ಮಾರ್ಚ್ 7ಕ್ಕೆ ‘ರಾಕ್ಷಸ’ ರಿಲೀಸ್…

ತಾಂತ್ರಿಕ ಸಮಸ್ಯೆಯಿಂದ ‘ರಾಕ್ಷಸ’ ಮುಂದೂಡಿಕೆ
‘ಶಿವರಾತ್ರಿ ಹಬ್ಬ’ದ ಬದಲು ಮಾರ್ಚ್ 7ಕ್ಕೆ ‘ರಾಕ್ಷಸ’ ತೆರೆಗೆ
ಮಾ.7 ಕ್ಕೆ ಪ್ರಜ್ವಲ್ ದೇವರಾಜ್ ನಟನೆಯ ‘ರಾಕ್ಷಸ’ ಬಿಡುಗಡೆ
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, ಇದೇ ‘ಶಿವರಾತ್ರಿ ಹಬ್ಬ’ದ ವಿಶೇಷವಾಗಿ ನಟ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ‘ರಾಕ್ಷಸ’ ಚಿತ್ರ ಅದ್ದೂರಿಯಾಗಿ ಬರಬೇಕಿತ್ತು. ಆದರೆ ‘ರಾಕ್ಷಸ’ ಚಿತ್ರದ ಬಿಡುಗಡೆ ಎರಡು-ಮೂರು ದಿನಗಳ ಮುನ್ನ ‘ರಾಕ್ಷಸ’ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಹಠಾತ್ತಾಗಿ ಮುಂದೂಡಿದೆ. ಹೌದು, ಕೆಲವು ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ‘ರಾಕ್ಷಸ’ ಚಿತ್ರದ ಬಿಡುಗಡೆಯನ್ನು ಚಿತ್ರತಂಡ ಮುಂದಕ್ಕೆ ಹಾಕಿದ್ದು, ‘ಶಿವರಾತ್ರಿ ಹಬ್ಬ’ದ ಬದಲಾಗಿ (ಫೆ. 26)ರ ಬದಲಾಗಿ ಮಾರ್ಚ್ 07ಕ್ಕೆ ‘ರಾಕ್ಷಸ’ ಚಿತ್ರ ತೆರೆಗೆ ಬರುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ನೀಡಿರುವ ಚಿತ್ರತಂಡ, ಫೆ. 26ರ ‘ಶಿವರಾತ್ರಿ ಹಬ್ಬ’ದ ಬದಲು ಮಾರ್ಚ್ 7ಕ್ಕೆ ‘ರಾಕ್ಷಸ’ ಚಿತ್ರವನ್ನು ತೆರೆಗೆ ತರುವುದಾಗಿ ತಿಳಿಸಿದೆ.
ಟೈಮ್ ಲೂಪ್ ಹಾರರ್ ‘ರಾಕ್ಷಸ’
‘ಶಾನ್ವಿ ಎಂಟರ್‌ಟೇನ್ಮೆಂಟ್’ ಬ್ಯಾನರ್ ಮೂಲಕ ದೀಪು ಬಿ. ಎಸ್. ನಿರ್ಮಿಸಿರುವ, ನವೀನ್ ಮತ್ತು ಮಾನಸಾ ಕೆ. ಸಹ ನಿರ್ಮಾಣದಲ್ಲಿ ಮೂಡಿ ಬಂದಿರುವ ‘ರಾಕ್ಷಸ’ ಚಿತ್ರಕ್ಕೆ ಲೋಹಿತ್ ಹೆಚ್. ನಿರ್ದೇಶನ ಮಾಡಿದ್ದಾರೆ. ಪ್ರತಿ ಸಿನಿಮಾಗಳಲ್ಲಿಯೂ ಭಿನ್ನ-ವಿಭಿನ್ನ ಪಾತ್ರಗಳ ಮೂಲಕ ರಂಜಿಸುವ ‘ಡೈನಾಮಿಕ್ ಪ್ರಿನ್ಸ್’ ಪ್ರಜ್ವಲ್ ದೇವರಾಜ್ ‘ರಾಕ್ಷಸ’ ಚಿತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಬಹಳ ವಿಭಿನ್ನವಾದ ಪಾತ್ರದಲ್ಲಿ ಡೈನಾಮಿಕ್ ಪ್ರಿನ್ಸ್ ಕಾಣಿಸಿಕೊಂಡಿದ್ದಾರೆ. ಲೋಹಿತ್ ಎಚ್. ನಿರ್ದೇಶನದಲ್ಲಿ ‘ಟೈಮ್ ಲೂಪ್ ಹಾರರ್’ ಚಿತ್ರದಲ್ಲಿ ಸೋನಲ್ ಮೊಂಥೆರೋ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ಶೋಭಾರಾಜ್, ವತ್ಸಲಾ ಮೋಹನ್, ಸಿದ್ಲಿಂಗು ಶ್ರೀಧರ್, ಆರ್ನ ರಾಥೋಡ್ ಹೀಗೆ ಇನ್ನು ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ.
ಚಿತ್ರಕ್ಕೆ ಜೇಬಿನ್ ಪಿ. ಜೋಕಬ್ ಕ್ಯಾಮರಾವರ್ಕ್ ಮಾಡಿದ್ದಾರೆ. ವಿನೋದ್ ಸಾಹಸ ನಿರ್ದೇಶನ ಇದೆ. ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ಕನ್ನಡದ ಈ ಚಿತ್ರವನ್ನು ಹೈದ್ರಾಬಾದ್ ಅಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಶೇಕಡ 80 ರಷ್ಟು ಭಾಗವನ್ನಇಲ್ಲಿಯ ‘ರಾಮೋಜಿ ರಾವ್ ಫಿಲ್ಮ್ ಸಿಟಿ’ಯಲ್ಲಿಯೇ ತೆಗೆಯಲಾಗಿದೆ. ಇತರ ಶೇಕಡ 20 ರಷ್ಟು ಭಾಗವನ್ನ ಬೆಂಗಳೂರು, ರಾಮೇಶ್ವರಂ, ಹಾಗೂ ಗೋವಾದಲ್ಲಿ ಚಿತ್ರೀಕರಣ ಮಾಡಲಾಗಿದೆ.