಮೇಯರ್ ಈ ಸಿನೆಮಾದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. ‘ಹಿಟ್-3’ ಸಿನೆಮಾಕ್ಕೆ ಸಾನು ಜಾನ್ ವರ್ಗೀಸ್ ಛಾಯಾಗ್ರಹಣ ಹಾಗೂ ಕಾರ್ತಿಕ್ ಶ್ರೀನಿವಾಸ್ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ‘ಹಿಟ್-3’ ಸಿನೆಮಾದ ಟೀಸರ್ ಮಾಸ್ ಆಡಿಯನ್ಸ್ ಗಮನ ಸೆಳೆಯುವಂತಿದ್ದು, ಟೀಸರ್ ಮೈ ಜುಮ್ ಅನ್ನೋ ಹಾಗೆ ಇದೆ. ಟೀಸರಿನಲ್ಲಿ ಅದ್ಧೂರಿ ಮೇಕಿಂಗ್ ಎದ್ದು ಕಾಣುತ್ತಿದೆ ಎಂಬ ಅಭಿಪ್ರಾಯ ನೋಡುಗರಿಂದ ವ್ಯಕ್ತವಾಗುತ್ತಿದೆ. ಸದ್ಯ ‘ಹಿಟ್-3’ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಇದೇ 2025ರ ಮೇ 1ರಂದು ‘ಹಿಟ್-3’ ಚಿತ್ರ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.